Asianet Suvarna News Asianet Suvarna News

ಪಕ್ಷ ಬಲವರ್ಧನೆಗೆ ಯಡಿಯೂರಪ್ಪ, ವಿಜಯೇಂದ್ರ ಪ್ಲಾನ್‌

ಕೇವಲ ಶಾಸಕರು ಮತ್ತು ಮಾಜಿ ಶಾಸಕರಷ್ಟೇ ಅಲ್ಲ. ಕಾಂಗ್ರೆಸ್‌ನತ್ತ ದೃಷ್ಟಿ ಹಾಯಿಸಿರುವ ಪಕ್ಷದ ಕೆಲವು ಪ್ರಭಾವಿ ಮುಖಂಡರನ್ನೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ತಮ್ಮ ಬೆಂಬಲಿಗರ ಮೂಲಕ ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮುಂದಾಗಿದ್ದಾರೆ. 

BS Yediyurappa BY Vijayendra Plan to Strengthen the BJP in Karnataka grg
Author
First Published Jan 27, 2024, 8:59 AM IST | Last Updated Jan 27, 2024, 8:59 AM IST

ಬೆಂಗಳೂರು(ಜ.27):  ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಕರೆತರಲು ಯಶಸ್ವಿಯಾದ ಬೆನ್ನಲ್ಲೇ ಪಕ್ಷದಲ್ಲಿದ್ದು ಬೇಲಿ ಮೇಲೆ ಕುಳಿತ ಮುಖಂಡರನ್ನು ಗುರುತಿಸಿ ಮನವೊಲಿಸಲು ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧರಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಬಿಜೆಪಿಯ ಕೆಲವು ಹಾಲಿ ಮತ್ತು ಮಾಜಿ ಶಾಸಕರು ಆಡಳಿತಾರೂಢ ಕಾಂಗ್ರೆಸ್‌ಗೆ ವಲಸೆ ಹೋಗಬಹುದು ಎಂಬ ಮಾತು ಕಳೆದ ಹಲವು ತಿಂಗಳಿಂದ ಕೇಳಿಬರುತ್ತಲೇ ಇದೆ. ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಮೊದಲಾದವರು ಬಿಜೆಪಿಯೊಂದಿಗೆ ಅಂತರ ಕಾಪಾಡಿಕೊಂಡು ಕಾಂಗ್ರೆಸ್‌ನತ್ತ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಇವರನ್ನೂ ಸೇರಿದಂತೆ ಕಾಂಗ್ರೆಸ್ ಕಡೆಗೆ ವಾಲುವ ಅನುಮಾನವಿರುವ ಮುಖಂಡರನ್ನು ಸಂಪರ್ಕಿಸಿ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದಬಾರಿಯಲೋಕಸಭಾಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಅಷ್ಟೂ ಸ್ಥಾನಗಳನ್ನು ಉಳಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿರುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಸದ್ದಿಲ್ಲದೇ ಕೆಲಸ ಆರಂಭಿಸಿದ್ದಾರೆ.

ಕರ್ನಾಟಕದ ಸಂಸದರಿಗೆ ಮತ್ತೆ ಬಿಜೆಪಿ ಟಿಕೆಟ್‌?: 75 ದಾಟಿದವರಿಗೆ ಇಲ್ಲ, ಗೆಲ್ಲುವವರಿಗೆ ಮಣೆ..!

ಲೋಕ ಚುನಾವಣೆ ಬಳಿಕ 'ಒಳ್ಳೇದು' ಆಗುತ್ತಂತೆ!: 

ಹಾಗೆ ಪಕ್ಷ ತೊರೆಯಲು ಮುಂದಾಗಿರುವವರನ್ನು ಉಭಯ ನಾಯಕರು ಖುದ್ದಾಗಿ ಸಂಪರ್ಕಿಸಿ, ಈ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು. ಲೋಕಸಭಾ ಚುನಾವಣೆ ಬಳಿಕ ಎಲ್ಲವೂ 'ಒಳ್ಳೆಯ'ದಾಗಲಿದೆ ಎಂಬ ಅಭಯ ನೀಡುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.

ಕೇವಲ ಶಾಸಕರು ಮತ್ತು ಮಾಜಿ ಶಾಸಕರಷ್ಟೇ ಅಲ್ಲ. ಕಾಂಗ್ರೆಸ್‌ನತ್ತ ದೃಷ್ಟಿ ಹಾಯಿಸಿರುವ ಪಕ್ಷದ ಕೆಲವು ಪ್ರಭಾವಿ ಮುಖಂಡರನ್ನೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ತಮ್ಮ ಬೆಂಬಲಿಗರ ಮೂಲಕ ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮುಂದಾಗಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios