Mekedatu Project: ಮೇಕೆದಾಟು ರ‍್ಯಾಲಿ ಯಶಸ್ಸಿಗೆ ಕಾವೇರಿಗೆ ಡಿಕೆಶಿ ಪೂಜೆ
ಮಡಿಕೇರಿ(ಡಿ.25): ಮೇಕೆದಾಟು(Mekedatu) ಅಣೆಕಟ್ಟೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 9ರಿಂದ ನಡೆಸಲಿರುವ ಪಾದಯಾತ್ರೆ ಯಶಸ್ವಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ಕಾವೇರಿ ಉಗಮಸ್ಥಳ ತಲಕಾವೇರಿಗೆ(Talakaveri) ಪೂಜೆ ಸಲ್ಲಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 9ರ ವೇಳೆಗೆ ಆಗಮಿಸಿ, ಸೂತಕದ ಹಿನ್ನೆಲೆಯಲ್ಲಿ ತಲಕಾವೇರಿಯ ಸ್ನಾನ ಕೊಳದ ವರೆಗೆ ಆಗಮಿಸಿ ಮೆಟ್ಟಿಲಿನಲ್ಲಿ ಕುಳಿತು ಕಾವೇರಿ(Kaveri) ತಾಯಿಗೆ ನಮಿಸಿದ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸಂಕಲ್ಪಪೂಜೆ ನೆರವೇರಿಸಿದರು.
ಇದಕ್ಕೂ ಮೊದಲು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ(Shri Bhagandeshwara Temple) ಭೇಟಿ ನೀಡಿದರು. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೂಜೆ(Worship) ಸಲ್ಲಿಸಿದ ಡಿಕೆಶಿ
ಕೇರಳದ(Kerala) ಚಂಡೆ ವಾದ್ಯ, ಕೊಡವ ಸಾಂಪ್ರದಾಯಿಕ ದುಡಿಕೊಟ್ಟ ಮೂಲಕ ಡಿ.ಕೆ.ಶಿವಕುಮಾರ್(DK Shivakumar) ಅವರನ್ನು ಸ್ವಾಗತಿಸಲಾಯಿತು.
ಮೇಕೆದಾಟು ಪಾದಯಾತ್ರೆಗೆ(Padayatra) ಎಲ್ಲ ಸಂಘಟನೆಗಳಿಗೂ ಪಕ್ಷಾತೀತವಾಗಿ ಆಹ್ವಾನ ನೀಡಿದ್ದೇವೆ. ಮೇಕೆದಾಟಿನಿಂದ ಬೆಂಗಳೂರಿನ(Bengaluru) ಕೆಂಗೇರಿವರೆಗೂ ಸುಮಾರು 100 ಕಿ.ಮೀ., ನಂತರ ಬೆಂಗಳೂರಲ್ಲಿ 50 ಕಿ.ಮೀ. ಪಾದಯಾತ್ರೆ ಮಾಡುತ್ತೇವೆ. ಜ.19ರಂದು ಸಭೆ ನಡೆಯುತ್ತದೆ. ಅಷ್ಟರಲ್ಲಿ ಮುಖ್ಯಮಂತ್ರಿಗಳು 25 ಸಂಸದರೊಂದಿಗೆ ತೆರಳಿ ಕೇಂದ್ರ ಸರ್ಕಾರದ(Central Government) ಪರಿಸರ ಇಲಾಖೆ ಅನುಮತಿ ಪಡೆಯಲಿ ಎಂದು ಆಗ್ರಹಿಸಿದ ಡಿಕೆಶಿ