Asianet Suvarna News Asianet Suvarna News

ಸಿದ್ದರಾಮಯ್ಯ ಸ್ಥಿತಿ ಬೆಕ್ಕಿನಂತಾಗಿದೆ: ಅರುಣ್‌ ಸಿಂಗ್‌

ನೂರು ಇಲಿ ತಿಂದು ಬೆಕ್ಕು ಹಜ್‌ಗೆ ಹೋಗಿತ್ತಂತೆ ಅನ್ನೋ ಹಾಗಿದೆ ಸಿದ್ದರಾಮಯ್ಯನವರ ಪರಿಸ್ಥಿತಿ: ಅರುಣ್‌ ಸಿಂಗ್‌

BJP Leader Arun Singh Slams Siddaramaiah grg
Author
First Published Sep 29, 2022, 9:01 PM IST

ಕಲಬುರಗಿ(ಸೆ.29):  ಕರ್ನಾಟಕ ರಾಜ್ಯ ಕಂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅತ್ಯಂತ ಭ್ರಷ್ಟಸರ್ಕಾರ, ಅದು ಹಲವು ಹಗರಣಗಳ ಆಗರವಾಗಿತ್ತು ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌ ತಮ್ಮ ಹಗರಣ ವಿಆರ ಬಚ್ಚಿಟ್ಟು ಇದೀಗ ಬಿಜೆಪಿಯತ್ತ ಸಿದ್ದರಾಮಯ್ಯ ಬೆರಳು ತೋರಿಸುತ್ತಿದ್ದಾರೆಂದು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ಮಂಗಳವಾರ ಆಯೋಜಿಸಿರುವ ಬಿಜೆಪಿ ಪಮುಖ ಕಾರ್ಯಕರ್ತರ ಸಭೆಯಲ್ಲಿ ಬಾಗವಹಿಸಿಲು ತೆರಳುವ ಮುನ್ನ ಅವರು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ತಮ್ಮ ಸರ್ಕಾರದಲ್ಲಿ ಮಾಡಬಾರದ ಹಗರಣಗಳನ್ನ ಮಾಡಿ ಈಗ ಬಿಜೆಪಿಯತ್ತ ಬೆರಳು ಮಾಡುತ್ತಿರುವ ಸಿದ್ದರಾಮಯ್ಯನವರ ಮಾತು ’ನೂರು ಇಲಿ ತಿಂದು ಬೆಕ್ಕು ಹಜ್‌ಗೆ ಹೋಗಿತ್ತಂತೆ’ ಅಂತಾರಲ್ಲ ಹಾಗಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಕಾಲದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಬಡವರ ಆಹಾರ ಧಾನ್ಯ ಹಂಚಿಕೆಯಲ್ಲಿ ಹಗರಣ, ಶಿಕ್ಷಕರ ನೇಮಕಾತಿ, ಪೊಲೀಸ್‌ ನೇಮಕಾತಿಯಲ್ಲಿ ಹಗರಣ, ಎಸ್‌…ಸಿ ಎಸ್‌…ಟಿ ಅನುದಾನದಲ್ಲಿ ಹಗರಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಗರಣಗಳು ನಡೆದಿವೆ. ಸಿದ್ದರಾಮಯ್ಯ ಸರ್ಕಾರವೇ ಹಗರಣಗಳ ಸರ್ಕಾರವಾಗಿತ್ತು. ಈಗ ಬಿಜೆಪಿಯತ್ತ ಬೆರಳು ಮಾಡುತ್ತಿದ್ದಾರೆಂದು ತೀರುಗೇಟು ನೀಡಿದರು.

ರಾಹುಲ್‌ ಗಾಂಧಿಯೇ AICC ಅಧ್ಯಕ್ಷರಾಗಲಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಸಿಎಂ ಬೊಮ್ಮಾಯಿ ಕಾಮನ್‌ ಮ್ಯಾನ್‌. ರಾಜ್ಯದ ಸಾಮಾನ್ಯ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ತರುವುದು ಸಾಮಾನ್ಯ ಮನುಷ್ಯನ ಗೌರವಕ್ಕೆ ಚ್ಯುತಿ ತಂದಂತೆ ಎಂಬುವುದನ್ನು ಮರೆತ ಕಾಂಗ್ರೆಸ್‌ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ರಾಜ್ಯದ ಜನತೆಯೇ ಇವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯಲ್ಲಿ ಒಳಜಗಳವಿಲ್ಲ. ಕೆಲ ಶಾಸಕರಿಗೆ ಏನಾದರೂ ಅಸಮಧಾನ ಇರಬಹುದೇ ಹೊರತು ಜಗಳ ಆಗಲ್ಲ. ನಿಜವಾದ ಜಗಳ ಇರುವುದು ಕಾಂಗ್ರೆಸ್‌ನಲ್ಲಿ. ಈಗ ರಾಜ್ಯಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ಮಧ್ಯೆ ಜಗಳ ನಡೆದಿದೆ. ಅದೇ ರೀತಿ ಮುಂದೆ ಕರ್ನಾಟಕದಲ್ಲಿ ಇಬ್ಬರು ನಾಯಕರು ಜಗಳ ಆಡಲಿದ್ದಾರೆ ಎಂದು ಡಿ.ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡದೆ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕಾರಕ್ಕಾಗಿ ದೇಶದ ವಿವಿಧಡೆ ಕಾಂಗ್ರೆಸ್‌ನಲ್ಲಿ ಒಳ ಜಗಳ ನಡೆಯುತ್ತಿವೆ. ಅದೇ ರೀತಿ ಕರ್ನಾಟಕ ದಲ್ಲಿ ಕೂಡಾ ಕಾಂಗ್ರೆಸ್‌ ನಾಯಕರ ನಡುವೆ ಜಗಳವಾಗುತ್ತದೆ ಎಂದು ಅರುಣ್‌ ಸಿಂಗ್‌ ಭವಿಷ್ಯ ನುಡಿದರು.
 

Follow Us:
Download App:
  • android
  • ios