Asianet Suvarna News Asianet Suvarna News

ಹೈಕಮಾಂಡ್‌ ಜೊತೆ ಬಿಎಸ್‌ವೈ ಸಭೆ ಅಂತ್ಯ: ಏನೆಲ್ಲಾ ಚರ್ಚೆ ನಡೆದಿರಬಹುದು..?

 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಸಭೆ ಅಂತ್ಯವಾಗಿದೆ. ಸುಮಾರ 45 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗೆ ಎನ್ನುವುದು ಕುತೂಹಲ ಮೂಡಿಸಿದೆ.

BS Yediyurappa Meeting Ends With BJP High command at New Delhi rbj
Author
Bengaluru, First Published Jan 10, 2021, 4:48 PM IST

ನವದೆಹಲಿ, (ಜ.10):  ವರಿಷ್ಠರ ಕರೆ ಮೇರೆಗೆ ಇಂದು (ಭಾನುವಾರ) ನದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೈಕಮಾಂಡ್‌ ಜೊತೆ ಸುದೀರ್ಘ ಚರ್ಚೆ ನಡೆಸಿ ಆಚೆ ಬಂದಿದ್ದಾರೆ.

ನವದೆಹಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಜೊತೆ ಸುಮಾರು 45 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ.

ಸಭೆಯಲ್ಲಿ ಮುಂಬರುವ ಬೆಳಗಾವಿ, ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರ ಉಪಚುನಾವಣೆ ಹಾಗೂ  ಸಚಿವ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಃರಚನೆಯ ಬಗ್ಗೆಯೂ  ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.

ಸಂಪುಟ ಕಸರತ್ತು, ಸಿಎಂ ಪಟ್ಟಿಯಲ್ಲಿದೆ ಈ ಸಚಿವಾಕಾಂಕ್ಷಿಗಳ ಹೆಸರು, ಇಲ್ಲಿದೆ ಟ್ವಿಸ್ಟ್! 

ಆದರೆ ಸಭೆಯ ನಂತರ ಸುದ್ದಿಗಾರರಿಗೆ ಯಾವುದೇ ಮಾಹಿತಿ ನೀಡದೆ ಯಡಿಯೂರಪ್ಪನವರು ನೇರವಾಗಿ ಕರ್ನಾಟಕ ಭವಕ್ಕೆ ತೆರಳಿದ್ದು, ಇನ್ನೇನು ಸಮಯದಲ್ಲಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಗಳಿವೆ.
BS Yediyurappa Meeting Ends With BJP High command at New Delhi rbj

ಸಿಎಂ ಬಿಎಸ್ ವೈ ಹೈಕಮಾಂಡ್ ಭೇಟಿ ರಾಜ್ಯದ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಮತ್ತಷ್ಟು ಆಸೆ ಚಿಗುರೊಡೆದಿದೆ. ಆದ್ರೆ, ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸಂಪುಟ ವಿಸ್ತರಣೆಗೆ ಸಿಎಂ ಬಿಎಸ್ ವೈ ಒಲವು ಹೊಂದಿದ್ದು, ವರಿಷ್ಠರು ಯಾವ ಸೂಚನೆ ನೀಡಿದ್ದಾರೆ ಎನ್ನುವುದು ಬಿಎಸ್‌ವೈ ಸ್ಪಷ್ಟಪಡಿಸಬೇಕಿದೆ.

Follow Us:
Download App:
  • android
  • ios