Asianet Suvarna News Asianet Suvarna News

2.5 ವರ್ಷ ಬಳಿಕ ಸಂಪುಟ ಬದಲಾವಣೆ ಖಚಿತ: ಮತ್ತೊಬ್ಬ ಕಾಂಗ್ರೆಸ್‌ ಶಾಸಕ..!

ಈಗ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವೇನೂ ಇಲ್ಲ. ಕಾಂಗ್ರೆಸ್‌ನಲ್ಲಿ ಸಚಿವರಾಗಲು ಬಹಳಷ್ಟು ಆಕಾಂಕ್ಷಿಗಳಿದ್ದೇವೆ. ಒಟ್ಟು 135 ಶಾಸಕರಿದ್ದೇವೆ. ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ. ಆದರೂ, ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆಲವರಿಗೆ ಅವಕಾಶ ಸಿಗಬೇಕಿದ: ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ 

Cabinet will Be Change after 2.5 years in Karnataka Says MLA Vinay Kulkarni grg
Author
First Published Oct 23, 2023, 4:21 AM IST

ಧಾರವಾಡ(ಅ.23): ‘ಎರಡೂವರೆ ವರ್ಷಗಳ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ಬದಲಾವಣೆ ಖಚಿತ. ಈ ಮಾತನ್ನು ಹೈಕಮಾಂಡ್‌ನವರೇ ನನಗೆ ಹೇಳಿದ್ದಾರೆ’ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.

ನಗರ ಹೊರವಲಯದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ನಿಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ಇದೆಯೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈಗ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವೇನೂ ಇಲ್ಲ. ಕಾಂಗ್ರೆಸ್‌ನಲ್ಲಿ ಸಚಿವರಾಗಲು ಬಹಳಷ್ಟು ಆಕಾಂಕ್ಷಿಗಳಿದ್ದೇವೆ. ಒಟ್ಟು 135 ಶಾಸಕರಿದ್ದೇವೆ. ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ. ಆದರೂ, ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆಲವರಿಗೆ ಅವಕಾಶ ಸಿಗಬೇಕಿದೆ. ಸಚಿವರಾಗುವ ಅರ್ಹತೆ ಇದ್ದವರು ಅನೇಕರು ಪಕ್ಷದಲ್ಲಿದ್ದಾರೆ. ಹೀಗಾಗಿ, ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದೆ. ಈ ಮಾತನ್ನು ಹೈಕಮಾಂಡ್‌ನವರೇ ನನಗೆ ಹೇಳಿದ್ದಾರೆ ಎಂದರು.

ದೇಶದಲ್ಲಿ ಸದ್ಯ ಕಾಂಗ್ರೆಸ್ ಪರ ವಾತಾವರಣ ಇದೆ: ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ಮಹಮ್ಮದ್ ಅಜರುದ್ದೀನ್

ಹಾಗಿದ್ದರೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಬದಲಾವಣೆಯೂ ಆಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ವಿಷಯದ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ದೇಶದಲ್ಲಿ ಸದ್ಯ ಕಾಂಗ್ರೆಸ್ ಪರ ವಾತಾವರಣ ಇದೆ: ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ಮುಖಂಡ ಮಹಮ್ಮದ್ ಅಜರುದ್ದೀನ್

ಶಾಸಕರ ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಏನೇ ಇದ್ದರೂ ನೇರವಾಗಿ ನಾವು ಮುಖ್ಯಮಂತ್ರಿಗೆ ಹೇಳುತ್ತೇವೆ. ಅವರು ಸಂಬಂಧಿಸಿದ ಸಚಿವರಿಗೆ ಈ ಸಂಬಂಧ ಸೂಚನೆ ನೀಡುತ್ತಾರೆ. ಒಂದು ವೇಳೆ, ಸಣ್ಣ, ಪುಟ್ಟ ಅಸಮಾಧಾನಗಳಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಸರಿಪಡಿಸಲಾಗುವುದು ಎಂದರು.

ಜೂನ್‌ನಲ್ಲಿ ನನ್ನ ಮಂತ್ರಿ ಮಾಡ್ತೀನಿ ಅಂದಿದ್ದಾರೆ

‘ಜೂನ್‌ನಲ್ಲಿ ನಿಂಗೆ ಮಂತ್ರಿ ಸ್ಥಾನ ಕೊಡ್ತೀನಯ್ಯ’ ಅಂತ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೊದಲು ಉಪಸಭಾಪತಿ ಹುದ್ದೆ ವಹಿಸುವಂತೆ ತಿಳಿಸಿದ್ದರು. ಆದರೆ, ನಾನೇ ಒಪ್ಪಿರಲಿಲ್ಲ. ಈಗಲೂ ಅಷ್ಟೆ. ಮಂತ್ರಿ ಸ್ಥಾನ ಕೊಡೋಡು ಸಿಎಂ, ಡಿಸಿಎಂಗೆ ಬಿಟ್ಟ ವಿಚಾರ. ಬಲವಂತ ಮಾಡಲು ನಾನ್ಯಾರು? ಎಂದು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ. 

Follow Us:
Download App:
  • android
  • ios