ಬೆಂಗಳೂರು, (ಸೆ.19): ಸಂಪುಟ ವಿಸ್ತರಣೆ ಸಂಬಂಧ ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡು ಹೈಕಮಾಂಡ್ ಭೇಟಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ನಿರಾಸೆಯಾಗಿದ್ದು, ಬರಿಗೈಲಿ ದೆಹಲಿಯಿಂದ ವಾಪಸ್ಸಾಗಿದ್ದಾರೆ. 

"

ಎರಡು ದಿನ ದೆಹಲಿ ಪ್ರವಾಸ ಮುಗಿಸಿಕೊಂಡು ಇಂದು (ಶನಿವಾರ) ಸಂಜೆ ಬಿಎಸ್‌ವೈ ಬೆಂಗಳೂರಿಗೆ ಆಗಮಿಸಿದ್ದು, ಸಂಪುಟ ವಿಸ್ತರಣೆ ಸಂಬಂದ ಹೈಕಮಾಂಡ್‌ನಿಂದ ಸ್ಪಷ್ಟ ಚಿತ್ರಣ ದೊರೆತಿಲ್ಲ. ಇದರಿಂದ ಬಿಎಸ್‌ವೈ ಆಸೆ ಈಡೇರಿಲ್ಲ.

 ಇದೇ ಸೆಪ್ಟೆಂಬರ್ 21ರಿಂದ 10 ದಿನಗಳ ಅಧಿವೇಶನ ಸಂಪುಟ ವಿಸ್ತರಣೆ ನಡೆಯಲಿದೆ. ಹೀಗಾಗಿ ಈ ಅಧಿವೇಶನ ಪ್ರಾರಂಭಕ್ಕೂ ಮುನ್ನವೇ ಅಂದ್ರೆ ಇನ್ನೆರಡು ದಿನಗಳೊಳಗೆ ಸಂಪುಟ ವಿಸ್ತರಣೆ ಮಾಡಬೇಕೆನ್ನುವುದು ಸಿಎಂ ಆಪೇಕ್ಷ. ಆದ್ರೆ, ಹೈಕಮಾಂಡ್ ಯಾವುದೇ ಅಧಿಕೃತವಾಗಿ ಹೇಳಿಲ್ಲ.

ದಿಲ್ಲಿಯಿಂದಲೇ ಬ್ರೇಕಿಂಗ್ ನ್ಯೂಸ್ ಕೊಟ್ಟ ಬಿಎಸ್‌ವೈ, ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

 ದೆಹಲಿಯಲ್ಲಿ ಹೈಕಮಾಂಡ್ ಭೇಟಿ ವೇಳೆ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದ್ರೆ, ಯಾವಾಗ ಮುಹೂರ್ತ ಎನ್ನುವುದು ಮಾತ್ರ ನಿಗದಿಯಾಗಿಲ್ಲ. ಇದರಿಂದ ಯಡಿಯೂರಪ್ಪ ಅವರು ಸಪ್ಪೆ ಮುಖ ಮಾಡಿಕೊಂಡು ದೆಹಲಿಯಿಂದ ವಾಪಸ್ ಆಗಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ಬಿಎಸ್‌ವೈ,  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿಯಾಗಿ ಚರ್ಚೆ ಮಾಡಿದ್ದು, ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚಿಸಿ ಹೇಳುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು, ಸಂಪುಟ ವಿಸ್ತರಣೆಗೆ ವರಿಷ್ಟರ ಸಂದೇಶಕ್ಕಾಗಿ ಕಾಯುತ್ತಿದ್ದಾರೆ.

ಹೈಕಮಾಂಡ್ ಕೊಡಲೇ ಇಲ್ಲ ಬ್ರೇಕಿಂಗ್ ನ್ಯೂಸ್

ಇಂದು ನವದೆಹಲಿಯ ಕರ್ನಾಟಕ ಭವನ-1 ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ, ರಾಜ್ಯ ವಿಧಾನ ಮಂಡಲದ ಅಧಿವೇಶನದ ಪ್ರಾರಂಭವಾಗುವ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂಬುದು ತಮ್ಮ ಅಪೇಕ್ಷೆಯಾಗಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಜತೆಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ, ಶುಕ್ರವಾರ ಸಮಾಲೋಚನೆ ನಡೆಸಲಾಗಿದೆ. ಪಕ್ಷದ ರಾಷ್ಟ್ರಾಧ್ಯಕ್ಷರು ಪ್ರಧಾನಿ ಜೊತೆಗೆ ಚರ್ಚಿಸಿ ಸಂಜೆ ವೇಳೆಗೆ ಸೂಚನೆ ನೀಡುವ ಸಾಧ್ಯತೆ ಇದೆ. ಅಲ್ಲಿಂದ ಗ್ರೀನ್​ ಸಿಗ್ನಲ್ ಸಿಕ್ಕ ಕೂಡಲೇ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದರು. ಸಂಜೆ ಮುಗಿದರೂ ರಾತ್ರಿಯಾದರೂ ಇನ್ನೂ ಹೈಕಮಾಂಡ್‌ನಿಂದ ಯಾವುದೇ ಸಂದೇಶ ಬಂದಿಲ್ಲ.

ನಾಯಕತ್ವ ಬದಲಾವಣೆ: ‌ಇದುವರೆಗೆ ನಾನು ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ ಎಂದ ಬಿಜೆಪಿ ನಾಯಕ

ಅಧಿವೇಶದನದಲ್ಲಿ ಮೋದಿ ಬ್ಯುಸಿ

ಹೌದು...ನಡ್ಡಾ ಅವರು ಮೋದಿ ಅವರ ಜೊತೆ ಮಾತುಕತೆ ಮಾಡಿ ಬಳಿಕ ಹೇಳುವುದಾಗಿ ಬಿಎಸ್‌ವೈಗೆ ತಿಳಿಸಿದ್ದಾರೆ. ಆದ್ರೆ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಸಂಸತ್ ಅಧಿವೇಶದಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ರಾಜ್ಯ ಸಂಪುಟ ವಿಸ್ತರಣೆ ಬಿಎಸ್‌ವೈ ಅಂದುಕೊಂಡಿರುವ ದಿನಾಂಕಕ್ಕೆ ಆಗುವುದು ಕಷ್ಟ ಸಾಧ್ಯ.

ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ
ಸದ್ಯ ಸಂಸತ್ ಅಧಿವೇಶ ನಡೆಯುತ್ತಿದೆ. ಮೋದಿ ಇದರಲ್ಲಿ ಬ್ಯುಸಿಯಾಗಿದ್ದಾರೆ. ಸೆಪ್ಟೆಂಬರ್ 14ರಿಂದಲೇ ಅಧಿವೇಶನ ಆರಂಭವಾಗಿದ್ದು, 18 ದಿನಗಳ ಕಾಲ ನಡೆಯಲಿದೆ.  ಅಲ್ಲಿಯವರೆಗೂ ರಾಜ್ಯ ಸಂಪುಟ ವಿಸ್ತರಣೆಯಾಗುವುದು ಅನುಮಾನ.