"
Live Blog | ಬಿಜೆಪಿ ಷಡ್ಯಂತ್ರವನ್ನು ಎದುರಿಸುವ ಶಕ್ತಿ ನಮಗಿದೆ: ಡಿಕೆ ಸುರೇಶ್

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐವರು ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಡಿಕೆಶಿ ಮಾತ್ರವಲ್ಲದೇ ಸಹೋದರ, ಬೆಂಗಳೂರು ಗ್ರಾಮೀಣ ಸಂಸದ ಡಿಕೆ ಸುರೇಶ್ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ಬೆನ್ನಲ್ಲೇ ಅವರ ವಕೀಲ ವಿಕ್ರಮ್ ಕೂಡಾ ಡಿಕೆಶಿ ನಿವಾಸಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನ ಮನೆ ಹಾಗೂ ಮುಂಬೇ ಮನೆಯಲ್ಲಿ ಕ್ರಮವಾಗಿ 50 ಲಕ್ಷ ಹಾಗೂ 5 ಕೋಟಿ ರೂ. ಪತ್ತೆಯಾಗಿದೆ ಎಂಬ ಸುದ್ದಿ ಇದೆ. ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಡಿಕೆ ಬ್ರದರ್ಸ್ ಮೇಲೆ ಈಗಲೇ ಏಕೆ ಸಿಬಿಐ ರೈಡ್ ಆಯಿತು?
ಡಿಕೆ ಬ್ರದರ್ಸ್ ಮೇಲೆ ಈಗಲೇ ಏಕೆ ಸಿಬಿಐ ರೈಡ್ ಆಯಿತು?
"
ಡಿಕೆ ಬ್ರದರ್ಸ್ ಮೇಲೆ ಈಗಲೇ ಏಕೆ ಸಿಬಿಐ ರೈಡ್ ಆಯಿತು?
"
ಸಿಸಿಬಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ: ಡಿ.ಕೆ.ಸುರೇಶ್
ಸಿಸಿಬಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ: ಡಿ.ಕೆ.ಸುರೇಶ್
ಡಿಕೆಶಿ ನಿವಾಸದಲ್ಲಿ ಚಿನ್ನಾಭರಣ ವಶಕ್ಕೆ
ಡಿಕೆಶಿ ನಿವಾಸದಲ್ಲಿ ಚಿನ್ನಾಭರಣ ವಶಕ್ಕೆ
ಮಗಳ ಮದುವೆಗಾಗಿ ಖರೀದಿ ಮಾಡಿದ್ದ ಚಿನ್ನಾಭರಣ. ಚಿನ್ನಾಭರಣಕ್ಕೆದಾಖಲೆಗಳು ಇದ್ಯಾ ಎಂದು ಸಿಬಿಐ ಪರಿಶೀಲನೆ. ದಾಖಲೆಗಳು ಒದಗಿಸದಿದ್ದಲ್ಲಿ ಆಭರಣಗಳನ್ನ ವಶಕ್ಕೆ ಪಡೆಯುವ ಸಾಧ್ಯತೆ.

ಸಂಜೆ ನಾಲ್ಕು ಗಂಟೆ ವೇಳೆಗೆ ಡಿಕೆಶಿ ಭವಿಷ್ಯ ನಿರ್ಧಾರ
ಡಿಕೆಶಿ ಬ್ರದರ್ಸ್ ಮನೆಗಳ ಮೇಲೆ ಸಿಬಿಐ ದಾಳಿ ವಿಚಾರ
ಡಿಕೆಶಿ ಮನೆಯ ಮೊದಲ ಮತ್ತು ಮೂರನೇ ಮಹಡಿಯಲ್ಲಿ ಪರಿಶೀಲನೆ
ಡಿಕೆ ಸುರೇಶ್ ಮನೆಯಲ್ಲೂ ಸಿಬಿಐ ಪರಿಶೀಲನೆ
ಎಂಟು ಜನ ಸಿಬಿಐ ಅಧಿಕಾರಿಗಳಿಂದ ನಡೆಯುತ್ತಿರುವ ಶೋಧ ಕಾರ್ಯ
ದೆಹಲಿಯಿಂದ ಬಂದಿರುವ ತಂಡದಿಂದ ಡಿಕೆಶಿ ಮನೆಯಲ್ಲಿ ಶೋಧ ಕಾರ್ಯ
ಇನ್ನೇನು ಕೆಲ ಹೊತ್ತಿನಲ್ಲಿ ಪಂಚನಾಮೆ ಕಾರ್ಯ ಶುರು ಮಾಡಲಿರುವ ಸಿಬಿಐ ಅಧಿಕಾರಿಗಳು
ಬೆಂಗಳೂರು ಹಾಗೂ ದೆಹಲಿ ಸಿಬಿಐ ಅಧಿಕಾರಿಗಳು ಜಂಟಿಯಾಗಿ ನಡೆಸಿರುವ ದಾಳಿ

ಭ್ರಷ್ಟಾಚಾರ ಆರೋಪದಡಿ ದಾಖಲಾದ ದೂರು
"
ಡಿಕೆಶಿ ಮನೆ ಮೇಲೆ ದಾಳಿಗೆ ಕಾಂಗ್ರೆಸ್ಸಿಗರ ಆಕ್ರೋಶ
"
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ ಹುಬ್ಬಳ್ಳಿ ಧಾರವಾಡದಲ್ಲಿ ಪ್ರತಿಭಟನೆ
ಹುಬ್ಬಳ್ಳಿ; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿ ಖಂಡಿಸಿ ಹು-ಧಾ ಮಹಾನಗರ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಡಿಕೆಶಿ ಚುನಾವಣಾ ತಂತ್ರಕ್ಕೆ ಹೆದರಿ ಅವರ ವಿರುದ್ಧ ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದ ಡಿಸಿಎಂ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ನಡೆದಿರುವ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಹಾಗೂ ಇಡಿ ದಾಳಿ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಸಿಬಿಐ ದಾಳಿ ನಡೆದಿರಬಹುದು. ಹೀಗಾಗಿ ಇದಕ್ಕೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದರು.
ಸಮಾಜದಲ್ಲಿ ವ್ಯಕ್ತಿಗಿಂತ ವ್ಯವಸ್ಥೆಯೇ ದೊಡ್ಡದು. ಇದರಲ್ಲಿ ನಂಬಿಕೆ ಹೆಚ್ಚುವ ರೀತಿಯಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಸತ್ಯ ಏನೆಂದು ಹೊರಬರಲಿ. ಇನ್ನು ತನಿಖೆಗೆ ಸಹಕಾರ ನೀಡುವುದಾಗಿ ಸ್ವತಃ ಡಿಕೆಶಿ ಹೇಳಿದ್ದಾರೆ. ಅದರಂತೆ ಅವರು ಸಹಕಾರ ನೀಡಲಿ. ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಲು ಇದೊಂದು ಅವಕಾಶ. ಸಿಕ್ಕಿದ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಳ್ಳಲಿ ಎಂದು ಡಿಸಿಎಂ ಹೇಳಿದರು.
ಇಂಥ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಇದೊಂದು ರಾಜಕೀಯ ಪ್ರೇರಿತ ಎಂದು ಹೇಳುವ ಮೂಲಕ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಉಪ ಚುನಾವಣೆಗೂ ಈ ದಾಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"
ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ.
ಸಿಬಿಐ ದಾಳಿ ಬಹುತೇಕ ಅಂತ್ಯ
ಮನೆಯಿಂದ ಹೊರಡಲು ಸಿದ್ದತೆ ಮಾಡುಕೊಳ್ತಾ ಇರುವ ಸಿಬಿಐ ಅಧಿಕಾರಿಗಳು.
ಮನೆಯಲ್ಲಿ ದಾಳಿ ವೇಳೆ ದೊರೆತಿರುವ ವಸ್ತುಗಳ ಸಮೇತ ತೆರಳಲಿರುವ ಸಿಬಿಐ ಅಧಿಕಾರಿಗಳು
ಡಿಕೆಶಿ ಕೋಡಿಹಳ್ಳಿ ಮನೆ ಮೇಲೂ ಸಿಬಿಐ ದಾಳಿ
"
ಗೃಹಸಚಿವರಿಂದ ಸಿಎಂಗೆ ಮಾಹಿತಿ
ಡಿಕೆಶಿ ಮನೆ ಮೇಲಿನ ದಾಳಿ ವಿಚಾರ....
ದಾಳಿಯ ಬಗ್ಗೆ ಸಿಎಂಗೆ ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ.
ದಾಳಿ ಬಗ್ಗೆ 9 ಗಂಟೆಗೆ ಸಿಬಿಐನಿಂದ ಅಧಿಕೃತ ಮಾಹಿತಿ ನಮಗೆ ಗೊತ್ತಾಗಿದೆ.
ಸಿಬಿಐ ಅಧಿಕಾರಿಗಳ ಅಧಿಕೃತ ಮಾಹಿತಿ ಮೇರೆಗೆ ಡಿಕೆ ಬ್ರದರ್ಸ್ ನಿವಾಸ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ.
ಡಿಕೆಶಿ ಸ್ವಕ್ಷೇತ್ರ ಸೇರಿದಂತೆ ರಾಮನಗರ ಜಿಲ್ಲೆಯ ಹಲವೆಡೆ ಸೂಕ್ತ ಭದ್ರತೆ ಕಲ್ಪಿಸಲು ಎಸ್‌ಪಿಗೆ ಸೂಚಿಸಲಾಗಿದೆ, ಎಂದು ಮಾಹಿತಿ ನೀಡಿದ ಗೃಹ ಸಚಿವ.
ಸಿಎಂಗೆ ದೂರವಾಣಿ ಮೂಲಕ ಸಂಪೂರ್ಣ ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವರ ಮಾಹಿತಿ ಬಂದ ಮರುಕ್ಷಣದಲ್ಲೇ ದೇವನಹಳ್ಳಿ ರೆಸಾರ್ಟ್‌ನಲ್ಲಿ ಮೊಮ್ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಬ್ಯುಸಿ ಇದ್ದ ಸಿಎಂ ಬೆಂಗಳೂರಿಗೆ.
ಕಾವೇರಿ ನಿವಾಸಕ್ಕೆ ಆಗಲಿಸಿರುವ ಸಿಎಂ ಯಡಿಯೂರಪ್ಪ....
ಸಿಬಿಐ ಕಚೇರಿ, ಡಿಕೆಶಿ ಮನೆ ಮುಂದೆ ಬಿಗಿ ಬಂದೋಬಸ್ತ್
ಡಿಕೆಶಿ ಬಂಧನ ಸಾಧ್ಯತೆ ಹಿನ್ನೆಲೆಯಲ್ಲಿ ಸಿಬಿಐ ಕಛೇರಿ ಮುಂದೆ ಪೊಲೀಸರ ನಿಯೋಜನೆ. ಸಿಬಿಐ ಕಛೇರಿಗೆ ಡಿಕೆಶಿ ಕರೆ ತರುವ ಸಾಧ್ಯತೆ. ಒಂದು ಕೆಎಸ್ ಆರ್ ಪಿ ತುಕಡಿ, ಹೆಬ್ಬಾಳ ಪೊಲೀಸ್ ಠಾಣಾ ಹಾಗೂ RT ನಗರ ಪೊಲೀಸ್ ಠಾಣಾ ಸಿಬ್ಬಂದಿ ನಿಯೋಜನೆ.
ಶಿವಕುಮಾರ್ ಮುಂಬೈ ಮನೆಯಲ್ಲಿ 3 ಕೋಟಿ ಹಾಗೂ ಬೆಂಗಳೂರಿನ ದಿಲ್ಲಿ ಮನೆಯಲ್ಲಿ 50 ಲಕ್ಷ ವಶ ಪಡಿಸಿಕೊಂಡ ಸಿಐಬಿ ಅಧಿಕಾರಿಗಳು.
ಮಗನ ಮೇಲೆ ಬಹಳ ಪ್ರೀತಿ ಅದಕ್ಕೇ ದಾಳಿ!
ಡಿಕೆಶಿ ನಿವಾಸದ ಮೇಲಿನ ಸಿಬಿಐ ದಾಳಿ ಬಗ್ಗೆ ಅಕ್ರೋಶ ವ್ಯಕ್ತಪಡಿಸಿರುವ ಅವರ ವಯೋವೃದ್ಧ ತಾಯಿ, ಸರ್ಕಾರಕ್ಕೆ ನನ್ನ ಮಗನ ಮೇಲೆ ಬಹಳ ಪ್ರೀತಿ. ಹಾಗಾಗೇ ಒದೇ ಪದೇ ದಾಳಿ ನಡೆಸುತ್ತಿದ್ದಾರೆ ಎನ್ನುವ ಮೂಲಕ ತನಿಖಾ ಸಂಸ್ಥೆಗಳ ಮೇಲೆ ಕಿಡಿ ಕಾರಿದ್ದಾರೆ.
ಸಿಬಿಐಗೆ ಹೊಸ ವ್ಯಾಖ್ಯಾನ ನೀಡಿದ ಜೈರಾಮ್ ರಮೇಶ್
Central Bureau of Intimidation ಅಂದರೆ ಕೇಂದ್ರೀಯ ಎಚ್ಚರಿಕಾ ದಳವೆಂದ ಹಿರಿಯ ಕಾಂಗ್ರೆಸ್ಸಿಗ ಜೈರಾಮ್ ರಮೇಶ್
ದೆಹಲಿಯಿಂದ ಬಂದ ಸಿಬಿಐ ಅಧಿಕಾರಿಗಳು
ಡಿಕೆ ಸಹೋದರರ ಮನೆ ಮೇಲೆ ದಾಳಿ. ದೆಹಲಿ ರಿಜಿಸ್ಟ್ರೇಷನ್ ಗಾಡಿಯಲ್ಲಿ ಬಂದಿರುವ ಸಿಬಿಐ ಅಧಿಕಾರಿಗಳು.