Asianet Suvarna News Asianet Suvarna News

ಲಕ್ಷ್ಮೀ ಹೆಬ್ಬಾಳಕರ್‌ ಮಂತ್ರಿ ಆಗಲೆಂದು ರಥಕ್ಕೆ 111 ಬಾಳೆಹಣ್ಣು ಸಮರ್ಪಣೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಅಭಿಮಾನಿಗಳು ಖಾನಾಪೂರ ತಾಲೂಕಿನ ಮಲಪ್ರಭಾ ನದಿ ತೀರದ ಚಿಕ್ಕಹಟ್ಟಿಹೊಳಿ ವೀರಭದ್ರೇಶ್ವರ ಜಾತ್ರೆ ವೇಳೆ ಹೆಬ್ಬಾಳಕರ ಮುಂದಿನ ಬಾರಿ ಸಚಿವೆ ಆಗಲೆಂದು ದೇವರ ರಥಕ್ಕೆ ಬಾಳೆಹಣ್ಣು ಸಮರ್ಪಿಸಿದ್ದಾರೆ. 

111 bananas are dedicated to the chariot of Lakshmi Hebbalkar to become minister gvd
Author
First Published Apr 9, 2023, 7:22 AM IST

ಬೆಳಗಾವಿ (ಏ.09): ಜಿಲ್ಲೆಯ ಖಾನಾಪೂರ ತಾಲೂಕಿನ ಮಲಪ್ರಭಾ ನದೀ ತೀರದ ಚಿಕ್ಕಹಟ್ಟಿಹೊಳಿ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ಸಂಭ್ರಮದಿಂದ ಜರುಗಿತು. ರಥೋತ್ಸವ ಜರುಗುವ ಸಂಭ್ರಮದಲ್ಲಿ ಲಕ್ಷ್ಮೀ ಹೆಬ್ಬಾಳಕರ ತವರೂರು ಅಭಿಮಾನಿ ಬಳಗ ಚಿಕ್ಕಹಟ್ಟಿಹೊಳಿಯ ಅಧ್ಯಕ್ಷರು ಸರ್ವ ಸದಸ್ಯರು ಸೇರಿ ಬಾಳೆಹಣ್ಣಿನ ಮೇಲೆ ಲಕ್ಷ್ಮೀ ಅಕ್ಕಾ 2023 ಮಂತ್ರಿ ಪಕ್ಕಾ ಎಂದು ಬರೆದು 111 ಬಾಳೆ ಹಣ್ಣುಗಳನ್ನು ರಥೋತ್ಸವ ಜರುಗುವ ಸಂಭ್ರಮದಲ್ಲಿ ಭಕ್ತಿಯಿಂದ ವೀರಭದ್ರೇಶ್ವರನಲ್ಲಿ ಬೇಡಿಕೊಂಡು ಭಕ್ತಿಯಿಂದ ರಥಕ್ಕೆ ಬಾಳೇಹಣ್ಣನ್ನು ಸಮರ್ಪಿಸಿದರು. 

ಈ ವೇಳೆ ಲಕ್ಷ್ಮಿ ಹೆಬ್ಬಾಳಕರ ತವರೂರು ಅಭಿಮಾನಿ ಬಳಗದ ಅಧ್ಯಕ್ಷರಾದ ವೀರಭದ್ರ ಸಣ್ಣಕ್ಕಿ, ಜಗದೀಶ ಕಾದ್ರೊಳ್ಳಿ , ಮಂಜುನಾಥ ಮಾಸ್ತಮರಡಿ, ಈರಯ್ಯ ಹಾಲಗಿಮರ್ಡಿ, ನಾಗರಾಜ ಸಣ್ಣಕ್ಕಿ, ಶ್ರೀಧರ ಜೈನರ, ಪ್ರಕಾಶ ತಳವಾರ, ಸೇರಿದಂತೆ ಗ್ರಾಮದ ಹಿರಿಯರು ಹಾಜರಿದ್ದರು. ಕುಕಡೊಳ್ಳಿ, ಎಮ್ ಕೆ ಹುಬ್ಬಳ್ಳಿ, ಪಾರೀಶ್ವಾಡ ಹಿರೆಬಾಗೇವಾಡಿ, ಅರಳಿಕಟ್ಟಿ,ಬಸ್ಸಾಪೂರ, ಸೇರಿದಂತೆ ಜಿಲ್ಲೆಯ ವಿವಿದ ಗ್ರಾಮಗಳ ಭಕ್ತರು ಸೇರಿದಂತೆ ಧಾರವಾಡ, ಬಾಗಲಕೋಟಿ, ಹಾವೇರಿ, ವಿಜಯಪೂರ, ಜಿಲ್ಲೆಗಳಿಂದ ಮತ್ತು ಮಹಾರಾಷ್ಟ್ರ ರಾಜ್ಯದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

8ನೇ ಬಾರಿ ಪ್ರಧಾನಿ ಮೋದಿ ಮೈಸೂರಿಗೆ: ಬಂಡೀಪುರದಲ್ಲಿಂದು ಟೈಗರ್ ಸಫಾರಿ

ಹುಳ್ಕಿಹಾಳದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ರಥೋತ್ಸವ: ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಸುವರ್ಣ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಅಲಂಕರಿಸಿದ ರಥದಲ್ಲಿ ಕಳಶ ಕೂರಿಸಿ ಪೂಜೆ ಸಲ್ಲಿಸಿದ ಬಳಿಕ ಹರ-ಚರ-ಗುರು ಮೂರ್ತಿಗಳು ಉತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಮುಂಭಾಗದಲ್ಲಿ ಆರಂಭಗೊಂಡ ರಥೋತ್ಸವ ರಥ ಬೀದಿಯ ಮೂಲಕ ನಿಧಾನವಾಗಿ ಚಲಿಸುತ್ತಿದ್ದಂತೆಯೇ ಭಕ್ತ ಸಮೂಹದ ಹರ್ಷೋದ್ಗಾರ ಮುಗಿಲು ಮುಟ್ಟಿತು. ಭಕ್ತರು ರಥಕ್ಕೆ ಉತ್ತುತ್ತಿ ಹಾಗೂ ಬಾಳೆಹಣ್ಣುಗಳನ್ನು ಸಮರ್ಪಿಸಿದರು. ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹುಳ್ಕಿಹಾಳ, ಹುಳ್ಕಿಹಾಳ ಕ್ಯಾಂಪ್‌, ದುಂಡಗಿ, ಹಗೇದಾಳ, ತೊಂಡಿಹಾಳ, ಇತರ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ14 ಜೋಡಿಗಳು: ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ ಸಾಮೂಹಿಕ ಮದುವೆ ಸಮಾರಂಭ ಹಿನ್ನೆಲೆಯಲ್ಲಿ 14 ಜೋಡಿ ನವದಂಪತಿ ಸಪ್ತಪದಿ ತುಳಿದರು. ಹೆಬ್ಬಾಳದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ದಾಪುರ ಪಾಲಾಕ್ಷಯ್ಯ ತಾತನವರು ನವದಂಪತಿಗಳನ್ನು ಆಶೀರ್ವದಿಸಿ, ಆಶೀರ್ವಚನ ನೀಡಿದರು. ಬಡ ಕುಟುಂಬದ ಹಾಗೂ ಮಧ್ಯಮ ವರ್ಗದ ಜನತೆಗೆ ಇಂಥ ಸಾಮೂಹಿಕ ಮದುವೆಗಳು ಬಹಳಷ್ಟುಸಹಕಾರಿಯಾಗುತ್ತವೆ. ಮಠ-ಮಂದಿರ ಹಾಗೂ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜರುಗುವ ಸಾಮೂಹಿಕ ಮದುವೆಗಳು ಬಹಳಷ್ಟುಮಹತ್ವ ಪಡೆದಿವೆ ಎಂದು ಹೇಳಿದರು.

ಅಮುಲ್‌ನಿಂದ ನಂದಿನಿಗೆ ನಷ್ಟವಿಲ್ಲ: ಪೈಪೋಟಿ ಎದುರಿಸಲು ನಾವು ಸಮರ್ಥವೆಂದ ಕೆಎಂಎಫ್‌

ಸಾಮೂಹಿಕ ವಿವಾಹಕ್ಕೂ ಮುಂಚೆ ಹರ-ಚರ-ಗುರು ಮೂರ್ತಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ 6 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ 501 ಕಳಸ ಕುಂಭಗಳೊಡನೆ ಗಂಗೆಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಆನಂತರ ಗ್ರಾಮದ ರಾಜಬೀದಿಯ ಮೂಲಕ ಬಾಜಿ ಭಜಂತ್ರಿಗಳೊಂದಿಗೆ ಮೆರವಣಿಗೆಯಲ್ಲಿ ದೇವಸ್ಥಾನವನ್ನು ತಲುಪಿದರು. ಆನಂತರ ಅನ್ನಪ್ರಸಾದ ನೀಡಲಾಯಿತು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios