ಬೆಂಗಳೂರು, (ಮಾ.27): ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಕುಟುಂಬಸ್ಥರು ಮಾಧ್ಯಮದ ಎದುರು ಡಿಕೆ ಶಿವಕುಮಾರ್​ ಅವರೇ ನಮ್ಮ ಮಗಳನ್ನು ಒತ್ತೆಯಾಳು ಮಾಡಿಕೊಂಡಿದ್ದಾರೆ ಗಂಭೀರ ಆರೋಪ ಮಾಡಿದ್ದಾರೆ.

ಇದರ ಬೆನ್ನಲ್ಲೇ ಸ್ವತಃ ಯುವತಿ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದು, ನನ್ನ ಕುಟುಂಬಸ್ಥರ ಮೇಲೆ ಅವರ ಪ್ರಭಾವ ಬೀರಿ ಅವರ ಬಾಯಲ್ಲಿ ಸುಳ್ಳು ಹೇಳಿಸಲಾಗುತ್ತಿದೆ ಎಂದು ದೂರಿದ್ದಾಳೆ.

 ಸಿ.ಡಿ ಲೇಡಿ ಪೋಷಕರ ಸುದ್ದಿಗೋಷ್ಠಿ: ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ

ನಿಜವಾಗಿಯೂ ಅನ್ಯಾಯವಾಗಿರುವುದು ನನಗೆ. ಮೋಸ ಮಾಡಿರುವವರು ಅವರು. ಅವರ ಮನೆಯವರನ್ನ ಯಾರೂ ಕರೆದುಕೊಂಡು ಹೋಗಿ ವಿಚಾರಣೆ ಮಾಡುತ್ತಿಲ್ಲ. ಅದರ ಬದಲು ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿ ಏನೇನೋ ಹೇಳಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
 
ಈ ಪ್ರಕರಣನ ಬೇರೆಯದ್ದೇ ರೀತಿಯಲ್ಲಿ ಟರ್ನ್​ ಮಾಡಲಾಗುತ್ತಿದೆ. ನ್ಯಾಯ ಸಿಗಬೇಕಾಗಿರುವುದು ನನಗೆ, ಮೊದಲು ನನ್ನ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ಅವರಿವರ ಬಗ್ಗೆ ಮಾತನಾಡುವುದು ಬೇಡ. ನನಗೆ ಅಲ್ಲಿ ಬಂದು ಹೇಳಿಕೆ ಕೊಡಲು ಹೆದರಿಕೆಯಾಗುತ್ತಿದೆ ಎಂದಿದ್ದಾಳೆ.

'11 ಸಾಕ್ಷಿಗಳಿವೆ..ಮಹಾನ್ ನಾಯಕನ ಹೆಸರು ಬಹಿರಂಗ.. 'ನಾನು ಗಂಡು..ಡಿಕೆಶಿ..!'

ಇಷ್ಟೊಂದು ಪ್ರಭಾವ ಬೀರಿ ನನ್ನ ಅಪ್ಪ ಅಮ್ಮನ ಬಾಯಿಯಲ್ಲೇ ಏನೇನೋ ಹೇಳಿಸಿದ್ದಾರೆ. ನಾನು ಬಂದರೆ ಇನ್ನು ಏನೇನು ಆಗುತ್ತದೆಯೋ? ಆದ್ದರಿಂದ ನಾನು ಸಿಎಂ ಯಡಿಯೂರಪ್ಪನವರಿಗೆ, ಗೃಹ ಸಚಿವ ಬೊಮ್ಮಾಯಿ ಅವರಿಗೆ, ಸಿದ್ದರಾಮಯ್ಯ ಅವರಿಗೆ, ಡಿಕೆ ಶಿವಕುಮಾರ್ ಅವರಿಗೆ ರಮೇಶ್​ ಕುಮಾರ್​ ಅವರಿಗೆ ಮನವಿ ಮಾಡ್ತೀನಿ. ನಾನು ನೇರವಾಗಿ ಬಂದು ನ್ಯಾಯಾಧೀಶರ ಎದುರಿಗೇ ಹೇಳಿಕೆ ಕೊಡ್ತೀನಿ. ಇದಕ್ಕೆ ನನಗೆ ಸಹಾಯ ಮಾಡಿ ಎಂದು ಯುವತಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾಳೆ.