ತೆಲಂಗಾಣದಲ್ಲಿ ಬಿಜೆಪಿ ಗೆದ್ದರೆ ಬಿಆರ್‌ಎಸ್ ನಾಯಕರು ಜೈಲಿಗೆ: ಪ್ರಧಾನಿ ಮೋದಿ
‘ತೆಲಂಗಾಣದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಆಡಳಿತಾರೂಢ ಬಿಆರ್‌ಎಸ್ ಪಕ್ಷದ ಭ್ರಷ್ಟರನ್ನು ಜೈಲಿಗೆ ಕಳುಹಿಸಲಾಗುವುದು. ಆ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆದ ಬಿಆರ್‌ಎಸ್ ಪಕ್ಷದ ಹಿಡಿತದಿಂದ ರಾಜ್ಯವನ್ನು ಮುಕ್ತಗೊಳಿಸುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹೈದರಾಬಾದ್ (ನ.28): ‘ತೆಲಂಗಾಣದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಆಡಳಿತಾರೂಢ ಬಿಆರ್‌ಎಸ್ ಪಕ್ಷದ ಭ್ರಷ್ಟರನ್ನು ಜೈಲಿಗೆ ಕಳುಹಿಸಲಾಗುವುದು. ಆ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆದ ಬಿಆರ್‌ಎಸ್ ಪಕ್ಷದ ಹಿಡಿತದಿಂದ ರಾಜ್ಯವನ್ನು ಮುಕ್ತಗೊಳಿಸುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಬೂಬಾಬಾದ್‌ನಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಅಧಿಕಾರಕ್ಕೆ ಬಂದರೆ ಬಿಆರ್‌ಎಸ್ ಪಕ್ಷದ ಭ್ರಷ್ಟರನ್ನು ಜೈಲಿಗೆ ಕಳುಹಿಸಲಾಗುವುದು. ಮುಖ್ಯಮಂತ್ರಿ ಕೆಸಿಆರ್ ಭಾಗಿ ಆಗಿರುವ ಯಾವುದೇ ಹಗರಣ ಇರಲಿ, ಬಿಜೆಪಿ ಸರ್ಕಾರ ಅವುಗಳ ತನಿಖೆ ನಡೆಸಲಿದೆ’ ಎಂದರು.
‘ಒಂದು ರೋಗ ನಿರ್ಮೂಲನೆ ಮಾಡಲು ಮತ್ತೊಂದು ರೋಗ ಹತ್ತಿಸುವ ತಪ್ಪುಗಳು ಕೆಲವೊಮ್ಮೆ ಆಗುತ್ತವೆ. ಆದರೆ ರಾಜ್ಯದ ಜನರು ಹೀಗೆ ಮಾಡದೆ ಬಡವರು ಹಾಗೂ ಯುವಜನರಿಗೆ ದ್ರೋಹ ಬಗೆದ ಕಾಂಗ್ರೆಸ್‌ನ್ನು ಆರಿಸದೆ ಬಿಜೆಪಿ ಮುಖ್ಯಮಂತ್ರಿ ಕಾಣಲು ನಿರ್ಧರಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಹೊಸದಾಗಿ ಜಾತಿಗಣತಿ ನಡೆಸಲಿ: ಮಾಜಿ ಸಚಿವ ರೇಣುಕಾಚಾರ್ಯ
ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಪಿಎಫ್‌ಐಗೆ ಪ್ರೇರಣೆ: ದೇಶದ ಎಲ್ಲೆಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆಯೋ ಅಲ್ಲೆಲ್ಲಾ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ (ಪಿಎಫ್‌ಐ) ಬೆಂಬಲ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು,‘ಪರಿವಾರವಾದಿ ಪಕ್ಷಗಳು ಕಾನೂನು ಸುವ್ಯವಸ್ಥೆಗಳನ್ನು ನಾಶ ಮಾಡಿದೆ.
ಇದರ ಫಲವಾಗಿ ಕಾಂಗ್ರೆಸ್ ಅಧಿಕಾರವಿದ್ದಾಗಲೇ ಹೆಚ್ಚು ಬಾಂಬ್ ದಾಳಿ ನಡೆದಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಇದಕ್ಕೆ ಕಡಿವಾಣ ಹಾಕಿದೆ’ ಎಂದು ಆರೋಪಿಸಿದರು. ‘ಕಾಂಗ್ರೆಸ್ ಹಾಗೂ ಬಿಆರ್‌ಎಸ್ ಪಕ್ಷ ಪರಿರವಾದವನ್ನು ಅನುಸರಿಸುತ್ತಿದೆ. ಇವರು ತಮ್ಮ ಮುಂದಿನ ತಲೆಮಾರಿಗೆ ಅಧಿಕಾರ ಹಸ್ತಾಂತರಕ್ಕೆ ಕಾಯುತ್ತಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ಹಿಂದುಳಿದ ವರ್ಗದವರನ್ನು ಮುಖ್ಯಮಂತ್ರಿ ಮಾಡುತ್ತೇವೆ’ ಎಂದು ನುಡಿದರು.
ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಮಾಜಿ ಸಚಿವ ಶ್ರೀರಾಮುಲು
ನ.30ರಿಂದ 2 ದಿನ ಮೋದಿ ದುಬೈ ಪ್ರವಾಸ: ಪಂಚರಾಜ್ಯ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಗತಿಕ ಹವಾಮಾನ ಶೃಂಗದಲ್ಲಿ ಭಾಗವಹಿಸಲು ನ.30ರಿಂದ 2 ದಿನಗಳ ಕಾಲ ದುಬೈಗೆ ತೆರಳಲಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಹಾಗೂ ಅಬುಧಾಬಿಯ ದೊರೆಯಾಗಿರುವ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಆಲ್ ನಹ್ಯನ್ ಅವರ ಅಧಿಕೃತ ಆಹ್ವಾನದ ಮೇರೆಗೆ ತೆರಳುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಜಾಗತಿಕ ಹವಾಮಾನ ಶೃಂಗದ 28ನೇ ಸಮಾವೇಶ ಯುಎಇ ಅಧ್ಯಕ್ಷತೆಯಲ್ಲಿ ಆಯೋಜನೆಯಾಗಿದ್ದು, ನ.28 ರಿಂದ ಡಿ.12ರವರೆಗೆ ಹವಾಮಾನ ವೈಪರೀತ್ಯದ ಕುರಿತು ಚರ್ಚೆ ನಡೆಸಲಿದ್ದಾರೆ.