ಬೆಂಗ​ಳೂ​ರು[ಫೆ.03]: ರಾಜ್ಯದ ರೈತರು ಹಾಗೂ ಜನರ ಪರವಾಗಿ ಕೆಲಸ ಮಾಡಲು ನಮ್ಮ ತಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದ ಸಹಕಾರದಂತೆ ನನಗೂ ಸಹಕಾರ ನೀಡಿ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜ​ಯೇಂದ್ರ ಕೋರಿ​ದ್ದಾ​ರೆ.

ವೀರ​ಶೈವ ಲಿಂಗಾ​ಯತ ಯುವ​ಕರ ಸೇವಾ ಟ್ರಸ್ಟ್‌ ಭಾನು​ವಾರ ಕೆಂಗೇರಿ ಉಪ​ನ​ಗ​ರದ ಗಣೇಶ ದೇವ​ಸ್ಥಾ​ನದ ಮೈದಾ​ನ​ದ​ಲ್ಲಿ ಏರ್ಪ​ಡಿ​ಸಿದ್ದ ಡಾ.ಶಿವ​ಕು​ಮಾ​ರ ಸ್ವಾಮಿ​ ಸಂಸ್ಮ​ರಣೆ ಕಾರ್ಯ​ಕ್ರ​ಮ​ ಉದ್ಘಾ​ಟಿಸಿ ಅವರು ಮಾತ​ನಾ​ಡಿ​, ವರುಣಾ ಕ್ಷೇತ್ರದ ಮೂಲಕ ರಾಜ​ಕೀಯ ಅಂಬೆ​ಗಾ​ಲಿಟ್ಟನನಗೆ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಅವ​ಕಾಶ ದೊರೆ​ತಿದೆ. ಮುಂದಿನ ದಿನ​ಗ​ಳಲ್ಲಿ ತಂದೆಯಂತೆ ಸೇವೆ ಮಾಡಲು ನನಗೂ ಸಹ​ಕಾ​ರ, ಆಶೀ​ರ್ವಾ​ದ ನೀಡಿ ಎಂದು ಮನವಿ ಮಾಡಿ​ದರು.

ಬಿಎಸ್‌ವೈಗೆ ಮಿಣಿ ಮಿಣಿ ಕಣ್ಣು ತಾಗದಿರಲೆಂದು ಪೂಜೆ

ಯಡಿ​ಯೂ​ರಪ್ಪ ಅವರು ಹಿಂದಿ​ನಿಂದಲೂ ಮಠ​ಗ​ಳೊಂದಿಗೆ ಉತ್ತಮ ಒಡ​ನಾಟ ಇಟ್ಟು​ಕೊಂಡವರು. ಸಮಾ​ಜಕ್ಕೆ ಪೂರಕವಾದ ಕೆಲ​ಸ​ಗ​ಳಿಗೆ ನೆರ​ವಾ​ಗುತ್ತಾ ಬಂದ​ವರು. ಇದೀಗ ರಾಜ್ಯ​ದಲ್ಲಿ ಒಂದೆಡೆ ಭೀಕರ ಬರ​ಗಾ​ಲ, ಮತ್ತೊಂದೆಡೆ ನೆರೆ ಮತ್ತು ಪ್ರವಾಹ ಪರಿ​ಸ್ಥಿತಿ ಇದೆ. ಈ ಸಂದ​ರ್ಭ​ದಲ್ಲಿ ಅವರು ಹೇಗೆ ಬಜೆಟ್‌ ಮಂಡಿ​ಸ​ಲಿ​ದ್ದಾರೆ ಎಂದು ರಾಜ್ಯದ ಜನರು ಎದುರು ನೋಡು​ತ್ತಿ​ದ್ದಾ​ರೆ. ಹಿಂದಿ​ನಂತೆ ತಂದೆ​ಯ​ವರು ಈ ಬಾರಿಯೂ ಉತ್ತಮ ಹಾಗೂ ರೈತ​ ಪರ ಬಜೆಟ್‌ ನೀಡ​ಲಿ​ದ್ದಾರೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಶಾಸ​ಕರು ಮತ್ತು ಭಾವಿ ಮಂತ್ರಿ​ ಎಸ್‌.ಟಿ ಸೋಮ​ಶೇ​ಖರ್‌ ಅವರು ಯಾವುದೇ ಪಕ್ಷ​ದ​ಲ್ಲಿ​ದ್ದರೂ ಮಠ​ಗಳು ಹಾಗೂ ಸಮಾಜದ ಏಳಿಗೆ ಪರ ಕಾಳಜಿ ಹೊಂದಿ​ರು​ವ​ವರು. ಈ ಜನ​ಪರ ನಿಲು​ವು​ಗ​ಳಿಂದಲೇ ಅವರು ಗೆದ್ದಿ​ದ್ದಾರೆ ಎಂದರು.