Asianet Suvarna News Asianet Suvarna News

BJP Core Committee Meeting ಸಿದ್ಧರಾಮಯ್ಯ ವಿರುದ್ಧ BSY ಗುಡುಗು

ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚುನಾವಣೆ ತಯಾರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಭೆಗೂ ಮುನ್ನ ಬಿ ಎಸ್ ವೈ ಪತ್ರಿಕಾಗೋಷ್ಠಿ ನಡೆಸಿ   ಕಾಂಗ್ರೆಸ್  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

BS  Yediyurappa lashes siddaramaiah in bjp core committee meeting gow
Author
First Published Apr 19, 2022, 3:23 PM IST

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ(ಏ.19): ದಾವಣಗೆರೆ (Davanagere) ಜಿ ಎಂ ಐಟಿ ಗೆಸ್ಟ್ ಹೌಸ್ ನಲ್ಲಿ ವಿಭಾಗೀಯ ಮಟ್ಟದ ಸಭೆ ಬಿಜೆಪಿ (BJP) ಕೋರ್ ಕಮಿಟಿ ಸಭೆ ನಡೆಯುತ್ತಿದೆ. ಬಿಎಸ್ ಯಡಿಯೂರಪ್ಪ (BS Yediyurappa), ಸಚಿವ ಗೋವಿಂದ ಕಾರಜೋಳ (govind karjol) , ಆರ್ ಆಶೋಕ್ , ಬೈರತಿ ಬಸವರಾಜ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಬಿಜೆಪಿ ಮುಖಂಡರ  ನೇತೃತ್ವದಲ್ಲಿ ಎರಡು ದಿನಗಳ ಸಭೆ ನಡೆಯುತ್ತಿದೆ. ದಾವಣಗೆರೆ ತುಮಕೂರು ಚಿತ್ರದುರ್ಗ ಜಿಲ್ಲೆಗಳ ಕೋರ್ ಕಮಿಟಿ ಸಭೆಯಲ್ಲಿ ಚುನಾವಣೆ ತಯಾರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಭೆಗೂ ಮುನ್ನ ಬಿ ಎಸ್ ವೈ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆ ತಯಾರಿ ಸಭೆ ರಾಜ್ಯಪ್ರವಾಸದ ಬಗ್ಗೆ ಮಾಹಿತಿ ನೀಡಿ ಕಾಂಗ್ರೆಸ್  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ ಗಲಭೆ ಬಗ್ಗೆ ಮಾತನಾಡಿದ ಬಿಎಸ್‌ವೈ,  6.30 ಕ್ಕೆ ಘಟನೆ ನಡೆದು 7.30 ಕ್ಕೆ ಹಿಂದೂ ಕಾರ್ಯಕರ್ತನ ಹಿರೇಮಠರನ್ನು  ಬಂಧಿಸಿದ್ದಾರೆ  ಘಟನೆ ನಂತರ ಒಂದೂವರೆ ಸಾವಿರ ಜನ ಕಲ್ಲುತೂರಾಟ ನಡೆಸಿದ್ದಾರೆ ಮುಸ್ಲಿಂ ನಾಯಕ ಅಲ್ತಾಪ್ ಹಳ್ಳೂರು ಕಾರಣ ಎಂಬುದು ಜಗಜ್ಜಾಹಿರ ವಾಗಿದೆ  ಕಾಂಗ್ರೆಸ್ ನಾಯಕರು ಅಮಾಯಕರನ್ನು ಬಂಧಿಸಬೇಡಿ ಎಂದು ಹೇಳುತ್ತಿದ್ದಾರೆ ಕಾಂಗ್ರೆಸ್ ಮುಖಂಡರು ಅಮಾಯಕರ ಹೆಸರಿನಲ್ಲಿ ರಾಜಕೀಯ ಮಾತನಾಡುತ್ತಿದ್ದಾರೆ  ಸಿದ್ದರಾಮಯ್ಯ (siddaramaiah) ನವರು ಹುಬ್ಬಳ್ಳಿಗೆ ಹೋಗಿ ವಾಸ್ತವಿಕತೆಯನ್ನು ತಿಳಕೊಳ್ಳಬೇಕು. ಆ ನಂತರ ವಿರೋಧ ಪಕ್ಷದ ನಾಯಕರು ಮಾತನಾಡಬೇಕು.

 

DHARWAD ಅಕ್ರಮ ಅಕ್ಕಿ ದಂಧೆಕೋರರ ಹೆಡೆಮುರಿ ಕಟ್ಟಿದ ಖಡಕ್ ಎಸಿ

ಗೃಹ ಸಚಿವರ ಬದಲಾವಣೆ ಇಲ್ಲ: ಗೃಹ ಸಚಿವ ಅರಗ ಜ್ನಾನೆಂದ್ರ  ಒಳ್ಳೆ ಕೆಲಸ ಮಾಡುತ್ತಿದ್ದಾರೆ.  ಗೃಹ ಸಚಿವರು ಬದಲಾಯಿಸುವ ಪ್ರಶ್ನೆ ಇಲ್ಲ ಎಂದು  ಬಿಎಸ್ ವೈ ಗೃಹ ಸಚಿವರನ್ನು ಸಮರ್ಥಿಸಿಕೊಂಡಿದ್ದಾರೆ. ಯಾರೋ ಒಬ್ಬರು ನಮ್ಮವರು ಅವರ ವಿರುದ್ಧ ಮಾತನಾಡಿದ್ರು ಅಂದ ತಕ್ಷಣ ಕ್ರಮ ಕೈಗೊಳ್ಳುವುದಕ್ಕೆ ಆಗುವುದಿಲ್ಲವೆಂದು ಪರೋಕ್ಷವಾಗಿ ಯತ್ನಾಳ್ ಗೆ ತಿರುಗೇಟು ನೀಡಿದ್ದಾರೆ. ಗದುಗಿನ  ದಿಂಗಾಲೇಶ್ವರ ಶ್ರೀ ಮಠಾಧಿಪತಿಗಳಾಗಿ ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದು 30 ಪರ್ಸೆಂಟ್ ಕೇಳಿದವರು ಯಾರು ಅವರ ಬಗ್ಗೆ ಮಾಹಿತಿ ಕೊಡಿ ಎಂದು ಹೇಳಿದ್ದಾರೆ. ಆ ಬಗ್ಗೆ ಮಾಹಿತಿ ನೀಡಲಿ ಎಂದಿದ್ದಾರೆ.

ಈಶ್ವರಪ್ಪ ಯಾವುದೇ ಅಪರಾಧ ಮಾಡಿಲ್ಲ ನನಗೆ ವಿಶ್ವಾಸವಿದೆ   ಅವರು ಆರೋಪ ಮುಕ್ತರಾಗಿ ಮತ್ತೆ ಸಚಿವರಾಗಲಿದ್ದಾರೆ ಅವರು ನಮ್ಮ ಜೊತೆ ಇದ್ದು ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ.  ತನಿಖೆ ಆದೇಶ ಮಾಡಲಾಗಿದೆ ತನಿಖೆಯಾದರೆ ಸತ್ಯಾಂಶ ಹೊರಬರಲಿದೆ ಎಂದು ಈಶ್ವರಪ್ಪನವರನ್ನು ಸಮರ್ಥಿಸಿಕೊಂಡಿದ್ದಾರೆ. 

ನಿನ್ನೆ ವಿಜಯನಗರದಲ್ಲಿ  ನಮ್ಮ ರಾಷ್ಟ್ರೀಯ ಅದ್ಯಕ್ಷ ಜೆಪಿ ನಡ್ಡಾ ಎರಡು ದಿನ ಸುಧೀರ್ಘ ಸಭೆ ಮಾಡಿದ್ದಾರೆ 150 ಸೀಟು ಗೆಲ್ಲುವುದಕ್ಕೆ ಗುರಿ‌ ಇಟ್ಟುಕೊಂಡು ರಾಜ್ಯ ಪ್ರವಾಸ ಆರಂಭಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ, ಬೊಮ್ಮಾಯಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಬೇಕಿದೆ ಒಂದು ವರ್ಷಕ್ಕಿಂತ ಮುಂಚೆ ಚುನಾವಣೆ ತಯಾರಿ ಆರಂಭಿಸಿದ್ದು 150 ಸೀಟು ಗೆಲ್ಲುವ ವಿಶ್ವಾಸ ಇದೆ. ಎರಡು ದಿನದ ಸಭೆ ನಂತರ ಮತ್ತೊಮ್ಮೆ ರಾಜ್ಯ ಪ್ರವಾಸ ಎಲ್ಲಾ ಕಡೆ ಆರಂಭವಾಗುತ್ತೆ ಇಡೀ ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದೆ ಜನ‌ ಕಾಂಗ್ರೆಸ್ ನ್ನು ತಿರಸ್ಕಾರ ಮಾಡಿದ್ದಾರೆ  ಕಾಂಗ್ರೆಸ್ ಮುಕ್ತ ದೇಶವಾಗಿದೆ ಆದ್ರೆ ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಇದೊಂದು ಬಾರಿ ಗೆದ್ದರೆ ಕಾಂಗ್ರೆಸ್ ಗೆ ಸಂಪೂರ್ಣ ನೆಲಕಚ್ಚುತ್ತದೆ ಎಂಬ ವಿಶ್ವಾಸ ಇದೆ ಎಂದರು.

Karaga Festival ಆನೇಕಲ್ ಪಟ್ಟಣದ ಕರಗ ಉತ್ಸವದ ಎರಡನೇ ದಿನ ಕೋಟೆ ಜಗಳ

ಯಡಿಯೂರಪ್ಪನವರ ಸಭೆಯಲ್ಲಿ ಸಚಿವ ಆರ್ ಆಶೋಕ್ ಸ್ಪಷ್ಟನೆ: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ  ದಿವ್ಯ ಹಾಗರಗಿಗು ಬಿಜೆಪಿಗೂಸಂಬಂಧ ಇಲ್ಲ ಎಂದು ಸಚಿವ ಆರ್ ಆಶೋಕ್ ಹೇಳಿದರು. ಅವರು ನಮ್ಮ ಪಕ್ಷದ ಕಾರ್ಯಕರ್ತೆ ಅಲ್ಲ ಎಂದು ನಮ್ಮ ಬಿಜೆಪಿ ಜಿಲ್ಲಾದ್ಯಕ್ಷ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಕ್ಷದಿಂದ ಯಾರನ್ನು ನಾಮನಿರ್ದೇಶನ ಮಾಡಿಲ್ಲ ಮುಖ್ಯಮಂತ್ರಿ ವಿವೇಚನಾಧಿಕಾರದಲ್ಲಿ ಯಾರನ್ನು ಬೇಕಾದ್ರು ನಾಮನಿರ್ದೇಶನ ಮಾಡಬಹುದು.

 ಈಶ್ವರಪ್ಪ ನವರು ಮೇಲ್ನೋಟಕ್ಕೆ ತಪ್ಪಿತಸ್ಥರು.  ಈಶ್ವರಪ್ಪ ಪ್ರಕರಣದಲ್ಲಿ ಸಂತೋಷ ಪಾಟಿಲ್ ಕೂಡ ಕಾಂಗ್ರೆಸ್ ನವರು  ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದವರು ಎಂಬ ಬಗ್ಗೆ ಮಾಹಿತಿ ಇದೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಜಾಸ್ತಿ ಮಾತನಾಡುವುದಕ್ಕೆ ಆಗುವುದಿಲ್ಲ.  ಬೇರೆಯವರು ಕಂಟ್ರಾಕ್ಟರ್ ಮಾಡಿದ್ದವರು, ಅವರ ಕೈಕೆಳಗೆ ಸಬ್ ಕಂಟ್ರಾಕ್ಟರ್ ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಇದೆ  ದುಡ್ಡು ಹಾಕಿರುವವರು ಬೇರೆ , ಕೆಲಸ ಮಾಡಿರುವುದಕ್ಕೆ ಹಣ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.

Follow Us:
Download App:
  • android
  • ios