Asianet Suvarna News Asianet Suvarna News

Karaga Festival ಆನೇಕಲ್ ಪಟ್ಟಣದ ಕರಗ ಉತ್ಸವದ ಎರಡನೇ ದಿನ ಕೋಟೆ ಜಗಳ

  • ಆವೇಷ ಭರಿತ ವ್ಯಕ್ತಿಯಿಂದ ಬಿತ್ತು ಪೊರಕೆ ಹಾಗೂ ಮೊರದಿಂದ ಏಟು.
  • ಹಣ ಕೊಟ್ಟು ಏಟು ತಿಂದರೆ ಇಷ್ಟಾರ್ಥ ಈಡೇರುತ್ತದೆ ಎನ್ನುವ ನಂಬಿಕೆ.
  • ಕರಗ ಉತ್ಸವದ ಎರಡನೇ ದಿನ ಆಯೋಜಿಸಲ್ಪಡುವ ಕೋಟೆ ಜಗಳ.
  • ಆನೇಕಲ್ ಕರಗ ಉತ್ಸವದ ಎರಡನೇ ದಿನ ನಡೆಯುವ ವಿಭಿನ್ನ ಕಾರ್ಯಕ್ರಮ.
devotees participated in the annual karaga festival at Anekal near Bengaluru gow
Author
Bengaluru, First Published Apr 19, 2022, 1:48 PM IST

ವರದಿ : ಟಿ.ಮಂಜುನಾಥ , ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು (ಏ.19): ಬೆಂಗಳೂರು ನಗರಕ್ಕೆ ವಿಖ್ಯಾತಿಯನ್ನ ತಂದುಕೊಟ್ಟ ಧಾರ್ಮಿಕ ಆಚರಣೆಯೇ ಕರಗ ಉತ್ಸವ ಇದೊಂದು ಐತಿಹಾಸಿಕ ಹಿನ್ನೆಲೆಯುಳ್ಳ ಆಚರಣೆ. ಬೆಂಗಳೂರು ನಗರದಲ್ಲಿ ನಡೆಯುದಕ್ಕಿಂತ ವಿಶಿಷ್ಟವಾಗಿ ಆನೇಕಲ್ ಪಟ್ಟಣದಲ್ಲಿ ಕರಗ ಉತ್ಸವ ನಡೆಯುತ್ತದೆ, ದ್ರಾವಿಡ ಶೈಲಿಯಲ್ಲಿ ನಡೆಯುವ ಈ ಉತ್ಸವ ಎಲ್ಲರನ್ನೂ ಆಕರ್ಷಿಸುತ್ತದೆ, ಚೈತ್ರ ಮಾಸದ ಹುಣ್ಣಿಮೆಯಂದು ಬೆಂಗಳೂರು ನಗರದಲ್ಲಿ ಹೂವಿನ ಕರಗ ನಡೆದರೆ, ಅಂದು ಆನೇಕಲ್ ಪಟ್ಟಣದಲ್ಲಿ ಹಸಿ ಕರಗ ಅಂದರೆ ಹೂವಿನ ಕರಗದಷ್ಟೇ ವೈಭವಯುತವಾಗಿ ನಡೆದು ಮಾರನೇ ದಿನ ನಡೆಯುವುದೇ ಕೋಟೆ ಜಗಳ. ಇದಕ್ಕೆ ವೈಶಿಷ್ಟ್ಯದ ವಿವರಣೆಗಳಿದೆ.

ಕೆಂಪು ಬಟ್ಟೆ ತೊಟ್ಟು, ಮುಖಕ್ಕೆ ಬಣ್ಣದ ಬಡಿದುಕೊಂಡು ಆವೇಶಭರಿತನಾಗಿ ಪೊರಕೆ ಹಾಗೂ ಮೊರ ಕೈಯಲ್ಲಿ ಹಿಡಿದು ಮನಸೋ ಇಚ್ಚೆ ಜನರನ್ನು ಹೊಡೆಯುತ್ತಿರುವ ಆವೇಶಭರಿತ ವ್ಯಕ್ತಿಯಿಂದ ಏಟು ತಿಂದು ವಿಭಿನ್ನವಾದ ರೀತಿಯಲ್ಲಿ ಹರಕೆ ತೀರಿಸಿಕೊಳ್ಳುತ್ತಿರುವ ಉತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದರು.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ, ಹೆಸರಾಂತ ಪುರಾಣ ಪ್ರಸಿದ್ದ ಧರ್ಮರಾಯಸ್ವಾಮಿ  ದ್ರೌಪತಮ್ಮ ಹಸಿಕರಗದ ನಂತರ ಎರಡನೇ ದಿನ ನಡೆಯುವ ಕೋಟೆ ಜಗಳ ಆನೇಕಲ್ ಪಟ್ಟಣದ ಸಂತೆ ಮೈದಾನದಲ್ಲಿ ನಡೆಯಿತು. ಪಾಂಡವರು ಹಾಗೂ ಕೌರವರ ಮಧ್ಯೆ ನಡೆದ ಕುರುಕ್ಷೇತ್ರ ಯುದ್ಧದ ಮಾದರಿಯಲ್ಲಿ ಕೋಟೆ ಜಗಳ ಏರ್ಪಡಿಸಲಾಯಿತು, ಯುದ್ಧದ ಅಂತ್ಯದಲ್ಲಿ ಪ್ರತ್ಯಕ್ಷವಾಗುವ ರಣಕಾಳಿ ದುಷ್ಟರನ್ನು ಸಂಹರಿಸಿ, ಭಕ್ತರನ್ನು ಪಾಲಿಸುವ ಸಂಕೇತವಾಗಿ ಈ ಉತ್ಸವ ನಡೆಯುತ್ತದೆ.

AIATSL Recruitment 2022 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೌರವರು ದುಷ್ಟತನದಿಂದ ರಚಿಸಿದ 'ಪದ್ಮವ್ಯೂಹ’ವನ್ನು ಅರ್ಜುನನ ಮಗ ವೀರ ಅಭಿಮನ್ಯು ಭೇದಿಸಿ ವಿಜಯಿಯಾದ ಕಲ್ಪನೆ ಈ ಕೊಟೆ ಜಗಳ ಆಗಿದ್ದು, ಸಂತೆ ಮೈದಾನದ ಮರಗಳಿಂದ ಕೋಟೆ ನಿರ್ಮಾಣ ಮಾಡಿ, ಉತ್ಸವ ಉರಂಭವಾಗುತ್ತಿದ್ದಂತೆ ಪಾಂಡವರು ಹಾಗೂ ಶ್ರೀಕೃಷ್ಣನ ಉತ್ಸವ ಮೂರ್ತಿಗಳನ್ನು ತಂದು ಕೂರಿಸಲಾಯಿತು

 ಕರಗ ಹೊರುವ ಚಂದ್ರಪ್ಪ ಇಲ್ಲಿಗೆ ಬಂದಾಗ ಉತ್ಸವಕ್ಕೆ ಬಂದ ಭಕ್ತರು ಆತನ ಕಾಲಿಗೆ ನಮಸ್ಕರಿಸಿ ಅರಿಶಿನ ಪ್ರಸಾದ ಸ್ವೀಕರಿಸಿದರು, ರಣ ಕಾಳಿ ವೇಷಧಾರಿ ವ್ಯಕ್ತಿಯೊಬ್ಬ ನೆರೆದ ಭಕ್ತರ ತಲೆಯ ಮೇಲೆ ಪೊರಕೆ ಹಾಗೂ ಮೊರದಿಂದ ಹೊಡೆದು ದಕ್ಷಿಣೆ ಸ್ವೀಕರಿಸಿದನು. ಕೋಟೆಯೊಳಗೆ ನಾಲ್ಕು ಮೂಲೆಯಲ್ಲಿ ಯುವಕರನ್ನು ಶವಗಳಂತೆ ಮಲಗಿಸಿ ಮೈಮೇಲೆ ಬಿಳಿ ಪಂಚೆ ಹೊದಿಸಲಾಗಿತ್ತು, ಆಯುಧ ಹಿಡಿದ ಕೆಲವರು ಕೋಟೆ ಸಂರಕ್ಷಣೆ ಮಾಡಿದರೆ, ಮಕರಂದನ ಪಾತ್ರಧಾರಿ ಹಾಸ್ಯ ಮಾಡುತ್ತಾ ಎಲ್ಲರ ಗಮನ ಸೆಳೆದನು.

Udupi Saint Mary's Island ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿದ ವಿದ್ಯಾರ್ಥಿಗಳು

ಇದಾದ ಕೆಲ ಕ್ಷಣಗಳಲ್ಲಿ ರಣಕಾಳಿಗೆ ಮೇಕೆಯೊಂದನ್ನು ಬಲಿ ನೀಡಿ, ನಂತರ ಅದರ ದೇಹ ಸೀಳಿ ಶ್ವಾಸಕೋಶವನ್ನು ಹೊರತೆಗೆದು ಈ ಸಮಯದಲ್ಲಿ ರಣಕಾಳಿ ವೇಷಧಾರಿ ವ್ಯಕ್ತಿಗೆ ಆವೇಶ ಬಂದು ಆತ ಹೂಂಕರಿಸುತ್ತಾ ಜೋರಾಗಿ ಘರ್ಜಿಸಿ ಬಾಯಿ ತೆಗೆದಾಗ, ಈ ಶ್ವಾಸಕೋಶವನ್ನು ಆತನ ಬಾಯಿಗೆ ತುರುಕಲಾಯಿತು, ಶ್ವಾಸಕೋಶವನ್ನು ಬಾಯಲ್ಲಿ ಕಚ್ಚಿ ಹಿಡಿಯುವ ವ್ಯಕ್ತಿ ಕೈಯ್ಯಲ್ಲಿ ಪೊರಕೆ ಹಾಗೂ ಮೊರವನ್ನು ನೆರೆದ ಭಕ್ತರ ತಲೆಯ ಮೇಲೆ ಮನಸೋ ಇಚ್ಛೆ  ಚಚ್ಚುತ್ತಾನೆ.

 ಆವೇಶ ಬಂದ ಸಮಯದಲ್ಲಿ ಈತನಿಂದ ಪೊರಕೆ ಮತ್ತು ಮೊರದ ಪೆಟ್ಟು ತಿಂದರೆ ಒಳಿತಾಗುತ್ತದೆಂಬ ಭಾವನೆಯಿಂದ ಏಟು ತಿನ್ನಲು ಸಾವಿರಾರು ಜನ ಸೇರಿ ನೂಕುನುಗ್ಗಲು ಉಂಟಾಯಿತು. ಇದು ಅಪರೂದ ದೃಶ್ಯವಾಗಿದೆ, ಆನೇಕಲ್ ಕರಗ ಉತ್ಸದ ಎರಡನೇ ದಿನ ಆಯೋಜನೆ ಮಾಡಿದ್ದ ಕೋಟೆ ಜಗಳವನ್ನು ವೀಕ್ಷಣೆ ಮಾಡಲು ಹಾಗೂ ಒಳ್ಲೆದಾಗಲಿ ಎನ್ನುವ ನಿಟ್ಟಿನಲ್ಲಿ ಪೊರಕೆಯಿಂದ ಹೊಡೆಸಿಕೊಳ್ಳಲು ಸಾವಿರಾರು ಜನ ತಮ್ಮ ಮಕ್ಕಳ ಸಮ್ಮೇತರಾಗಿ ಆಗಮಿಸಿ ಆವೇಶಭರಿತ ಭರಿತ ವ್ಯಕ್ತಿಗೆ ಹಣ ನೀಡಿ ಏಟು ತಿಂದು ತಮ್ಮ ಹರಕೆಯನ್ನು ತೀರಿಸಿದರು.

 ರಾಜ್ಯದಲ್ಲೇ ಹೆಸರುವಾಗಿರುವ ಕರಗ ಉತ್ಸವದ ಎರಡನೇ ದಿನ ನಡೆಯುವ ಕೋಟೆ ಜಗಳ ಕಾರ್ಯಕ್ರಮದಲ್ಲಿ ಸಾವಿರಾರು ಜನ ತಮ್ಮ ಹರಕೆಯನ್ನು ಹಣ ಕೊಟ್ಟು ಪೊರಕೆ ಹಾಗೂ ಮೊರದಿಂದ ಏಟು ತಿನ್ನುವ ಮೂಲಕ ತೀರಿಸಿಕೊಂಡರು.

Follow Us:
Download App:
  • android
  • ios