Asianet Suvarna News Asianet Suvarna News

ಕಾಂಗ್ರೆಸ್‌ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ: ಶಾಸಕ ಬಿ.ವೈ.ವಿಜಯೇಂದ್ರ

ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬೆಳ‍ಗಾವಿ ಪ್ರವಾಸದ ವೇಳೆ ಅವರದ್ದೇ ಪಕ್ಷದ ಶಾಸಕರು ಗೈರಾಗಿದ್ದಾರೆ. ಹಾಗಾಗಿ, ಯಾವತ್ತು ಏನು ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
 

Discontent has broken out among Congress MLAs Says MLA BY Vijayendra gvd
Author
First Published Oct 22, 2023, 5:55 PM IST | Last Updated Oct 22, 2023, 5:55 PM IST

ಬೆಳಗಾವಿ (ಅ.22): ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬೆಳ‍ಗಾವಿ ಪ್ರವಾಸದ ವೇಳೆ ಅವರದ್ದೇ ಪಕ್ಷದ ಶಾಸಕರು ಗೈರಾಗಿದ್ದಾರೆ. ಹಾಗಾಗಿ, ಯಾವತ್ತು ಏನು ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಎಷ್ಟು ಜನ ಶಾಸಕರಿದ್ದಾರೆ ಮುಖ್ಯವಲ್ಲ. ಆದರೆ, ಅವರ ಮಾನಸಿಕ ಸ್ಥಿತಿ, ಮನಸ್ಥಿತಿ ಏನಿದೆ ಅದು ಮುಖ್ಯ. ಅವರ ಪಕ್ಷದಲ್ಲಿ ಶಾಸಕರ ಅಸಮಾಧಾನ ಬಗ್ಗೆ ಹೆಚ್ಚು ಹೇಳುವುದಕ್ಕೆ ಹೋಗಲ್ಲ. 

ಅವರ ಹಣೆಬರಹ ಅದು, 136 ಶಾಸಕರು ಇರುವ ಆಡಳಿತ ಪಕ್ಷ ಯಾವ ರೀತಿ ಆಡಳಿತ ನಡೆಸಬೇಕೆಂದ ಅವರು, ಮಂತ್ರಿಗಳು, ಶಾಸಕರ ಮಧ್ಯೆ ವ್ಯತ್ಯಾಸಗಳಿವೆ. ಸಹಜವಾಗಿ ಆಡಳಿತ ಪಕ್ಷದ ಶಾಸಕರ ಅಸಮಾಧಾನ ಎದ್ದು ಕಾಣುತ್ತಿದೆ ಎಂದು 20 ಶಾಸಕರ ಜೊತೆ ಮೈಸೂರು ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ನಿರ್ಧರಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸರ್ಕಾರ ಬಂದು ಇಷ್ಟು ದಿನ ಆದರೂ ಅಭಿವೃದ್ಧಿಗೆ ಒಂದು ರುಪಾಯಿ ಅನುದಾನ ಯಾವುದೇ ಶಾಸಕರಿಗೆ ಕೊಟ್ಟಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಸರ್ಕಾರ ವಿಫಲವಾಗಿದೆ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಪತನವಾಗುತ್ತದೆ ಎಂಬುವುದರ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಕರಾವಳಿ ಹಿರಿಮೆಯ ಹುಲಿ ವೇಷ ಈಗ ಜಗತ್ಪ್ರಸಿದ್ಧ: ಸಂಸದ ನಳಿನ್‌ ಕುಮಾರ್‌

ಸರ್ಕಾರದ ಬಗ್ಗೆ ಜನರ ಮನಸ್ಸಿನಲ್ಲಿ ಅಸ್ಥಿರತೆ ಕಾಡುತ್ತಿದೆ. ಏನ್ ಬೇಕಾದರೂ ಆಗಬಹುದು ಅಂತಾ ಸಾಮಾನ್ಯ ಜನರು ಮಾತನಾಡುತ್ತಿದ್ದಾರೆ. ನೀವು ಎಷ್ಟು ದಿನ ಅಧಿಕಾರದಲ್ಲಿ ಇದ್ದೀರಿ ಅನ್ನೋದು ಮುಖ್ಯವಲ್ಲ. ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿ ರೈತರ ಸಮಸ್ಯೆಗೆ ಸ್ಪಂದನೆ ಮಾಡಬೇಕು. ಬರಗಾಲ ಸಂದರ್ಭದಲ್ಲಿ ರೈತರನ್ನು ಸಮಸ್ಯೆಯಿಂದ ಹೊರತರುವ ಕೆಲಸ ಆಗಬೇಕು. ರಾಜ್ಯದ ನಾನಾ ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳೋದನ್ನು ನೋಡುತ್ತಿದ್ದೇವೆ. ಸರ್ಕಾರದ ಆದ್ಯತೆ ಏನು ನಿಮ್ಮ ಒಳಕಚ್ಚಾಟ ಎಲ್ಲ ಮರೆತು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದವರು ನೀವೇ, ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಭರವಸೆ ನೀಡಿ ಇವತ್ತು ಪರಿಸ್ಥಿತಿ ಏನಾಗಿದೆ? 200 ಯುನಿಟ್ ಫ್ರೀ ವಿದ್ಯುತ್ ನೀಡುತ್ತೀರಿ ಎಂದು ರೈತರು ರಸ್ತೆಗೆ ಬಂದಿಲ್ವಾ? ರೈತರಿಗೆ ಯಾವ ರೀತಿ ಪರಿಹಾರ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಛತ್ತೀಸ್‌ಘಡ್‌ನಿಂದ ವಿದ್ಯುತ್ ಖರೀದಿಸಿ ರೈತರಿಗೆ 7-8 ಗಂಟೆ ನೀಡುತ್ತಿದ್ದರು. ಇವತ್ತು ಎರಡ್ಮೂರು ಗಂಟೆ ವಿದ್ಯುತ್ ಕೊಡುತ್ತಿಲ್ಲ. ಯಾವಾಗ ಕೊಡ್ತೀರಿ?, ಇನ್ನು ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು?. ಆಡಳಿತ, ವಿರೋಧ ಪಕ್ಷದ ಶಾಸಕರಿಗೂ ಅನುದಾನ ನೀಡುತ್ತಿಲ್ಲ. 

ಜನರ ನಿರೀಕ್ಷೆ ಹುಸಿ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು. ಸರ್ಕಾರ ಬಂದು 5 ತಿಂಗಳು ಕಳೆದಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ವಿದ್ಯುತ್ ಅಭಾವ ಇದೆ. ರೈತರಿಗೆ ಮಧ್ಯಂತರ ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸುತ್ತಿದ್ದೇವೆ. ಬರಪೀಡಿತ ತಾಲೂಕು ಘೋಷಣೆ ಮಾಡಲು ಸರ್ಕಾರ ಮೀನಾಮೇಷ ಮಾಡಿದೆ. ಇದರ ಮಧ್ಯೆ ಮಂತ್ರಿಗಳಿಗೆ ಹೊಸ ಕಾರು ಕೊಟ್ಟಿದ್ದಾರೆ. ಸರ್ಕಾರದ ಆದ್ಯತೆ ಏನು ಅಂತಾ ರಾಜ್ಯದ ಜನ ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮೋದಿ ಕೆಳಗಿಳಿಸಿ ಇಂಡಿಯಾ ಸರ್ಕಾರ ರಚನೆಯಾಗಬೇಕು: ಸಚಿವ ಎಚ್‌.ಕೆ. ಪಾಟೀಲ್

ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಖಂಡಿತ ಹೈಕಮಾಂಡ್ ಬ್ರೇಕ್ ಹಾಕಿಲ್ಲ. ಯಡಿಯೂರಪ್ಪ ಹಿರಿಯ ನಾಯಕರಿದ್ದಾರೆ. ಯಡಿಯೂರಪ್ಪ ಸ್ಚತಂತ್ರ ಇದ್ದಾರೆ. ಅವರಿಗೆ ಯಾವಾಗ ಸರಿ ಅನಿಸುತ್ತದೆಯೋ ಆಗ ಪ್ರವಾಸ ಮಾಡುತ್ತಾರೆ. ಯಾರೂ ಕೂಡ ಅದನ್ನು ತಡೆಯುವಂತಹ ಪ್ರಯತ್ನ ಮಾಡುವುದಿಲ್ಲ. ಮಾಡುವ ಅವಶ್ಯಕತೆಯೂ ಇಲ್ಲ. ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಹಾಗೂ ವಿಪಕ್ಷ ನಾಯಕರ ನೇಮಕ ಎರಡೂ ಒಟ್ಟಿಗೆ ಶೀಘ್ರ ಆಗುತ್ತದೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕರು.

Latest Videos
Follow Us:
Download App:
  • android
  • ios