Congress Padayatra: ಮೇಕೆದಾಟು ರ್ಯಾಲಿಗೆ ಬಂದವರಿಗೆ ಕಾಂಗ್ರೆಸ್ಸಿಂದ ಪ್ರಮಾಣಪತ್ರ: ಡಿಕೆಶಿ
* ಹೋರಾಟದಲ್ಲಿ ಪಾಲ್ಗೊಂಡವರೆಲ್ಲ ಇತಿಹಾಸ ಸೇರುತ್ತಾರೆ
* ಪಾದಯಾತ್ರೆಗೆ ಬನ್ನಿ: ಎಚ್‌ಡಿಕೆಗೆ ಡಿಕೆಶಿ ಆಹ್ವಾನ
* ನಮ್ಮ ಸರ್ಕಾರದಲ್ಲೇ ಡಿಪಿಆರ್ ತಯಾರಾಗಿ ಕೇಂದ್ರದಿಂದ ಒಪ್ಪಿಗೆ
ಮದ್ದೂರು(ಡಿ.29): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜ.9ರಿಂದ ಮೇಕೆದಾಟಿನಿಂದ(Mekedatu) ಬೆಂಗಳೂರಿಗೆ(Bengaluru) ಪಾದಯಾತ್ರೆ ಹಮ್ಮಿಕೊಂಡಿದ್ದು, ಇದೊಂದು ಪಕ್ಷಾತೀತ ಹೋರಾಟವಾಗಿದೆ. ನಾಯಕತ್ವ ಮಾತ್ರ ಕಾಂಗ್ರೆಸ್‌ನದ್ದಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಿವಪುರದಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದ ಅವರು, ವರುಣಾ ನಾಲಾ ಚಳವಳಿಯ ಚಡ್ಡಿ ಮೆರವಣಿಗೆ ಮಾದರಿಯಲ್ಲೇ ಇದೊಂದು ಐತಿಹಾಸಿಕ ಹೋರಾಟ. ಯೋಜನೆ ಜಾರಿ ವಿಷಯದಲ್ಲಿ ಅದೇ ಕಿಚ್ಚನ್ನು ಬಿಜೆಪಿ ಸರ್ಕಾರದ(BJP Government) ವಿರುದ್ಧ ತೋರ್ಪಡಿಸಬೇಕು. ಸ್ವಾತಂತ್ರ್ಯ ಹೋರಾಟದಂತೆ ಮೇಕೆದಾಟು ಹೋರಾಟದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ನೀಡಲಾಗುವುದು. ಹೋರಾಟದಲ್ಲಿ ಪಾಲ್ಗೊಂಡವರೆಲ್ಲರೂ ಇತಿಹಾಸ ಸೇರುತ್ತಾರೆ ಎಂದರು.
Mekedatu Project: ಮೇಕೆದಾಟು ರ‍್ಯಾಲಿ ಯಶಸ್ಸಿಗೆ ಕಾವೇರಿಗೆ ಡಿಕೆಶಿ ಪೂಜೆ
ಕಾವೇರಿ ಕಣಿವೆ ಪ್ರದೇಶದ ಜನರ ಹಿತದೃಷ್ಟಿಯಿಂದ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ರೂಪಿಸಲಾಯಿತು. ನಮ್ಮ ಸರ್ಕಾರದಲ್ಲೇ ಡಿಪಿಆರ್ ತಯಾರಾಗಿ ಕೇಂದ್ರದಿಂದ ಒಪ್ಪಿಗೆ ಪಡೆದುಕೊಂಡಿದೆ. ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆಯುವುದು ಬಾಕಿ ಇದೆ. ಯೋಜನೆಗೆ ಅರಣ್ಯ ಸೇರಿ 5000 ಎಕರೆ ಜಮೀನು ಹೋಗಲಿದೆ. ಕಾವೇರಿ ನೀರು ನಮ್ಮ ಹಕ್ಕು, ಅದು ನಮ್ಮ ನೀರು, ನಮ್ಮ ಜಮೀನು, ನಮ್ಮ ಹಣ ಅದಕ್ಕೆ ಬೇರೆಯವರು ತಕರಾರು ತೆಗೆಯುವಂತಿಲ್ಲ ಎಂದು ಹೇಳಿದರು.
ಪಾದಯಾತ್ರೆಗೆ ಬನ್ನಿ: ಎಚ್‌ಡಿಕೆಗೆ ಡಿಕೆಶಿ ಆಹ್ವಾನ
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ(Padayatra) ಪಕ್ಷಾತೀತ ಹೋರಾಟವಾಗಿದ್ದು, ಇದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು(HD Kumaraswamy) ಪಾಲ್ಗೊಳ್ಳಬಹುದು ಎಂದು ಡಿ.ಕೆ.ಶಿವಕುಮಾರ್(DK Shivakumar) ಬಹಿರಂಗವಾಗಿ ಆಹ್ವಾನ ನೀಡಿದರು.
ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್‌ನವರು ಹೈಜಾಕ್ ಮಾಡಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಪಾದಯಾತ್ರೆಯ ಬಗ್ಗೆ ಟೀಕಿಸುವುದನ್ನು ಬಿಟ್ಟು ಅದರಲ್ಲಿ ಪಾಲ್ಗೊಳ್ಳುವ ಮೂಲಕ ಶಕ್ತಿ ತುಂಬಲಿ ಎಂದು ಮನವಿ ಮಾಡಿದರು.
ಕಾವೇರಿ ಕಣಿವೆ ಪ್ರದೇಶದ ಜನರಿಗೆ ಅನುಕೂಲವಾಗುವಂತಹ ಹೋರಾಟ ಇದಾಗಿದೆ. ಇದರಲ್ಲಿ ರಾಜಕೀಯ ದುರುದ್ದೇಶವೂ ಇಲ್ಲ, ಸ್ವಾರ್ಥಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ. ಜನಪರವಾಗಿ ಇರುವಂತಹ ಈ ಹೋರಾಟದಲ್ಲಿ ಯಾವುದೇ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಪಾಲ್ಗೊಳ್ಳಬಹುದು ಎಂದರು.
ಕಾಂಗ್ರೆಸ್ ಪಾದಯಾತ್ರೆ ಹಿಂದಿನ ಕಾರಣ ಬಿಚ್ಚಿಟ್ಟ ಸಚಿವ ಸೋಮಣ್ಣ
ರಾಮನಗರ: ಮೇಕೆದಾಟು ಯೋಜನೆ (Makedatu Project) ತಾರ್ಕಿಕ ಅಂತ್ಯಕ್ಕೆ ಬಂದಿದೆ. ಈಗ ಎಲ್ಲಿ ಯೋಜನೆಯ ಕ್ರೆಡಿಟ್ ಬಿಜೆಪಿಗೆ(BJP) ಹೋಗುತ್ತದೆಯೋ ಎಂದು ಕಾಂಗ್ರಸ್ ಪಾದಯಾತ್ರೆ (Congress Padayatre) ಹಮ್ಮಿಕೊಂಡಿದೆ ಎಂದು ವಸತಿ ಸಚಿವ ವಿ. ಸೋಮಣ್ಣ (V Somanna) ಟಾಂಗ್ ಕೊಟ್ಟಿದ್ದಾರೆ.
Mekedatu Project: ಜೆಡಿಎಸ್ ಪಾದಯಾತ್ರೆ ಕಾಂಗ್ರೆಸ್‌ನಿಂದ ಹೈಜಾಕ್: HDK
ರಾಮನಗರ(Ramanagara) ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಮಂಗಳವಾರ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುವ ಮೂಲಕ ರಾಜಕೀಯ ಮಾಡುತ್ತಿದೆ. ಈ ಹಿಂದೆ ಅವರೇ ಸರ್ಕಾರದಲ್ಲಿ ಇದ್ದರು. ಈ ಯೋಜನೆ ಆರಂಭಿಸಲು ಕಾನೂನು ತೊಡಕು ಮುಗಿಸಿ, ತಾಂತ್ರಿಕ ಸಮಸ್ಯೆಗಳನ್ನು ಮುಗಿಸಿ ಒಂದು ಹಂತಕ್ಕೆ ಬಂದಿದೆ. ಇದನ್ನು ತಿಳಿದುಕೊಂಡು ಬಿಜೆಪಿ ಅವರಿಗೆ ಹೆಸರು ಬರಬಾರದು ಎಂದು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕನಕಪುರ ತಾಲೂಕಿನವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ಈ ಯೋಜನೆ ಆರಂಭಿಸುತ್ತೇವೆ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಹೀಗಾಗಿ ಈ ಯೋಜನೆ ಮಾಡುತ್ತೇವೆ. ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಸರ್ಕಾರ ಮಾಡುತ್ತದೆ ಎಂದು ಹೇಳಿದರು.
ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದೆ, ಏನೋ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ನಿನ್ನೆ ಮೊನ್ನೆಯದ್ದಲ್ಲ. ಮಾಜಿ ಪ್ರಧಾನಿ ದೇವೇಗೌಡರು ಸಿಎಂ ಆದಾಗಲಿಂದಲೂ ಇದೆ. ಇದೀಗ ಒಂದು ಹಂತಕ್ಕೆ ಬಂದಿದೆ. ಮೇಕೆದಾಟು ಯೋಜನೆ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಕಾನೂನು ಚೌಕಟ್ಟಿನಲ್ಲಿ ಮಾಡಬೇಕಾಗಿದ್ದು, ಕಾನೂನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಇದೀಗ ಕಾಂಗ್ರೆಸ್‌ನವರಿಗೆ ಜ್ಞಾನೋದಯ ಆಗಿದೆ ಎಂದು ದೂರಿದರು.