ವಿಜಯಪುರ(ಜು.31): ಬೆಂಗಳೂರಿನಲ್ಲಿ 10 ಸಾವಿರ ಕೊರೋನಾ ಸೋಂಕಿತರು ನಾಪತ್ತೆಯಾಗಿದ್ದಾರೆ. ಹೀಗೆ ನಾಪತ್ತೆಯಾದವರ ಬಗ್ಗೆ ಸರ್ಕಾರ 24 ಗಂಟೆಗಳಲ್ಲಿ ಉತ್ತರಿಸಲಿ. ಇಲ್ಲದಿದ್ದರೆ ತಕ್ಷಣವೇ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ ಆಗ್ರಹಿಸಿದ್ದಾರೆ. 

ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೊಷ್ಠಿ ನಡೆಸಿದ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಸಲಕರಣೆ ಖರೀದಿಯಲ್ಲಿ 4167 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಆದರೂ ಕೂಡಾ ಸರ್ಕಾರ ಲೆಕ್ಕ ಕೊಡುತ್ತಿಲ್ಲ. ಈಗ ಕೊರೋನಾದಲ್ಲೂ ಭ್ರಷ್ಟಾಚಾರ ಬಿಜೆಪಿ ಸರ್ಕಾರದ ಸಂಸ್ಕಾರ ಎಂದು ಲೇವಡಿ ಮಾಡಿದ್ದಾರೆ. 

ಕೊರೋನಾದಿಂದ ರಾಜ್ಯ ವಿಲ ವಿಲ ಒದ್ದಾಡುತ್ತಿದೆ ಆದ್ರೆ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ತಿಲ್ಲ'

ಬಿಜೆಪಿ ಸರ್ಕಾರದ ಹಗರಣದ ಕುರಿತು ದಾಖಲೆಗಳ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಈಗಲಾದರೂ ಈ ದಾಖಲೆಗಳ ಬಗ್ಗೆ ಲೆಕ್ಕ ಕೊಡಿ, ಕಾಂಗ್ರೆಸ್ ಆರೋಪಗಳಿಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಯೋಗ ರಚಿಸಿ ಎಂದು ರಾಜ್ಯ ಸರ್ಕಾರಕ್ಕೆ ಸಚಿವ ಎಚ್. ಕೆ. ಪಾಟೀಲ ಆಗ್ರಹಿಸಿದ್ದಾರೆ.  ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿ ನೀಡಿದ ಲೀಗಲ್ ನೋಟಿಸ್‌ಗೆ ಸೂಕ್ತ ಉತ್ತರ ನೀಡಲಲಿದ್ದೇವೆ ಎಂದು ಹೇಳಿದ್ದಾರೆ.