Asianet Suvarna News Asianet Suvarna News

ಯಡಿಯೂರಪ್ಪ ಆಪ್ತನಿ​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬೊಮ್ಮಾಯಿ

* ಯಡಿಯೂರಪ್ಪ ಆಪ್ತನಿ​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬೊಮ್ಮಾಯಿ
* ಐಟಿ ದಾಳಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ಆಪ್ತನಿ​ಗೆ ಗೇಟ್ ಪಾಸ್
* ಟೀಕೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ 

BSY close aide umesh gate pass from cm office personal secretary post Over IT Raid rbj
Author
Bengaluru, First Published Oct 8, 2021, 5:42 PM IST
  • Facebook
  • Twitter
  • Whatsapp

ಬೆಂಗಳೂರು, (ಅ.08): ಆದಾಯ ತೆರಿಗೆ ಇಲಾಖೆ( Income Tax Department) ಅಧಿಕಾರಿಗಳ ದಾಳಿ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ಆಪ್ತ ಉಮೇಶ್​ ಅವರಿಗೆ ಸಿಎಂ ಕಚೇರಿ ಡ್ಯೂಟಿಯಿಂದ ಗೇಟ್ ​ಪಾಸ್ ನೀಡಲಾಗಿದೆ.

 ಉಮೇಶ್ (Umesh)​ ಅವರ ಅನ್ಯ ಸೇವೆ ನಿಯೋಜನೆಯನ್ನು ಇಂದು (ಅ.08) ಬಿಎಂಟಿಸಿ (BMTC) ವಾಪಸ್ ಪಡೆದಿದೆ. ಸರ್ಕಾರದ ಆದೇಶದಿಂದ ಇನ್ಮುಂದೆ ಉಮೇಶ್​ ಅವರು ಸಿಎಂ ಸಚಿವಾಲಯದಲ್ಲಿ ಅನ್ಯಸೇವೆ ಆಧಾರದ ಮೇಲೆ ಕರ್ತವ್ಯಕ್ಕೆ ತಡೆ ಬಿದ್ದಿದೆ. ಟೀಕೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರ (Karnataka Government) ಈ ನಿರ್ಧಾರ ಕೈಗೊಂಡಿದೆ.

ಕೋಟಿ ಒಡೆಯನಾದರೂ ಬಿಎಸ್‌ವೈ ಆಪ್ತ ಉಮೇಶ್ ಬಾಡಿಗೆ ಮನೆಯಲ್ಲಿದ್ದಿದ್ಯಾಕೆ.?

ಈ ಮೊದಲು ಉಮೇಶ್ ಬಿಎಂಟಿಸಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ನಂತರದ ದಿನಗಳಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಹತ್ತಿರವಾಗಿ ಸಿಎಂ ಸಚಿವಾಲಯದ ನೀರಾವರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಇವರ ಕರ್ತವ್ಯದಲ್ಲಿ ಭ್ರಷ್ಟಾಚಾರ (corruption) ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಿನ್ನೆ (ಅ.07) ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನ (Bengaluru) ಬಾಷ್ಯಂ ಸರ್ಕಲ್‍ನಲ್ಲಿರುವ ಉಮೇಶ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಸರ್ಕಾರ ಸಿಎಂ ಕಚೇರಿಯಿಂದ ಗೇಟ್​ಪಾಸ್ ನೀಡಿದೆ.

ಬಿಎಸ್‌ವೈ ಆಪ್ತನ ಮೇಲೆ ಐಟಿ ದಾಳಿ ಹಿಂದಿನ ರಹಸ್ಯ ಹೇಳಿದ HDK!

ಶಿವಮೊಗ್ಗ (Shivamogga) ಜಿಲ್ಲೆಯ ಆಯನೂರು ಮೂಲದ ಉಮೇಶ್, 2007ರಲ್ಲಿ ಬಿಎಂಟಿಸಿ ಬಸ್ (Bus) ಕಂಡಕ್ಟರ್ ಕಂ ಡ್ರೈವರ್ ಆಗಿದ್ದ. ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಕೆಲಸಕ್ಕಿದ್ದ.  ಬಳಿಕ ಉಮೇಶ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದ.

 ಅಲ್ಲದೇ ಬಿಎಸ್ವೈ ಪುತ್ರ ಸಂಸದ ರಾಘವೇಂದ್ರಗೂ ಉಮೇಶ್ ಪಿಎ ಆಗಿದ್ದ. ಈಗ ಸಿಎಂ ಸಚಿವಾಲಯದ ಸಹಾಯಕನಾಗಿ ಮುಂದುವರೆದಿದ್ದ, ಐಟಿ ರೆಡ್ (IT Raid) ಬೆನ್ನಲ್ಲೇ ಸಿಎಂ ಆಪ್ತ ಸಹಾಯಕನ ಹುದ್ದೆಯಿಂದ ಸೀದಾ ಮಾತೃ ಇಲಾಖೆಗೆ ವಾಪಸ್ ಆಗುವಂತೆ ಸಿಎಂ ನಿನ್ನೆ ಆದೇಶ ಹೊರಡಿಸಿದ್ದಾರೆ.  ಹೀಗಾಗಿ ಸಿಎಂ ಸೂಚನೆ ಮೇರೆಗೆ ಬಿಎಂಟಿಸಿ ಅನ್ಯಸೇವೆ ನಿಮಿತ್ತ ನಿಯೋಜನೆ ಆದೇಶ ವಾಪಸ್ ಪಡೆದಿದೆ

ಕುಮಾರಸ್ವಾಮಿ ಪ್ರತಿಕ್ರಿಯೆ
ಬಿಎಸ್‌ ಯಡಿಯೂರಪ್ಪ  ಆಪ್ತರ ಮೇಲೆ ನಡೆದ ದಾಳಿ ಬಿಎಸ್‌ವೈ ಮೇಲೆ ಹಿಡಿತ ಸಾಧಿಸಲು ನಡೆಸಿರಬಹುದು. ನೀರಾವರಿ ನಿಗಮದ ಟೆಂಡರ್ ವಿಚಾರದಲ್ಲಿ ನಡೆದಿದೆ. ಟೆಂಡರ್‌ನಲ್ಲಿ (Tender) ಗೋಲ್‌ಮಾಲ್‌ ನಡೆದಿದೆ ಎನ್ನುವ ಆರೋಪವು ಕೇಳಿ ಬಂದಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD kumaraswamy) ಹೇಳಿದ್ದರು. 

Follow Us:
Download App:
  • android
  • ios