ಬಿಜೆಪಿ ಟಿಕೆಟ್ ಮಿಸ್ ಆಗಲು ಬಿಎಸ್‌ವೈ, ವಿಜಯೇಂದ್ರ ಕಾರಣ: ಗೂಳಿಹಟ್ಟಿ ಶೇಖರ್
ಬಿಜೆಪಿ ಮೊದಲ ಪಟ್ಟಿ ರಿಲೀಸ್ ಆದ ಬೆನ್ನಲ್ಲೇ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಹಾಲಿ ಶಾಸಕ ಗೂಳಿಹಟ್ಟಿ ಶೇಖರ್‌ಗೆ ಬಿಜೆಪಿ ಟಿಕೆಟ್ ಮಿಸ್ ಆಗಿದ್ದೇ ತಡ, ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಪಕ್ಷೇತರ ಅಭ್ಯರ್ಥಿ ಅಥವಾ ರೆಡ್ಡಿ ಪಕ್ಷದಿಂದ ಕಣಕ್ಕಿಳಿಯಲು ಗೂಳಿಹಟ್ಟಿ ತಯಾರಿ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಏ.12): ಬಿಜೆಪಿ ಮೊದಲ ಪಟ್ಟಿ ರಿಲೀಸ್ ಆದ ಬೆನ್ನಲ್ಲೇ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಹಾಲಿ ಶಾಸಕ ಗೂಳಿಹಟ್ಟಿ ಶೇಖರ್‌ಗೆ ಬಿಜೆಪಿ ಟಿಕೆಟ್ ಮಿಸ್ ಆಗಿದ್ದೇ ತಡ, ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಪಕ್ಷೇತರ ಅಭ್ಯರ್ಥಿ ಅಥವಾ ರೆಡ್ಡಿ ಪಕ್ಷದಿಂದ ಕಣಕ್ಕಿಳಿಯಲು ಗೂಳಿಹಟ್ಟಿ ತಯಾರಿ. ಅಷ್ಟಕ್ಕೂ ಗೂಳಿಹಟ್ಟಿ ಟಿಕೆಟ್ ತಪ್ಪಿಸಿದ್ದು ಯಾರು? ಗೂಳಿಯ ಮುಂದಿನ ನಡೆಯಾದ್ರು ಏನು ಅನ್ನೋದ್ರ ಕಂಪ್ಲೀಟ್ ವರದಿ ಇಲ್ಲಿದೆ. ಬಿಜೆಪಿ ಪಟ್ಟಿ ರಿಲೀಸ್ ಅಗ್ತಿದ್ದಂತೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತ ಸ್ಪೋಟಗೊಂಡಿದೆ.
ಹಾಲಿ ಶಾಸಕ ಗೂಳಿಹಟ್ಟಿ ಶೇಖರ್‌ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ನಾಯಕರ ವಿರುದ್ದ ಗೂಳಿ ಗುಟುರು ಹಾಕಿದ್ದಾರೆ. 2008ರಲ್ಲಿ ಬಿಎಸ್‌ವೈ ಸಿಎಂ ಆಗಲಿಕ್ಕೆ ಪ್ರಮುಖ ಕಾರಣ ಆಗಿದ್ದರಲ್ಲಿ ನಾನೇ ಮೊದಲಿಗ. ಅಂದು ಪಕ್ಷಕ್ಕೆ ನನ್ನ ಅವಶ್ಯಕತೆ ಇತ್ತು. ಆದ್ರೆ ಇಂದು ಬೇಡವಾಗಿದೆ, ಪರವಾಗಿಲ್ಲ ಸಾಮಾನ್ಯ ಕ್ಷೇತ್ರದಲ್ಲಿ ಎಸ್ಪಿ ಸಮುದಾಯದ ನಾನು ಟಿಕೆಟ್ ಕೇಳಿದ್ದು ತಪ್ಪು ಹಾಗಾಗಿ ಸಾಮಾಜಿಕ ನ್ಯಾಯದಡಿ ಬಿಜೆಪಿ ಟಿಕೆಟ್ ನೀಡಿದೆ. ಆದ್ರೆ ನನಗೆ ಈ ಬಾರಿ ಟಿಕೆಟ್ ತಪ್ಪಿಸಲು ಪ್ರಮುಖ ಕಾರಣ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ. ಯಾಕಂದ್ರೆ ಸರ್ಕಾರದ ಅವಧಿಯಲ್ಲಿಯೂ ನನಗೆ ಬೇಕಾಬಿಟ್ಟಿ ನಿಗಮ ಮಂಡಳಿ ಕೊಟ್ಟರು.
ಏಕೆ ಚಡಪಡಿಸ್ತೀಯ ಅಣ್ಣಾ?: ಸವದಿಗೆ ರಮೇಶ್ ಜಾರಕಿಹೊಳಿ ಟಾಂಗ್
ಬಿಎಸ್ ವೈ ಅವರ ಆಪ್ತರಿಗೆ ಅತ್ಯುತ್ತಮ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಕೊಟ್ರು ಅದ್ರಲ್ಲಿ ಲಿಂಗಮೂರ್ತಿ ಕೊಟ್ಟ ಖನಿಜ ನಿಗಮವೂ ಒಂದು. ಯಡಿಯೂರಪ್ಪ ಅವರು ಅವರ ಆಪ್ತರಿಗೆ ಒಳಿತಾಗಲಿ ಎಂದು ಬೆಂಬಲಿಗರ ಟೀಂ ಕಟ್ಟುವ ಸಲುವಾಗಿ ಈ ರೀತಿ ಮಾಡಿದ್ರು. ನನಗೆ ಬಿಜೆಪಿಯಲ್ಲಿ ಯಾವುದೇ ಗಾಡ್ ಫಾದರ್ ಗಳಿಲ್ಲ, ಹಾಗಾಗಿ ಬಿಎಸ್ ವೈ ಅವರು ಹಾಗೂ ವಿಜಯೇಂದ್ರ ಅವರಿಂದಲೇ ನನಗೆ ಟಿಕೆಟ್ ತಪ್ಪಿದೆ ಎಂದು ಬಿಎಸ್ ವೈ ವಿರುದ್ದವೇ ಗುಡುಗಿದರು. ಇನ್ನೂ ಬಿಜೆಪಿ ಟಿಕೆಟ್ ಮಿಸ್ ಆಗಿದ್ದು ತಿಳಿದ ಕೂಡಲೇ, ಹೊಸದುರ್ಗ ತಾಲ್ಲೂಕಿನ ಹಾರನ ಕಣಿವೆ ರಂಗನಾಥಸ್ವಾಮಿ ದೇವಾಲಯ ಬಳಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದರು.
ಸುಮಾರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ದ ಗೂಳಿ ಆಕ್ರೋಶ ಹೊರಹಾಕಿದರು. ಅಲ್ಲದೇ ಬಿಜೆಪಿ ಸರ್ಕಾರ ಬರಲು ನಾನು ತ್ಯಾಗ ಮಾಡಿದ ಕೆಲಸವನ್ನು ಲೆಕ್ಕಿಸದೇ ಇಂದು ಈ ರೀತಿ ಮಾಡಿದ್ದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ತಮ್ಮ ಕಾರ್ಯಕರ್ತರ ಮುಂದೆ ಅಳಲು ತೋಡಿಕೊಂಡರು. ಇನ್ನೂ ಗೂಳಿಹಟ್ಟಿ ಶೇಖರ್ ಅವರಿಗೆ ಕ್ಷೇತ್ರದಲ್ಲಿ ಲಿಂಗಾಯುತ ವಿರೋಧಿ ಅಲೆ ಇದೆ ಎಂಬ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೋ ಕೆಲ ಮುಖಂಡರ ಕುತಂತ್ರದಿಂದ ಈ ರೀತಿ ಕ್ಷೇತ್ರದಲ್ಲಿ ತಪ್ಪು ಮಾಹಿತಿ ರವಾನೆ ಆಗ್ತಿದೆ. ಇಲ್ಲಿ ಸಭೆ ಸೇರಿರೋ ಬಹುತೇಕ ಮಂದಿ ಲಿಂಗಾಯತ ಸಮುದಾಯದವರು ಇದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್ ಮಂತ್ರಿ ಆಗಲೆಂದು ರಥಕ್ಕೆ 111 ಬಾಳೆಹಣ್ಣು ಸಮರ್ಪಣೆ
ನಾನು ಲಿಂಗಾಯತ ವಿರೋಧಿ ಶಾಸಕ ಅಲ್ಲ ಅವರ ಪರ ಹಾಗೂ ಕಟ್ಟ ಕಡೆಯ ಸಮುದಾಯದ ವ್ಯಕ್ತಿಯ ಪರವಾಗಿದ್ದೇನೆ. ಸದ್ಯದಲ್ಲೇ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕಿಳಿಯಬೇಕೋ? ಅಥವಾ ಜನಾರ್ಧನ ರೆಡ್ಡಿ ಅವರು ಸಂಪರ್ಕ ಮಾಡಿರುವ ಕಾರಣ ಅವರ ಪಕ್ಷದಿಂದ ಕಣಕ್ಕಿಳಿಯಬೇಕೋ ಎಂಬುದನ್ನು ಶೀಘ್ರದಲ್ಲೇ ತಿಳಿಸುವೆ ಎಂದರು. ಒಟ್ಟಾರೆ ಹೊಸದುರ್ಗ ಕ್ಷೇತ್ರದಲ್ಲಿ ಗೂಳಿಹಟ್ಟಿ ಶೇಖರ್ ಗೆ ಬಿಜೆಪಿ ಟಿಕೆಟ್ ಮಿಸ್ ಮಾಡಿರೋದು ಕ್ಷೇತ್ರದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಕೊಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಗೂಳಿಹಟ್ಟಿ ಶೇಖರ್ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬುದೇ ಸದ್ಯಕ್ಕೆ ಕ್ಷೇತ್ರದಲ್ಲಿರುವು ಕುತೂಹಲ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.