ಗುಬ್ಬಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ, ಪಕ್ಷ ಭಿನ್ನಮತಕ್ಕೆ ವಿಜಯೇಂದ್ರ ಮಾತಿನ ಚಾಟಿ ಏಟು
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ನಡೆಸಿದೆ. ಗುಬ್ಬಿ ಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ತುಮಕೂರು ಜಿಲ್ಲಾ ಬಿಜೆಪಿ ಹಿಂದೂಳಿದ ವರ್ಗಗಳ ಸಮಾವೇಶದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಅದ್ಧೂರಿಯಾಗಿ ಜರುಗಿದೆ.
ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಮಾ.7): ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ನಡೆಸಿದೆ. ಗುಬ್ಬಿ ಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ತುಮಕೂರು ಜಿಲ್ಲಾ ಬಿಜೆಪಿ ಹಿಂದೂಳಿದ ವರ್ಗಗಳ ಸಮಾವೇಶದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಅದ್ಧೂರಿಯಾಗಿ ಜರುಗಿದೆ. ಈ ಮೂಲಕ ಚುನಾವಣಾ ಗೆಲುವಿಗೆ ಬಿಜೆಪಿ ಮೊದಲ ಹೆಜ್ಜೆಯನ್ನಿಟ್ಟಿದೆ. ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ದೇವಾಲಯಲ್ಲಿ ಪೂಜೆ ಸಲ್ಲಿಸಿದ ವಿ.ವೈ ವಿಜಯಂದ್ರ ಬಳಿಕ ತೆರೆದ ವಾಹನದಲ್ಲಿ ಗುಬ್ಬಿ ಪಟ್ಟಣದಲ್ಲಿ ರೋಡ್ ಶೋ ನಡೆಸಿದ್ರು. ಈ ರ್ಯಾಲಿಯಲ್ಲಿ ಸುಮಾರು 1500ಕ್ಕೂ ಹೆಚ್ಚು ಕಾರ್ಯಕರ್ತರು ಬೈಕ್ ನಲ್ಲಿ ರ್ಯಾಲಿ ನಡೆಸುವ ಮೂಲಕ ಬಿಜೆಪಿ ಮುಖಂಡರು ಶಕ್ತಿ ಪ್ರದರ್ಶನ ನಡೆಸಿದರು.
ಈ ವೇಳೆ ವಿಜಯೇಂದ್ರ ಜೊತೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ದಿಲೀಪ್ ಕುಮಾರ್, ಬೆಟ್ಟಸ್ವಾಮಿ, ಎಚ್.ಎನ್ ಪ್ರಕಾಶ್ ಜೊತೆಗಿದ್ದರು, ಗುಬ್ಬಿ ಚನ್ನಬಸವೇಶ್ವ ದೇವಸ್ಥಾನದಿಂದ ಶುರುವಾದ ಈ ರ್ಯಾಲಿ ಸಮಾವೇಶ ನಡೆಯುವ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದವರೆಗೂ ನಡೆಯಿತ್ತು. ಇನ್ನು ವೇದಿಕೆ ಬಳಿಗೆ ಟಿಕೆಟ್ ಆಕಾಂಕ್ಷಿಗಳಾದ ದಿಲೀಪ್ ಕುಮಾರ್ ಹಾಗೂ ಬೆಟ್ಟಸ್ವಾಮಿ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಇಬ್ಬರನ್ನು ಹೆಗಲ ಮೇಲೆ ಹೊತ್ತು ಡ್ಯಾನ್ ಮಾಡುವ ಮೂಲಕ ವಿಜಯೇಂದ್ರ ಮುಂದೆ ಶಕ್ತಿ ಪ್ರದರ್ಶನ ತೋರಿದ್ರು.
ವೇದಿಕೆಯಲ್ಲಿ ಬಿ.ವೈ ವಿಜಯೇಂದ್ರ, ನೆ.ಲ ನರೇಂದ್ರಬಾಬು, ಸಂಸದ ಪಿ.ಸಿ ಮೋಹನ್, ಜಿ.ಎಸ್ ಬಸವರಾಜು, ಶಾಸಕ ಜ್ಯೋತಿಗಣೇಶ್, ಟಿಕೆಟ್ ಆಕಾಂಕ್ಷಿಗಳಾದ ದಿಲೀಪ್ ಕುಮಾರ್, ಬೆಟ್ಟಸ್ವಾಮಿ, ಪ್ರಕಾಶ್, ಜಿಲ್ಲಾ ಬಿಜೆಪಿ ಮುಖಂಡ ಹೆಬ್ಬಾಕ ರವಿ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಭಿನ್ನಮತ ಮರೆತು ಒಗ್ಗಟ್ಟಾಗಿ : ಜಿ.ಎಸ್ ಬಸವರಾಜು
ಇದೇ ವೇಳೆ ಮಾತನಾಡಿದ ಸಂಸದ ಜಿ.ಎಸ್ ಬಸವರಾಜು, ಎಲ್ಲಾರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು, ಲಿಂಗಾಯತ ಸಮುದಾಯದ ಪ್ರತ್ಯೇಕ ಸಭೆ ನಡೆಸಿಲಾಗಿದೆ, ಬಿಜೆಪಿ ಪಕ್ಷ ಎಲ್ಲಾರ ಒಂದಾಗಿ ಹೋಗುವ ಪಕ್ಷ ಎಲ್ಲಾರೂ ಒಗ್ಗಟಾಗಿ ಅವರಿಗೆ ಟಿಕೆಟ್ ಕೊಡ್ತಾರೆ, ಅಂತಾರೆ ಅಂತ ಹೇಳೋದಲ್ಲ, ಬಿಜೆಪಿ ಹೈ ಕಮಾಂಡ್ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡಲಿದೆ, ಎಲ್ಲಾರಿ ಸೇರಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು. ಇನ್ನು ರಾಹುಲ್ ಗಾಂಧಿಗೆ ಪಾರ್ಲಿಮೆಂಟರಿ ಬಿಹೇವಿಯರ್ ಗೊತ್ತಿಲ್ಲ, ಅಂತಹವರ ಕೈಗೆ ಅಧಿಕಾರ ಕೊಟ್ಟರೆ ಈ ದೇಶದ ಸ್ಥಿತಿ ಏನಾಗಲಿದೆ ಯೋಚಿಸಿ ಎಂದರು.
ಗುಬ್ಬಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶಪಥ ಮಾಡಿ: ವಿಜಯೇಂದ್ರ ಕರೆ
ಇದೇ ವೇದಿಕೆಯಲ್ಲಿ ಮಾತನಾಡಿದ ವಿಜಯೇಂದ್ರ, ಹಿಂದೂಳಿದ ಸಮಾವೇಶ ಶುರುವಾಗುವ ಮೊದಲು ಗುಬ್ಬಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದೇನೆ, ಮರೆವರಣಿಗೆ ಮೂಲಕ ಸಮಾವೇಶ ಉದ್ಘಾಟನೆ ಶುರುವಾಗಿದೆ. ಪಕ್ಷದಲ್ಲಿ 15-20 ದಿನಗಳಿಂದ ಚರ್ಚೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಈವರೆಗೂ ಯಾವ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ, ಗೆಲ್ಲುವ ಸಾಧ್ಯತೆ ಇರೋ ಕ್ಷೇತ್ರ ಯಾವುದು ಅನ್ನೋದನ್ನು ಪಟ್ಟಿ ಮಾಡಿದ್ವಿ. ಆ ಪಟ್ಟಿಯ ಮೊದಲ ಹೆಸರು ಬರೆದಿದ್ದು ಗುಬ್ಬಿ ಕ್ಷೇತ್ರ, ಇದು ಸತ್ಯವಾಗಬೇಕಾದ್ರೆ, ಗುಬ್ಬಿ ಬುದ್ಧಿವಂತ ಮತದಾರರು ಅಧಿಕಾರ ಕೊಡಬೇಕು, ನನಗೆ ತಿಳಿದಿದೆ. ಬಿಜೆಪಿಗೆ ಅಧಿಕಾರ ಕೊಡಬೇಕು ಅಂತ ಮತದಾರರು ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ವೇದಿಕೆ ಮೇಲೆ ಕುಳಿತ ನಾಯಕರು, ಗುಬ್ಬಿಯಲ್ಲಿ ಕಮಲ ಅರಳಿಸುತ್ತೇವೆ ಅಂತ ಶಪಥಮಾಡಬೇಕು.ಈ ಶಪಥ ನಿಶ್ಚಯವಾದರೆ ಗುಬ್ಬಿಯಲ್ಲಿ ಗೆಲುವು ನಿಶ್ಚಿತ, ವೇದಿಕೆ ಮೇಲೆ ಇರುವ ಎಲ್ಲಾ ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎನ್ನುವ ಮೂಲಕ ಗುಬ್ಬಿಯಲ್ಲಿ ಇರುವ ಭಿನ್ನಮತಕ್ಕೆ ವಿಜಯೇಂದ್ರ ಮಾತಿನಲ್ಲೇ ತಿವಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬರುತ್ತಾ ಅಂತ ಸಿದ್ದರಾಮಯ್ಯ ಹೇಳ್ತಿದ್ರು. ಯಡಿಯೂರಪ್ಪನವರು ಸಿದ್ದರಾಮಯ್ಯನವರ ಮಾತನನ್ನು ಸವಾಲ್ ಆಗಿ ತೆಗೆದುಕೊಂಡರು. ಬಿಜೆಪಿ ಪಕ್ಷ ನಗರಕ್ಕೆ ಸೀಮಿತ ಅಂತ ಹೇಳುತ್ತಿದ್ದರು, ಆದರೆ ಈ ಬಿಜೆಪಿ ಪಕ್ಷ ವನ್ನು ಹಳ್ಳಿ ಹಳ್ಳಿಗೆ ತೆಗೆದುಕೊಂಡು ಹೋದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ. ಯಡಿಯೂರಪ್ಪ ರಾಜೀನಾಮೆ ಕೊಟ್ಟ ತಕ್ಷಣ ವಿರೋಧ ಪಕ್ಷದವರಿಗೆ ಸವಾಲ್ ಹಾಕಿದ್ರು ಆದರೆ ವಿರೋಧ ಪಕ್ಷದವರು ಯಡಿಯೂರಪ್ಪ ರಾಜೀನಾಮೆ ಕೊಟ್ಟ ಬಳಿಕ ಮನೆಯಲ್ಲಿ ಮಲಗುತ್ತಾರೆ ಅಂದುಕೊಂಡರು, ರಾಜೀನಾಮೆ ಕೊಟ್ಟ ತಕ್ಷಣ ಯಡಿಯೂರಪ್ಪ ಹೇಳಿದ್ರು, ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ಮಲಗಲ್ಲ ಎಂದು ಹೇಳಿದರು.
Karnataka election: ಕಾಂಗ್ರೆಸ್‌ಗೆ ಹೋಗ್ತೀನೆಂದು ನಾನೆಲ್ಲಿ ಹೇಳಿದ್ದೇನೆ?: ಸಚಿವ ಸೋಮಣ್ಣ
ಪಕ್ಷದ ಕಾರ್ಯಕರ್ತರು ತಮ್ಮದೇ ಜೇಬಿನಿಂದ ಹಣ ಖರ್ಚು ಮಾಡಿ,ಚಪ್ಪಲಿ ಹರಿದುಕೊಂಡು ಪಕ್ಷ ಕಟ್ಟಿದ್ದೀರಾ ಇದೀಗ ಮತ್ತೇ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ. ಕಾಂಗ್ರೆಸ್ ನವರು ನಿಂತಲ್ಲಿ ಕುಂತಲ್ಲಿ ಬಿಜೆಪಿ-ಮೋದಿಯನ್ನು ಟಿಕೆಟ್ ಮಾಡ್ತಿದ್ದಾರೆ. ಬಿಜೆಪಿ ಪಕ್ಷ ಅಂದರೆ ಹಿಟ್ಲರ್ ಪಕ್ಷ ಅಂತ ಟೀಕೆ ಮಾಡ್ತಿದ್ದಾರೆ, ಹೌದು ಬಿಜೆಪಿ ಪಕ್ಷ ಹಿಟ್ಲರ್ ಪಕ್ಷ ಅಂತ ಒಪ್ಪಿಕೊಳ್ಳುತ್ತೇವೆ.
6 ಕೋಟಿ ಅಕ್ರಮ ಹಣದ ಆರೋಪಿಗೆ ಅದ್ಧೂರಿ ಮೆರವಣಿಗೆ ಬೇಕೇ.?: ಮಾಡಾಳ್ ವಿರುಪಾಕ್ಷಪ್ಪನಿಂದ ಬಿಜೆಪಿಗೆ ಮುಜುಗರ
ಯಾಕೆಂದರೆ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದಿಂದ ಯೋಧರು ಪ್ರಾಣ ಕಳೆದುಕೊಂಡಿರುವುದು, ಕಾಂಗ್ರೆಸ್ ಕಣ್ಣಿಗೆ ಕಾಣಲಿಲ್ಲ, ಆದರೆ ಆಕ್ಟಿಕಲ್ 370 ಕಲಂ ತೆಗೆಯುವ ಮೂಲಕ ಬಿಜೆಪಿ ಹಿಟ್ಲರ್ ನಡೆ ತೋರಿಸಿತ್ತು. ದೇಶದಲ್ಲಿ ನಕ್ಸಲಿಸಂ ತೆಗೆಯಲು ಕಾಂಗ್ರೆಸ್ ಕೈಯಲ್ಲಿ ಆಗಲಿಲ್ಲ, ಹಿಟ್ಲರ್ ಪಕ್ಷ ಅಂತ ಕರೆಸಿಕೊಳ್ಳುವ ಬಿಜೆಪಿಯಿಂದ ನಕ್ಸಲಿಸಂ ತೆಗೆಯಲು ಸಾಧ್ಯವಾಯ್ತು, ದೇಶದಲ್ಲಿ ಭ್ರಷ್ಟಚಾರ ಹುಟ್ಟು ಹಾಕಿದ ಪಕ್ಷ ಏನಾದ್ರೂ ಇದ್ರೆ ಅದು ಕಾಂಗ್ರೆಸ್, ಆದರೆ 9 ವರ್ಷ ಆಢಳಿತದಲ್ಲಿ ಪ್ರಧಾನಿ ಮೇಲೆ ಒಂದೇ ಒಂದು ಭ್ರಷ್ಟಚಾರ ತೊರಿಸಲಾಗಲಿಲ್ಲ, ಇದೇ ಹಿಟ್ಲರ್ ಬಿಜೆಪಿ ಪಕ್ಷದ ಕಾರ್ಯಕ್ರಮದ ವೈಖರಿ ಎಂದರು.