ಅಭಿಷೇಕ್‌-ಅವಿವಾ ಬೀಗರೂಟಕ್ಕೆ ನೂಕು ನುಗ್ಗಲು: ಪೊಲೀಸರಿಂದ ಲಾಠಿ ಪ್ರಹಾರ

ಚಿತ್ರನಟ ಅಂಬರೀಶ್‌ ಹಾಗೂ ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ವಿವಾಹ ನಿಮಿತ್ತ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಉಂಟಾದ ನೂಕು ನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆಯಿತು. 

police lathi charge in abhishek ambareesh aviva bidapa beegara oota gvd

ಮದ್ದೂರು (ಜೂ.17): ಚಿತ್ರನಟ ಅಂಬರೀಶ್‌ ಹಾಗೂ ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ವಿವಾಹ ನಿಮಿತ್ತ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಉಂಟಾದ ನೂಕು ನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆಯಿತು. ಘಟನೆಯಲ್ಲಿ ಮಹಿಳೆಯರು ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಅಂಬಿ ಅಭಿಮಾನಿಗಳು ಹಾಗೂ ಪೊಲೀಸರು ಗಾಯಗೊಂಡರು. ತಾಲೂಕಿನ ಗೆಜ್ಜಲಗೆರೆ ಕಾಲೋನಿಯ ಮೈದಾನದಲ್ಲಿ ಭೀಗರ ಔತಣ ಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಮಹಿಳೆಯರು ಸೇರಿದಂತೆ ಸಹಸ್ರಾರು ಅಭಿಮಾನಿಗಳು ಮಾಂಸದೂಟದ ಸ್ಥಳಕ್ಕೆ ಮುಗಿಬಿದ್ದಿದ್ದರಿಂದ ಸ್ಥಳದಲ್ಲಿ ತೀವ್ರ ನೂಕು ನುಗ್ಗಲು ಉಂಟಾಯಿತು.

ಬ್ಯಾರಿಕೇಡ್‌ಗಳ ಧ್ವಂಸ: ಸ್ಥಳದಲ್ಲಿ ಬಂದೋಬಸ್‌್ತನಲ್ಲಿದ್ದ ಪೊಲೀಸರು ಸರತಿ ಸಾಲಿನಲ್ಲಿ ಬಂದು ಊಟ ಮಾಡುವಂತೆ ಮನವಿ ಮಾಡಿದರು. ಪೊಲೀಸರ ಮನವಿಯನ್ನು ನಿರ್ಲಕ್ಷ್ಯಿಸಿದ ಜನರು ಊಟದ ಹಾಲ್‌ಗೆ ಸರತಿ ಸಾಲಿನಲ್ಲಿ ತೆರಳಲು ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೊಗೆದು ಧ್ವಂಸಗೊಳಿಸಿದ್ದೂ ಅಲ್ಲದೇ, ಊಟದ ಹಾಲ್‌ನ ಟೆಂಟ್‌ಗಳನ್ನು ಹರಿದು ಒಳ ನುಗ್ಗಲು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿ ಮಹಿಳೆಯರೂ ಸೇರಿದಂತೆ ಹಲವು ಅಂಬಿ ಅಭಿಮಾನಿಗಳು ಮತ್ತು ಪೊಲೀಸರು ಗಾಯಗೊಂಡರು. ನೂಕು ನುಗ್ಗಲಿನಲ್ಲಿ ಹಲವು ವೃದ್ಧರು ಅಸ್ವಸ್ಥಗೊಂಡಾಗ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಉಪಚರಿಸಿದರು.

ಸಾಮ, ದಾನ, ಭೇದ, ದಂಡ ನಾಲ್ಕನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು: ಸಿ.ಟಿ.ರವಿ

ಅಡುಗೆ ಮಾಡುತ್ತಿದ್ದ ಸ್ಥಳಕ್ಕೆ ನುಗ್ಗಿದ ಜನರು: ನಂತರ ಊಟದ ಹಾಲ್‌ಗೆ ಜನ ನುಗ್ಗಿದ್ದರಿಂದ ಊಟ ಬಡಿಸುವುದು ನಿಧಾನವಾಯಿತು. ಅರ್ಧ ಗಂಟೆ ಕಾದು ಬೇಸತ್ತ ಜನರು ಅಡುಗೆ ಮಾಡುತ್ತಿದ್ದ ಸ್ಥಳಕ್ಕೆ ನುಗ್ಗಿ ಪಾತ್ರೆಗಳಿಗೆ ಕೈ ಹಾಕಿ, ಮಟನ್‌, ಚಿಕನ್‌, ಬೋಟಿಗೊಜ್ಜು ಹಾಕಿಕೊಂಡು ತಿನ್ನಲಾರಂಭಿಸಿದರು. ಜನ ಏಕಾಏಕಿ ನುಗ್ಗಿದ್ದರಿಂದ ದಿಕ್ಕುತಪ್ಪಿದ ಬಾಣಸಿಗರು ಈ ದೃಶ್ಯವನ್ನು ನೋಡುತ್ತಾ ಅಸಹಾಯಕರಾಗಿ ನಿಂತಿದ್ದರು.

ಬೇಜವಾಬ್ದಾರಿತನದಿಂದ ಅವ್ಯವಸ್ಥೆ: ಕೆಲವರು ಊಟದ ವ್ಯವಸ್ಥೆಗೆ ಬೇಸತ್ತು ಶಪಿಸುತ್ತಾ ತಮ್ಮ ಮನೆಗಳತ್ತ ವಾಪಸ್ಸಾದರು. ಬೀಗರ ಔತಣಕೂಟದ ವ್ಯವಸ್ಥೆಯ ಹೊಣೆ ಹೊತ್ತವರು ಸರಿಯಾಗಿ ವ್ಯವಸ್ಥೆ ಮಾಡದ ಕಾರಣ ಇಂತಹ ಅವ್ಯವಸ್ಥೆಗೆ ಕಾರಣವಾಯಿತು ಎಂದು ಹಿಡಿಶಾಪ ಹಾಕಿದರು. ಕೊನೆಗೆ ಶೇ.50ರಷ್ಟುಜನ ಮಾತ್ರ ಊಟ ಮಾಡಿದ್ದರೆ, ಉಳಿದವರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸಾದರು. ಸಂಸದೆ ಸುಮಲತಾ ಸೇರಿದಂತೆ ಔತಣಕೂಟದ ಜವಾಬ್ದಾರಿ ಹೊತ್ತವರು ಪೊಲೀಸರ ಸಲಹೆಯನ್ನು ನಿರ್ಲಕ್ಷ್ಯ ಮಾಡಿದ್ದೇ ಈ ಘಟನೆಗೆ ಕಾರಣವೆನ್ನಲಾಗಿದೆ.

ಜು.1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡಲು ತೀರ್ಮಾನ: ಡಿ.ಕೆ.ಶಿವಕುಮಾರ್‌

ಊಟ ಬಡಿಸುವವರು ಹೆಚ್ಚಿರಲಿಲ್ಲ: ಔತಣ ಕೂಟಕ್ಕೆ ಬಂದವರಿಗೆ ಟೇಬಲ್‌ ವ್ಯವಸ್ಥೆ ಬೇಡ, ಬಂದವರಿಗೆ ತೊಂದರೆಯಾಗುತ್ತದೆ. ಬಫೆ ಪದ್ಧತಿಯಲ್ಲಿ ಊಟ ನೀಡುವಂತೆ ಪೊಲೀಸ್‌ ಅಧಿಕಾರಿಗಳು ಸಲಹೆ ನೀಡಿದ್ದರು. ಆದರೆ, ಮಂಡ್ಯ ಜಿಲ್ಲೆಯ ಜನರಿಗೆ ಎಲೆಊಟದಲ್ಲೇ ಮಂಡ್ಯ ಶೈಲಿಯ ಬಾಡೂಟ ಬಡಿಸಬೇಕು ಎಂದು ಹಠಕ್ಕೆ ಬಿದ್ದಿದ್ದ ಸಂಸದೆ ಸುಮಲತಾ ಮತ್ತು ಅವರ ಆಪ್ತರು ಟೇಬಲ್‌ ಹಾಕಿ ಊಟದ ವ್ಯವಸ್ಥೆ ಮಾಡಿದ್ದರು. ಆದರೆ, ಊಟ ಬಡಿಸುವಂತಹ ಸಿಬ್ಬಂದಿ ಸಾಕಷ್ಟುಸಂಖ್ಯೆಯಲ್ಲಿ ಇಲ್ಲದ ಕಾರಣ ಹಾಗೂ ಖಾದ್ಯಗಳನ್ನು ಬಡಿಸುವಿಕೆಯ ವಿಧಾನ ವ್ಯತ್ಯಾಸದಿಂದಾಗಿ ಈ ಘಟನೆ ನಡೆಯಲು ಕಾರಣ ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios