Asianet Suvarna News Asianet Suvarna News

ಸಚಿವ ಸಂಪುಟ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಚಿವ ಎಂ.ಬಿ.ಪಾಟೀಲ್

ಯಾರು ಮುಖ್ಯಮಂತ್ರಿ ಆಗಬೇಕು, ಸಚಿವರು ಯಾರು ಆಗಬೇಕೆಂಬ ಕುರಿತು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಹೊರತು ನಾನಾಗಲಿ ಇತರೇ ಮುಖಂಡರಾಗಲಿ ಅಲ್ಲ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

Cabinet reshuffle High Command decision Says Minister MB Patil gvd
Author
First Published Oct 22, 2023, 6:09 PM IST

ಲಿಂಗಸುಗೂರು (ಅ.22): ಯಾರು ಮುಖ್ಯಮಂತ್ರಿ ಆಗಬೇಕು, ಸಚಿವರು ಯಾರು ಆಗಬೇಕೆಂಬ ಕುರಿತು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಹೊರತು ನಾನಾಗಲಿ ಇತರೇ ಮುಖಂಡರಾಗಲಿ ಅಲ್ಲ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಪಟ್ಟಣದಲ್ಲಿ ದಸರಾ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯ ಬದಲಾವಣೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಬದಲಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಕರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿರ್ಧರಿಸುತ್ತಾರೆ. ಯಾವ ಕಾಲದಲ್ಲಿ ಏನು ಮಾಡಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ. 

ಡಿಕೆಶಿ ಕುರಿತು ಈಶ್ವರಪ್ಪ ಹೇಳಿಕೆಗೆ ಕುಹಕವಾಡಿದ ಎಂ.ಬಿ. ಪಾಟೀಲ್ ಈಶ್ವರಪ್ಪನವರು ಮಹಾನ್ ಮೇದಾವಿಗಳು ಅವರಿಗೆ ಉತ್ತರ ಕೊಡುವುದಿಲ್ಲ ಎಂದು ತಿವಿದರು. ಸಚಿವ ಶರಣ ಪ್ರಕಾಶ ಪಾಟೀಲ್ ತತ್ವಬದ್ಧ ರಾಜಕಾರಣಿ ಆಗಿದ್ದು, ಪರಿಶುದ್ಧರು ಆಗಿದ್ದಾರೆ. ಇದರಿಂದ ರೈತ ಆತ್ಮಹತ್ಯೆ ಪ್ರಕರಣದಲ್ಲಿ ಅವರು ನಿರಪರಾಧಿ. ಪ್ರಕರಣವನ್ನು ಸಿಐಡಿಗೆ ಕೊಡುವ ಅಗತ್ಯ ಇರಲಿಲ್ಲ. ಆದ್ರೂ ಕಾರ್ಯಕ್ಕೆ ಕಳಂಕ ಬರಬಾರದೆಂದು ಸಿಐಡಿ ತನಿಖೆಗೆ ವಹಿಸಿದೆ. ಈಶ್ವರಪ್ಪ ಹಾಗೂ ಶರಣ ಪ್ರಕಾಶ ಪಾಟೀಲ್‌ರ ಪ್ರಕರಣಗಳು ಬೇರೆ ಬೇರೆ ಆಗಿವೆ ಎಂದರು. ರಾಜ್ಯ ಸರ್ಕಾರ ಸ್ಥಿರವಾಗಿದೆ. ಅನೇಕ ಬಿಜೆಪಿ-ಜೆಡಿಎಸ್ ನಾಯಕರು ಕಾಂಗ್ರೆಸ್ ಸೇಪಡೆ ಆಗುತ್ತಿದ್ದಾರೆ. 

ಕಾಂಗ್ರೆಸ್‌ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ: ಶಾಸಕ ಬಿ.ವೈ.ವಿಜಯೇಂದ್ರ

ಈಶ್ವರಪ್ಪನವರು ಕಾಂಗ್ರೆಸ್‌ಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಅವರು ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮೊದಲು ವಿಚಾರ ಮಾಡುತ್ತೇವೆ ಎಂದು ಹೇಳಿದರು. ಕಾಂಗ್ರೆಸ್ ಬಿಜೆಪಿ ಯಾವುದೇ ಸರ್ಕಾರ ಇರಲಿ ಗುತ್ತಿಗೆದಾರರ ವಿರುದ್ಧ ಐಟಿ ದಾಳಿ ಸಾಮಾನ್ಯ ನಡೆಯುತ್ತದೆ. ಗುತ್ತಿಗೆದಾರರ ರೈಡ್‌ಗೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಕಾಮಗಾರಿ ಟೆಂಡರ್ ನೀಡಿಲ್ಲ. ಬಿಜೆಪಿಯವರು ಅಪಾದನೆ ಮಾಡಿದರೆ ನಾವೂ ಮಾಡುತ್ತೇವೆ. ಬಿಜೆಪಿ ಶೇ.40 ರಷ್ಟು ಕಮಿಷನ್ ಚುನಾವಣೆಯಲ್ಲಿ ಹೊರ ಬರುತ್ತದೆ ಎಂದು ಹೇಳಿದರು.

ಮೋದಿ ಕೆಳಗಿಳಿಸಿ ಇಂಡಿಯಾ ಸರ್ಕಾರ ರಚನೆಯಾಗಬೇಕು: ಸಚಿವ ಎಚ್‌.ಕೆ. ಪಾಟೀಲ್

ವೀರಶೈವರ ಒಗ್ಗೂಡಿಸಲು ರಂಭಾಪುರಿ ಶ್ರೀಗಳು ನೇತೃತ್ವ ವಹಿಸಲಿ: ಜಾತಿ-ಉಪಜಾತಿಗಳಿಂದ ಕವಲು ದಾರಿಯಲ್ಲಿ ಸಾಗುತ್ತಿರುವ ವೀರಶೈವ ಲಿಂಗಾಯತರನ್ನು ಒಂದಾಗಿಸಲು ಮಠ-ಮಾನ್ಯಗಳು ಮುಂದಾಗಬೇಕು. ಇದರ ನೇತೃತ್ವವನ್ನು ಪಂಚಪೀಠ ಜಗದ್ಗುರು ರಂಭಾಪುರಿ ಶಿವಾಚಾರ್ಯರು ವಹಿಸಬೇಕೆಂದು ಬೃಹತ್ ಮತ್ತು ಮದ್ಯಮ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು. 1904ರಲ್ಲಿ ವೀರಶೈವ ಲಿಂಗಾಯತ ಸಂಘ ರಚನೆ ಆಗಿ ಅಂದು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕರೆ ನೀಡಲಾಯಿತು. ಅದರಂತೆ ಕೆಎಲ್ಇ, ಬಿಎಲ್ಇಡಿ, ಎಚ್‌ಕೆಇನಂಥ ಶಿಕ್ಷಣ ಸಂಸ್ಥೆಗಳ ಸ್ಥಾಪಿಸಿ ಸರ್ಕಾರ ಮಾಡದಂಥ ಕಾರ್ಯವನ್ನು ವೀರಶೈವ ಮಠ-ಮಾನ್ಯಗಳು ಹಾಗೂ ಸಮುದಾಯದ ಹಿರಿಯರು ಮಾಡಿದರು. ಇಂದು ವೀರಶೈವ ಸಮಾಜದಲ್ಲಿ ಅಂದಿನ ಒಗ್ಗಟ್ಟು ಮಾಯವಾಗಿದೆ ಎಂದರು.

Follow Us:
Download App:
  • android
  • ios