'ದೇವರು ಒಂದೇ ಪಾರ್ಟಿಗೆ ಸೀಮಿತ ಅಲ್ಲ..' ಪ್ರಧಾನಿ ಮೋದಿಯನ್ನ ದೇವರಿಗೆ ಹೋಲಿಸಿದ ರಾಧಾ ಮೋಹನ್ ದಾಸ್!
ದೇವರು ಎಲ್ಲರಿಗೂ ಒಂದೇ, ದೇವರು ಒಂದೇ ಪಾರ್ಟಿಗೆ ಸೀಮಿತ ಅಲ್ಲ ಎನ್ನುವ ಮೂಲಕ ಪ್ರಧಾನಿ ಮೋದಿಯನ್ನ ದೇವರಿಗೆ ಹೋಲಿಸಿದ ರಾಧಾ ಮೋಹನ್ ಅಗರವಾಲ್ ಅವರು, ಭಾರತದ 140 ಕೋಟಿ ಜನ ಮೋದಿ ಮೇಲೆ ಅಪಾರವಾದ ಗೌರವ ಇಟ್ಟು ಕೊಂಡಿದ್ದಾರೆ. ಅರ್ಧಕ್ಕೂ ಹೆಚ್ಚು ಜನ ಕಾಂಗ್ರೆಸ್ ಕಾರ್ಯಕರ್ತರೂ ಮೋದಿಗೇ ಮತ ಹಾಕ್ತಾರೆ ಎಂದರು.
ಚಾಮರಾಜನಗರ (ಏ.7): ನರೇಂದ್ರ ಮೋದಿ ಇಡೀ ದೇಶದ ಪ್ರಧಾನಿ. ಅವರ ಫೋಟೊವನ್ನು ಈಶ್ವರಪ್ಪ ಮಾತ್ರ ಅಲ್ಲ, ಕಾಂಗ್ರೆಸ್ ಬೇಕಾದರೂ ಮೋದಿ ಫೋಟೊ ಬಳಸಿಕೊಳ್ಳಲಿ ಎಂದು ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ತಿರುಗೇಟು ನೀಡಿದರು.
ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಕೆಎಸ್ ಈಶ್ವರಪ್ಪ ಪ್ರಧಾನಿ ನರೇಂದ್ರ ಮೋದಿ ಫೋಟೊ ಬಳಸಿಕೊಳ್ಳುತ್ತಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನವರಿಗೆ ಈಗ ಬುದ್ಧಿ ಬಂದಿದೆ. ಕಾಂಗ್ರೆಸ್ ಬೇಕಾದ್ರೆ ತನ್ನ ಪ್ರಚಾರದಲ್ಲಿ ರಾಹುಲ್ ಗಾಂಧಿ ಬದಲು ಪ್ರಧಾನಿ ಮೋದಿ ಫೋಟೊ ಬಳಸಿಕೊಳ್ಳಲಿ. ರಾಹುಲ್ ಫೋಟೊ ಬಳಸಿದ್ರೆ ಬೇಲ್ ಕೂಡ ಸಿಗೊಲ್ಲ, ಬೇಲ್ ಸಿಕ್ಕಿದ್ರೂ ರದ್ದಾಗುತ್ತೆ ಎಂದು ವ್ಯಂಗ್ಯ ಮಾಡಿದರು.
ಸರ್ಕಾರ ಒಂದು ಕೋಮಿನ, ಗುಂಪಿನ ಸ್ವತ್ತಲ್ಲ : ಪೇಜಾವರ ಶ್ರೀ
ದೇವರು ಎಲ್ಲರಿಗೂ ಒಂದೇ, ದೇವರು ಒಂದೇ ಪಾರ್ಟಿಗೆ ಸೀಮಿತ ಅಲ್ಲ ಎನ್ನುವ ಮೂಲಕ ಪ್ರಧಾನಿ ಮೋದಿಯನ್ನ ದೇವರಿಗೆ ಹೋಲಿಸಿದ ರಾಧಾ ಮೋಹನ್ ಅಗರವಾಲ್ ಅವರು, ಭಾರತದ 140 ಕೋಟಿ ಜನ ಮೋದಿ ಮೇಲೆ ಅಪಾರವಾದ ಗೌರವ ಇಟ್ಟು ಕೊಂಡಿದ್ದಾರೆ. ಅರ್ಧಕ್ಕೂ ಹೆಚ್ಚು ಜನ ಕಾಂಗ್ರೆಸ್ ಕಾರ್ಯಕರ್ತರೂ ಮೋದಿಗೇ ಮತ ಹಾಕ್ತಾರೆ. ಅದ್ರೆ ಸದ್ಯ ಅವರು ಓಡಾಡ್ತಿರೋದು ಕಾಂಗ್ರೆಸ್ ಜೊತೆಗೆ ಮಾತ್ರ. ಇನ್ನು ಈಶ್ವರಪ್ಪನವರನ್ನು ಮೋದಿ ಹಾಗೂ ಬಿಜೆಪಿ ಬಗ್ಗೆ ಪ್ರಚಾರ ಮಾಡೋದಕ್ಕೆ ಬಿಟ್ಟಿದ್ದೀವಿ ಮಾಡ್ಲಿ, ಇದರಿಂದ ಶಿವಮೊಗ್ಗದಲ್ಲಿ ರಾಘವೇಂದ್ರ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ ರಾಜಕೀಯ ನಿವೃತ್ತಿ ಘೋಷಣೆ? ಹೇಳಿದ್ದೇನು?
ಇನ್ನು ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗಿರುವುದಕ್ಕೆ ಮುನಿಸಿಕೊಂಡಿರುವ ಮಾಧುಸ್ವಾಮಿ ಬಗ್ಗೆಯೂ ಪ್ರಸ್ತಾಪಿಸಿದ ರಾಧಾ ಮೋಹನ್ ದಾಸ್, ಮಾಧುಸ್ವಾಮಿ ಭಿನ್ನಮತೀಯರು ಅನ್ನೋದು ನನಗೆ ಗೊತ್ತಿರಲಿಲ್ಲ. ಅವರ ಎಲ್ಲಾ ಟೀಂ ನಮ್ಮೊಂದಿಗಿದೆ. ಈಶ್ವರಪ್ಪ ಅವರನ್ನ ಕೂಡ ನಾನು ಭಿನ್ನಮತೀಯ ಅಂದುಕೊಳ್ಳಲ್ಲ. ಈಶ್ವರಪ್ಪ ನಾಮ ಪತ್ರ ಸಲ್ಲಿಸುವ ದಿನ ಬರಲಿ ಅವಾಗ ನೋಡಿಕೊಳ್ಳೋಣ. ಅವರು ನಾಮ ಪತ್ರ ಸಲ್ಲಿಸಿ ವಾಪಸ್ ತೆಗೆದುಕೊಳ್ಳದೆ ಇದ್ರೆ ಭಿನ್ನಮತಿಯ ಅಂತಾ ಪರಿಗಣಿಸ್ತೀವಿ ಎಂದರು. ಸುಮಲತಾ ಅವರು ಕುಮಾರಸ್ವಾಮಿ ಜೊತೆ ಪ್ರಚಾರ ಮಾಡ್ತಾರೆ ಈಗಾಗ್ಲೇ ಸಭೆ ನಡೆದಿದೆ. ಸುಮಲತಾ ಕೇವಲ ಮಂಡ್ಯ ಅಲ್ಲ ಎಲ್ಲಾ ಕಡೆಯ ಪ್ರಚಾರದಲ್ಲೂ ಭಾಗವಹಿಸ್ತಾರೆ ಎಂದರು.