ಆರ್‌ಎಸ್‌ಎಸ್ ನಿಷೇಧಕ್ಕೆ ಕಾಂಗ್ರೆಸ್ ಬೇಡಿಕೆ ಮೂರ್ಖತನದ್ದು: ವಿಜಯೇಂದ್ರ
ಭಾರತ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಉಳಿದಿರೋ ಚೂರುಪಾರು ಅಸ್ತಿತ್ವವನ್ನೂ ಕಳೆದುಕೊಳ್ಳುತ್ತಿದೆ: ಬಿ.ವೈ. ವಿಜಯೇಂದ್ರ ಲೇವಡಿ
ಕಲಬುರಗಿ(ಸೆ.30): ಭಾರತ ಜೋಡೋ ಯಾತ್ರೆಯಿಂದಾಗಿ ಕಾಂಗ್ರೆಸ್ ಪಕ್ಷ ಉಳಿದಿರೋ ಚೂರುಪಾರು ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಹುಲ್ ಗಾಂಧಿ ನೇತೃತ್ವದ ಬಾರತ ಜೋಡೋ ಯಾತ್ರೆಯನ್ನು ಲೇವಡಿ ಮಾಡಿದ್ದಾರೆ. ಕಲಬುರಗಿ ಸಂಚಾರದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಕೇರಳ ರಾಜ್ಯದ ದೇಶದ್ರೋಹಿ ಫಾದರ್ ಜಾರ್ಜ್ ಜೊತೆ ಭಾರತ್ ಜೋಡೋ ಯಾತ್ರೆ ಸಾಗಿದೆ ಎಂದು ವ್ಯಂಗ್ಯವಾಡಿದ ಅವರು ದೇಶದ್ರೋಹಿ ಫಾದರ್ ಜೊತೆ ಕುಳಿತು ಕೈ ನಾಯಕರು ಸಭೆ ಮಾಡ್ತಿದಾರೆ. ಕಾಂಗ್ರೆಸ್ ಪಕ್ಷ ಇರೋ ಅಸ್ತಿತ್ವ ಕಳೆದುಕೊಳ್ಳಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ ಎಂದರು.
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ ನೋಡಿ ಕಾಂಗ್ರೆಸ್ ಪಕ್ಷ ವಿಚಲಿತವಾಗಿದೆ. ಸೂರ್ಯ ಚಂದ್ರ ಇರುವುದು ಎಷ್ಟುಸತ್ಯವೋ ಮೂರನೇ ಬಾರಿ ಮೋದಿ ಪ್ರಧಾನಿಯಾಗೊದು ಅಷ್ಟೇ ಸತ್ಯ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲವೆಂದರು.
ಸಿದ್ದರಾಮಯ್ಯ ಸ್ಥಿತಿ ಬೆಕ್ಕಿನಂತಾಗಿದೆ: ಅರುಣ್ ಸಿಂಗ್
ಚಾಮರಾಜನಗರದಲ್ಲಿ ಭಾರತ್ ಜೋಡೋ ಯಾತ್ರೆ ಫ್ಲೆಕ್ಸ್ ಹರಿದ ವಿಚಾರವಾಗಿ ಸ್ಪಂದಿಸಿದ ಅವರು ಅಂತಹ ಅಗ್ಗದ ಕೆಲಸ ಬಿಜೆಪಿ ಎಂದು ಮಾಡುವುದಿಲ್ಲ, ಇಂತಹ ಅಗತ್ಯ ನಮಗಿಲ್ಲ, ಅವರದೇ ಪಕ್ಷದವರು ಫ್ಲೆಕ್ಸ್ ಹರಿದುಹಾಕಿ ನಮ್ಮೆಲೆ ಹಾಕುತ್ತಿದ್ದಾರೆಂದು ಡಿಕೆಶಿ ಆರೋಪಕ್ಕೆ ವಿಜಯೇಂದ್ರ ತಿರುಗೇಟು ನೀಡಿದರು.
ಪೇ ಸಿಎಂ ಕಾಂಗ್ರೆಸ್‌ಗೆ ತಿರುಗುಬಾಣ:
ಪೇ ಸಿಎಂ ನಿಂದ ಕಾಂಗ್ರೆಸ್‌ಗೆ ದೊಡ್ಡ ಪ್ರಚಾರ ಸಿಕ್ಕಿದೆ ಅನಕೊಂಡಿದ್ದಾರೆ. ಪೇ ಸಿಎಂ ಕಾಂಗ್ರೆಸ್ ಪಕ್ಷಕ್ಕೆ ತಿರುಗಯಬಾಣವಾಗಲಿದೆ, ಬರುವ ಚುನಾವಣೆಯಲ್ಲಿ ಪೇ ಸಿಎಂ ಅಪ್ರಚಾರಕ್ಕೆ ಜನ ಉತ್ತರಸಲಿದ್ದಾರೆಂದರು. ಪಕ್ಷ ಸಂಘಟನೆ ಮಾಡಲು ರಾಜ್ಯಾದ್ಯಂತ ಬಿಎಸ್ವೈ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡ್ತಿದಾರೆ. ಬಿಎಸ್ವೈರನ್ನ ರಾಷ್ಟ್ರೀಯ ನಾಯಕರು ಕಡೆಗಣಿಸಿಲ್ಲ. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಬಲಪಡಿಸಲಿದ್ದಾರೆ. ಯಡಿಯೂರಪ್ಪರಿಗೆ ಯಾವುದೇ ಸ್ಥಾನಮಾನದ ಅವಶ್ಯಕತೆ ಇಲ್ಲ. ಯಾರ ನೇತೃತ್ವದಲ್ಲಿ ಚುನಾವಣೆ ಹೋಗಬೇಕು ಅನ್ನೊದು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು ಎಂದ ಅವರು ಯಾವುದೇ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಿದರೂ ಕಾರ್ಯಕರ್ತರು ತಮ್ಮನ್ನು ಗೆಲ್ಲಿಸುತ್ತಾರೆಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬರಲು ಕಾಂಗ್ರೆಸ್ ತಿಣುಕಾಟ:
ಅಧಿಕಾರದಿಂದ ದೂರವಾಗಿರೋ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಯತ್ನ ಮಾಡುತ್ತಿದೆ. ದಿನನಿತ್ಯ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ಜನರನ್ನ ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದೆಲ್ಲ ಈರಿ ಜನ ಬಿಜೆಪಿ ಬೆಂಬಲಿಸುತ್ತಾರೆ. ರಾಜ್ಯದಲ್ಲಿ/ರಾಷ್ಟ್ರದಲ್ಲಿ ಮತ್ತೊಮ್ಮೆ ಕೇಸರಿ ಪಕ್ಷ ಅಧಿಕಾರಕ್ಕೆ ಬರಲಿದೆ, ಕಾಂಗ್ರೆಸ್ ಎಷ್ಟೇ ಬೊಬ್ಬೆ ಹೊಡೆದು ಪಾದಯಾತ್ರೆ ಮಾಡಿದ್ರು ಭಾಜಪ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘನೆ ಜಗತ್ತಿನ ಅತ್ಯಂತ ದೊಡ್ಡ ಮತ್ತು ದೇಶಭಕ್ತರ ಸಂಘಟನೆ, ಅದನ್ನು ನಿಷೇಧಿಸಬೇಕು ಎಂಬ ಕಾಂಗ್ರೆಸ್ ಮುಖಂಡರ ಬೇಡಿಕೆ ಮತ್ತು ವಾದ ಮೂರ್ಖತನದ ಪರಮಾವಧಿ. ಆರ್‌ಎಸ…ಎಸ್ ಕಾರ್ಯಕರ್ತರೆ ಇಂದು ದೇಶದ ಪ್ರಧಾನಿಯಾಗಿದ್ದಾರೆ. ಅವರು ಪ್ರಧಾನಿಯಾದ ನಂತರ ನೂರಾರು ಜನಪರ ಕೆಲಸಗಳನ್ನು ಮಾಡಿದ್ದಾರೆ. ಅಂತಹ ಸಂಘಟನೆಯ ಕುರಿತು ವಿರೋಧ ಪಕ್ಷಗಳ ನಾಯಕರು ಮಾತನಾಡುವುದು ನಿಲ್ಲಿಸಲಿ ಎಂದರು.
ರಾಹುಲ್ ಗಾಂಧಿಯೇ AICC ಅಧ್ಯಕ್ಷರಾಗಲಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ
ಪಿಎಫ್‌ಐ ನಿಷೇಧಿಸಿ ನವರಾತ್ರಿಯ ಶುಭಸಂದರ್ಭದಲ್ಲಿ ಅತ್ಯುತ್ತಮ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ/ದೇಶದಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಪಿಎಫ್‌ಐ ಮಾಡಿದೆ. ಒಂದು ಧರ್ಮದ ಯುವಕರನ್ನ ಅಡ್ಡದಾರಿಗೆ ತೆಗೆದುಕೊಂಡು ಹೋಗುವ, ಹತ್ಯೆ ಪ್ರಕರಣ ಸೇರಿದಂತೆ ಅನೇಕ ಕೃತ್ಯಗಳನ್ನ ಪಿಎಫ್‌ಐ ಎಸಗಿದೆ, ಪಿಎಫ್‌ಐ ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಇದನ್ನ ಸದೆಬಡೆಯುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಎಂದರು.
ಕೆ.ಜೆ ಹಳ್ಳಿ/ಡಿ.ಜೆ ಹಳ್ಳಿ ಯಲ್ಲಿ ಕಾಂಗ್ರೆಸ್ ಶಾಸಕನ ಮನೆಗೆ ಬೆಂಕಿ ಇಟ್ಟವರಲ್ಲಿ ಪಿಎಫ್‌ಐ ಕೈವಾಡ ಏನಿದೆ ಎಂದು ಕೈ ನಾಯಕರು ಅರಿತು ಮಾತನಾಡಲಿ. ಕಾಂಗ್ರೆಸ್ ಪಕ್ಷ ಈಗಾಲಾದರೂ ತಮ್ಮ ತಪ್ಪು ಅರ್ಥ ಮಾಡಿಕೊಂಡು ಸ್ವಾಗತ ಮಾಡಬೇಕು ಎಂದರು.