ಬೆಂಗಳೂರು, (ಆ.01): ಕೊರೋನಾ ಸೋಂಕಿನಿಂದ ಮೃತಪಪಟ್ಟವರ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನಡೆಸುತ್ತಿಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಆರೋಪಿಸಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ನೀಡಿದ ದೂರನ್ನು ಮಾನವ ಹಕ್ಕುಗಳ ಆಯೋಗ ವಿಚಾರಣೆ ಕೈಗೆತ್ತಿಕೊಂಡಿದೆ.

ಈ ಸಂಬಂದ ರಾಜ್ಯ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಿರುವ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಿ.ಎಚ್.ವಘೇಲಾ ವಿಚಾರಣೆಗೆ ಹಾಜರಾಗಿ ಇನ್ನಷ್ಟು ಮಾಹಿತ ಹಾಗೂ ದಾಖಲೆಗಳನ್ನುಸಲ್ಲಿಸುವಂತೆ ಎಚ್.ಕೆ.ಪಾಟೀಲರಿಗೆ ಸೂಚಿಸಿದ್ದಾರೆ. 

ಬೆಂಗಳೂರಿನಲ್ಲಿ 10 ಸಾವಿರ ಕೊರೋನಾ ಸೋಂಕಿತರು ನಾಪತ್ತೆ: ಹೆಚ್.ಕೆ. ಪಾಟೀಲ

ಎಚ್.ಕೆ.ಪಾಟೀಲ ದೂರಿನನ್ವಯ  ಮಾನವಹಕ್ಕುಗಳ ಆಯೋಗ ಜುಲೈ 28 ರಂದು ಸಭೆ ಮಾಡಿದ್ದು, ಸಭೆಯಲ್ಲಿ ವಿಚಾರಣೆಗೆ ತಿರ್ಮಾನ ಕೈಗೊಂಡಿತ್ತು.

ಕರ್ನಾಟಕದಲ್ಲಿ ಕೋವಿಡ್ ರೋಗಿಗಳಿಗೆ ಸೂಕ್ತವಾದ ಅಂಬ್ಯುಲೆನ್ಸ್ ವ್ಯವಸ್ಥೆ ಸಿಗುತ್ತಿಲ್ಲ. ಸಕಾಲಕ್ಕೆ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲಾಗ್ತಿಲ್ಲ .ಅಂತ ಆಯೋಗಕ್ಕೆ ಮಾಹಿತಿ ಒದಗಿಸಲಾಗಿತ್ತು. ಜೊತೆಗೆ ಮೃತ ರೋಗಿಗಳನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡ್ತಿಲ್ಲ ಅಂತ ಪ್ರಸ್ತಾಪಿಸಲಾಗಿತ್ತು. ದೂರಿನಲ್ಲಿ ಇರುವ ಎಲ್ಲಾ ವಿವರಗಳನ್ನು ಮಾನ್ಯ ಮಾಡಿರುವ ರಾಜ್ಯ ಮಾನವಹಕ್ಕುಗಳ ಆಯೋಗ, ಸರ್ಕಾರದ ವಿರುದ್ಧ ವಿಚಾರಣೆ ನಡೆಸುವುದಾಗಿ ತಿಳಿಸಿದೆ