ಕೇಂದ್ರ ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪಬೇಕು: ಸಂಸದ ಮುನಿಸ್ವಾಮಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಆಯೋಜಿಸಲಾಗಿದೆ ಎಂದು ಸಂಸದರಾದ ಎಸ್.ಮುನಿಸ್ವಾಮಿ ತಿಳಿಸಿದರು.

Central government schemes should reach everyone Says MP S Muniswamy gvd

ಟೇಕಲ್ (ಜ.01): ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಆಯೋಜಿಸಲಾಗಿದೆ ಎಂದು ಸಂಸದರಾದ ಎಸ್.ಮುನಿಸ್ವಾಮಿ ತಿಳಿಸಿದರು. ಅವರು ಟೇಕಲ್‌ನ ಕೆ ಜಿ ಹಳ್ಳಿಯಲ್ಲಿ ವಿಕಸಿತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಕೇಂದ್ರ ಸರ್ಕಾರವು ಮೋದಿಯವರ ನೇತೃತ್ವದಲ್ಲಿ ಜನರ ಅಭಿವೃಧ್ಧಿಗೆ ನೂರಾರು ಯೋಜನೆಗಳನ್ನು ರೂಪಿಸಿದೆ ಎಂದು ವಿವರಿಸಿದರು.

ಎಲ್ಲರಿಗೂ ಯೋಜನೆಗಳು ತಲುಪಬೇಕು: ಕೇಂದ್ರ ಸರ್ಕಾರದ ಈ ಯೋಜನೆಗಳ ಲಾಭವನ್ನು ಪಡೆಯುವ ಫಲಾನುಭವಿಗಳು ದೇಶದ ಪ್ರತಿ ಮನೆಯಲ್ಲೂ ಇದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ಜನರಿಗೂ ತಲುಪಿಸುವುದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ನಡೆಸುತ್ತಿರುವುದಾಗಿ ಸಂಸದರು ಹೇಳಿದರು..

ತಾವು ಸಂಸದರಾದ ಬಳಿಕ ಟೇಕಲ್ ರೈಲು ನಿಲ್ದಾಣವು ಅಭಿವೃದ್ಧಿಪಡಿಸುವ ಪಣ ತೊಟ್ಟಿದ್ದು ಇಲ್ಲಿ ರೈಲ್ವೆ ಸ್ಟೇಷನ್ ಮಾಸ್ಟರ್ ಉಳಿದುಕೊಳ್ಳಲು ವಸತಿಗೃಹ ಹಾಗೂ ಸಾರ್ವಜನಿಕರ ಅನುಕೂಲವಾಗುಂತೆ ಕೆಲವು ರೈಲುಗಳನ್ನು ನಿಲುಗಡೆ ಮಾಡಲಾಗಿದೆ. ರೈಲು ನಿಲ್ದಾಣದಲ್ಲಿ ಹೊಸದಾಗಿ ತಂಗುದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಶೌಚಾಲಯ ಕಾಮಗಾರಿ ನಡೆಯುತ್ತಿದೆ. ಮಾಲೂರು ರೈಲು ನಿಲ್ದಾಣದ ಅಭಿವೃದ್ಧಿಗೆ ಕೇಂದ್ರದಿಂದ ೭೦ ಕೋಟಿ ಹಣ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದೆ ಎಂದರು.

ಸಾಮಾಜಿಕ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ: ಸಿದ್ದರಾಮಯ್ಯ

ಕೇಂದ್ರದ ಯೋಜನೆ ನರೇಗಾ: ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಿಂದ ಗ್ರಾಪಂ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಅದು ಕೇಂದ್ರ ಸರ್ಕಾರದ ಹಣವಾಗಿದೆ. ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳ ನಿರ್ಮಾಣ ಮೋದಿಯವರ ಮಹದಾಸೆಯ ಯೋಜನೆಯಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ದಿಶಾ ಸಮಿತಿಯ ಸದಸ್ಯ ಸೂರ್ಯನಾರಾಯಣರಾವ್ ಕೆ ಜಿ ಹಳ್ಳಿ ಗ್ರಾ ಪಂ ಅಧ್ಯಕ್ಷ ಎಸ್ ಆರ್ ಯಲ್ಲಪ್ಪ ಉಪಾದ್ಯಕ್ಷ ಮಮತಾ ಶಶಿಧರ್, ಸದಸ್ಯರಾದ ವೇದಾವತಿ ನಾರಾಯಣಸ್ವಾಮಿ, ಸೋಮಶೇಖರ್, ಸೊಣ್ಣಪ್ಪ, ವೆಂಕಟೇಶಪ್ಪ ವಿಜಯ್‌ಕುಮಾರ್, ನರಸಿಂಹಮೂರ್ತಿ, ಪಿಡಿಓ ಮಂಜುಳ, ಮುಖಂಡರಾದ ರಮೇಶ್‌ಗೌಡ, ಗೋಪಾಲಕೃಷ್ಣ, ಟಿ.ಪಿ.ವೆಂಕಟೇಶ್, ಪ್ರಶಾಂತ್, ಸುರೇಶ್ ವೈಧ್ಯಾಧಿಕಾರಿ ಡಾ.ಪ್ರಕಾಶ್, ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ರಾಧ, ತೋಟಗಾರಿಕೆ ಇಲಾಖೆಯ ಕಾವ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿರಿದ್ದರು.

Latest Videos
Follow Us:
Download App:
  • android
  • ios