ಹೊರರಾಜ್ಯಗಳಿಂದ ಅಕ್ಕಿ ಖರೀದಿಸುವುದು ಕಮಿಷನ್ ಪಡೆಯುವ ಹುನ್ನಾರ: ಶಾಸಕ ಬಿ.ವೈ.ವಿಜಯೇಂದ್ರ

ರಾಜ್ಯ ಸರ್ಕಾ​ರವು ಅನ್ನ​ಭಾಗ್ಯ ಅಕ್ಕಿ ಯೋಜ​ನೆಗೆ ಹೊರ​ರಾ​ಜ್ಯ​ಗ​ಳಿಂದ ಅಕ್ಕಿ ಖರೀ​ದಿಗೆ ಮುಂದಾ​ಗಿ​ರು​ವು​ದನ್ನು ಬಿಜೆಪಿ ಮುಖಂಡ ಹಾಗೂ ಶಾಸಕ ಬಿ.ವೈ.ವಿಜ​ಯೇಂದ್ರ ವಿರೋ​ಧಿ​ಸಿ​ದ್ದಾರೆ. 

Buying Rice From Outside States is a Chance to Get Commission Says MLA BY Vijayendra gvd

ಬೆಂಗಳೂ​ರು (ಜೂ.17): ರಾಜ್ಯ ಸರ್ಕಾ​ರವು ಅನ್ನ​ಭಾಗ್ಯ ಅಕ್ಕಿ ಯೋಜ​ನೆಗೆ ಹೊರ​ರಾ​ಜ್ಯ​ಗ​ಳಿಂದ ಅಕ್ಕಿ ಖರೀ​ದಿಗೆ ಮುಂದಾ​ಗಿ​ರು​ವು​ದನ್ನು ಬಿಜೆಪಿ ಮುಖಂಡ ಹಾಗೂ ಶಾಸಕ ಬಿ.ವೈ.ವಿಜ​ಯೇಂದ್ರ ವಿರೋ​ಧಿ​ಸಿ​ದ್ದಾರೆ. ಇದರ ಬದಲು ಕರ್ನಾ​ಟ​ಕದ ರೈತ​ರಿಂದಲೇ ಅಕ್ಕಿ ಖರೀ​ದಿಸಿ ನೀಡ​ಬೇಕು ಎಂದು ಆಗ್ರ​ಹಿ​ಸಿ​ದ್ದಾ​ರೆ. ಬಿಜೆಪಿ ಕಚೇ​ರಿ​ಯಲ್ಲಿ ಸುದ್ದಿ​ಗಾ​ರರ ಜತೆ ಮಾತ​ನಾ​ಡಿದ ಅವರು, ‘ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಹಾಸ್ಯಾಸ್ಪದ. ಜತೆಗೆ ಕಮಿಷನ್‌ ಪಡೆಯುವ ಹುನ್ನಾರ ಇದೆ. ರಾಜ್ಯದಲ್ಲಿ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. 

ನಮ್ಮಲ್ಲಿಯೇ ಖರೀದಿಸಿದರೆ ರೈತರಿಗೆ ಅನುಕೂಲವಾಗಲಿದೆ. ಅದನ್ನು ಬಿಟ್ಟು ಛತ್ತೀಸಗಢ, ತೆಲಂಗಾಣದಿಂದ ತರುವುದರ ಹಿಂದೆ ಕಮಿಷನ್‌ ಹುನ್ನಾರ ಇದೆ’ ಎಂದು ಕಿಡಿ​ಕಾ​ರಿ​ದ​ರು. ‘ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಅನುಷ್ಠಾನ ಸಾಧ್ಯವಾಗದಿರುವ ಕಾರಣ ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ, ಎಪಿಎಂಸಿ ಕಾಯ್ದೆ ವಾಪಸ್‌, ಪಠ್ಯಪುಸ್ತಕ ಪರಿಷ್ಕರಣೆಯಂತಹ ತೀರ್ಮಾನಗಳನ್ನು ಮಾಡುತ್ತಿದೆ. ಈ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಮುಂದಾಗಿದೆ. ಅಲ್ಲದೇ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟಿದೆ’ ಎಂದು ವಾಗ್ದಾಳಿ ನಡೆಸಿದರು.

ಅಭಿಷೇಕ್‌-ಅವಿವಾ ಬೀಗರೂಟಕ್ಕೆ ನೂಕು ನುಗ್ಗಲು: ಪೊಲೀಸರಿಂದ ಲಾಠಿ ಪ್ರಹಾರ

ಎಪಿ​ಎಂಸಿ ಕಾಯ್ದೆ ರದ್ದಿಗೆ ವಿರೋ​ಧ: ಮಾಜಿ ಸಚಿವ ಆರ್‌. ಅಶೋಕ್‌ ಮಾತ​ನಾಡಿ, ‘ಹಿಂದೆ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಎಪಿಎಂಸಿ ಆರಂಭವಾಗಿತ್ತು. ಆದೊಂದು ರೀತಿಯ ಗುತ್ತಿಗೆ ನೀಡುವ ಪ್ರಯತ್ನವಾಗಿದ್ದು, ದಲ್ಲಾಳಿಗಳು ಗೇಟಿನಲ್ಲಿಯೇ ನಿಂತು ಖರೀದಿಸಿ ಲಾಭ ಮಾಡುವ ವ್ಯವಸ್ಥೆಯಾಗಿ​ತ್ತು. ನಾವು ಮಾಡಿದ ತಿದ್ದುಪಡಿಯಿಂದ ದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಇದೆ. ನಾವು ತಕ್ಕಡಿಯನ್ನು ರೈತರ ಕೈಗೆ ಕೊಟ್ಟಿದ್ದೆವು. ಆದರೆ, ಕಾಂಗ್ರೆಸ್‌ ದಲ್ಲಾಳಿಗಳ ರಾಜ್ಯ ಮಾಡಲು ಹೊರಟಿದೆ. ದಲ್ಲಾಳಿಗಳಿಗೆ ಉಪಯೋಗ ಮಾಡುವ ಹುನ್ನಾರ ಇದರಡಿ ಇದೆ’ ಎಂದು ಆರೋ​ಪಿ​ಸಿ​ದ​ರು. ಇನ್ನು ಪಠ್ಯಪುಸ್ತಕ ಬದಲಾವಣೆ ಬಗ್ಗೆ ತರಾತುರಿ ಸಲ್ಲದು. ವಿದ್ಯುತ್‌ ದರ ಏರಿಕೆಯಿಂದ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಹೋಗುವ ಮಾತು ಕೇಳುತ್ತಿದೆ. 10 ರು. ನೀಡಿ 20 ರು. ಕಿತ್ತುಕೊಳ್ಳುವ ಗ್ಯಾರಂಟಿ ವ್ಯವಸ್ಥೆಯನ್ನು ಸರ್ಕಾರ ಜಾರಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಹಸ್ರಾರು ಜನರಿಂದ ಅಭಿ-ಅವಿವಾಗೆ ಆಶೀರ್ವಾದ: ಆರತಕ್ಷತೆ ವೇದಿಕೆ ವಿಶೇಷ ಹೂವುಗಳಿಂದ ಅಲಂಕಾರ

ವಿದ್ಯುತ್‌ ದರ ಹೆಚ್ಚಳ ಒಂದು ಕಳ್ಳಾಟವಾಗಿದ್ದು, 70 ಪೈಸೆ ಹೆಚ್ಚಿಸಿದ್ದಾರೆ. ಬೇಕಾದುದೆಲ್ಲ ಕಾಂಗ್ರೆಸ್‌ ಪಕ್ಷದ್ದು, ಬೇಡದ್ದೆಲ್ಲವೂ ಬಿಜೆಪಿಯದ್ದಾಗಿದೆ. ಕೇಂದ್ರವು ಅಕ್ಕಿ ವಿಚಾರದಲ್ಲಿ ಸಮಸ್ಯೆ ತಂದೊಡ್ಡಿದೆ ಎಂದರೆ, ಕೇಳಿದೊಡನೆ ಕೊಡಲು ಕೇಂದ್ರ ಎಂದರೆ ಅತ್ತೆ ಮನೆಯೇ? ಗ್ಯಾರಂಟಿಗಳ ಅನುಷ್ಠಾನಕ್ಕೆ 1.10 ಲಕ್ಷ ಕೋಟಿ ರು. ಹಣ ಬೇಕು. ರಾಜ್ಯ ಇನ್ನೊಂದು ವರ್ಷದಲ್ಲಿ ದಿವಾಳಿಯಾಗಲಿದೆ. ಕಾನೂನನ್ನು ಎಲ್ಲರೂ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಅಂಗನವಾಡಿ, ಸಣ್ಣ ಕೈಗಾರಿಕೆ, ಸ್ತ್ರೀಶಕ್ತಿ ಸಂಘಗಳ ಗಲಾಟೆ ಮುಂದುವರೆಯುವಂತಾಗಿದೆ. ಇದು ಕಾಂಗ್ರೆಸ್‌ನ ಅಜಾಗರೂಕತೆಯ ಸೃಷ್ಟಿಎಂದು ಅಶೋಕ್‌ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್‌ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios