Asianet Suvarna News Asianet Suvarna News

ಗಡಿ ವಿವಾದ: ಚುನಾವಣೆ ವೇಳೆ ಶಾಂತಿ ಕದಡಲು ಗಡಿ ಕ್ಯಾತೆ ಆರಂಭ ಡಿಕೆಶಿ ಆರೋಪ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಕಾರಣಕ್ಕಾಗಿಯೇ ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರವನ್ನು ಮುನ್ನೆಲೆಗೆ ತರಲಾಗುತ್ತಿದೆ. ಸರ್ಕಾರದ ಮೇಲಿನ ಕೆಟ್ಟ ಹೆಸರನ್ನು ವಿಷಯಾಂತರ ಮಾಡುವುದಕ್ಕಾಗಿಯೇ ಗಡಿ ವಿವಾದವನ್ನು ದೊಡ್ಡದು ಮಾಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪ ವ್ಯಕ್ತಪಡಿಸಿದ್ದಾರೆ.

Border dispute started to disturb peace during elections DK Shivakumar
Author
First Published Dec 1, 2022, 12:47 PM IST

ಬೆಂಗಳೂರು (ಡಿ.1) : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಕಾರಣಕ್ಕಾಗಿಯೇ ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರವನ್ನು ಮುನ್ನೆಲೆಗೆ ತರಲಾಗುತ್ತಿದೆ. ಸರ್ಕಾರದ ಮೇಲಿನ ಕೆಟ್ಟ ಹೆಸರನ್ನು ವಿಷಯಾಂತರ ಮಾಡುವುದಕ್ಕಾಗಿಯೇ ಗಡಿ ವಿವಾದವನ್ನು ದೊಡ್ಡದು ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಎಲ್ಲರೂ ಕೂಡ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣಾ ಹೊತ್ತಲ್ಲಿ ಶಾಂತಿ ನೆಲೆಸಿರುವ ನಮ್ಮ ರಾಜ್ಯದಲ್ಲಿ ಈಗ ಶಾಂತಿ ಕದಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ ಎನ್ನುವುದು ಬೇರೆ ವಿಚಾರ. ಆದೆರೆ, ಯಾವುದೇ ಪಕ್ಷವಾಗಿದ್ದರೂ ಮಹಾರಾಷ್ಟ್ರ ಸರ್ಕಾರ ಮಾಡುತ್ತಿರುವ ಕಾರ್ಯ ತಪ್ಪಾಗಿದೆ. ಸುಖಾಸುಮ್ಮನೆ ಗಡಿ ವಿವಾದವನ್ನು ಮುನ್ನೆಲೆಗೆ ತರಬಾರದು ಎಂದು ಆಗ್ರಹಿಸಿದರು.

ಗಡಿ ವಿವಾದ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಸಚಿವರ ಸರಣಿ ಸಭೆ

ಗಡಿ ಕುರಿತು ವಿವಾದವೇ ಇಲ್ಲ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯ ವಿವಾದದ ಕುರಿತು ಈಗಾಗಲೇ ಎಲ್ಲ ನಿರ್ಧಾರವನ್ನೂ ಮಾಡಿಯಾಗಿದೆ. ಅವರ ರಾಜ್ಯದಲ್ಲಿರುವ ಗಡಿ ಅವರದು, ನಮ್ಮ ರಾಜ್ಯದಲ್ಲಿರುವ ಪ್ರದೇಶಗಳ ಅಂತ್ಯವೇ ನಮ್ಮ ಗಡಿಯಾಗಿದೆ. ಇಲ್ಲಿರುವವರು ನಮ್ಮ ಜನ, ಅಲ್ಲಿರುವವರು ಅವರ ಜನ ಅಷ್ಟೇ. ಭಾಷೆ ವಿಚಾರಕ್ಕೆ ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗೆ ಅವರು ಪ್ರೋತ್ಸಾಹ ಕೊಡಬೇಕು. ಇಲ್ಲಿರುವ ಮರಾಠಿ ಶಾಲೆಗಳಿಗೆ ನಾವು ಪ್ರೋತ್ಸಾಹ ಕೊಡಬೇಕು. ಭಾಷೆಯ ವಿಚಾರಕ್ಕಾಗಿ ನಮ್ಮ ರಾಜ್ಯದಲ್ಲಿರುವ  ಮತ್ತು ಅವರ ರಾಜ್ಯದಲ್ಲಿರುವ ಅಕ್ಕಪಕ್ಕದವರ ವ್ಯಾಪಾರ, ವಹಿವಾಟುಗೆ ತೊಂದರೆಯಾಗಬಾರದು. ನಾವು ಸುವರ್ಣಸೌಧವನ್ನು ಬೆಳಗಾವಿಯಲ್ಲಿ ಕಟ್ಟಿದ್ದೇವೆ. ನಮ್ಮ ಶಾಂತಿಗೆ ಭಂಗ ತರುವ ಕೆಲಸ ಆಗಬಾರದು ಎಂದು ಆಗ್ರಹಿಸಿದರು.

ಕುಸ್ತಿ ಮಾಡಲು ರೌಡಿಶೀಟರ್‍‌ಗಳ ಸೇರ್ಪಡೆ: ಈಗ ರಾಜ್ಯ ಬಿಜೆಪಿಯಲ್ಲಿ ಕುಸ್ತಿ ಮಾಡಲು ಜನರು ಇಲ್ಲದಂತಾಗಿದೆ. ಹೀಗಾಗಿ, ರೌಡಿಶೀಟರ್‍‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಎಷ್ಟೇ ರೌಡಿಶೀಟರ್‍‌ಳನ್ನಾದರೂ ಸೇರಿಸಿಕೊಳ್ಳಲಿ. ಆದರೆ, ಇವರಿಗೆ ಚುನಾವಣೆ ಎದುರಿಸಲು ಒಳ್ಳೆಯ ಮುಖ ಬೃಕಲ್ಲವೇ? ಬಿಜೆಪಿಗೆ ಯಾವ ಸಿದ್ಧಾಂತವೂ ಇಲ್ಲ. ಭಾವೆನೆಗೂ ಬದುಕಿಗೂ ವ್ಯತ್ಯಾಸವಿದೆ. ಬಿಜೆಪಿಯವರು ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಬದುಕಿನ ಮೇಲೆ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಜನರ ಭಾವನೆಗಳ ಮೇಲೆ ರಾಜಕೀಯ ಮಾಡೋದು ಬಿಜೆಪಿ ಸಿದ್ದಾಂತವಾಗಿದೆ. ಆದರೆ, ಜನರಿಗೆ ಒಳ್ಳೆಯದು ಮಾಡಬೇಕು ಎಂಬುದು ಕಾಂಗ್ರೆಸ್ ಸಿದ್ದಾಂತವಾಗಿದೆ ಎಂದು ತಿಳಿಸಿದರು. 

ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡ್ತಿದ್ದ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ!

ರಾಜ್ಯದ ನಿಲುವು ಸಂವಿಧಾನಬದ್ಧವಾಗಿದೆ: ಸಿಎಂ 

ಕರ್ನಾಟಕ - ಮಹಾರಾಷ್ಟ್ರ ಗಡಿ ವಿಚಾರದ ಕುರಿತಂತೆ ನಮ್ಮ ರಾಜ್ಯದ ನಿಲುವು ಬಹಳ ಸ್ಪಷ್ಟವಾಗಿದೆ. ಮಹಾರಾಷ್ಟ್ರದ ಅರ್ಜಿ ಮೇಂಟೇನೇಬಲ್ (ಸ್ವೀಕಾರಕ್ಕೆ ಅರ್ಹ) ಅಲ್ಲ ಅನ್ನೋದು ನಮ್ಮ ನಿಲುವು. ಇದನ್ನೇ ನಮ್ಮ ವಕೀಲರು ಸುಪ್ರೀಂ ಕೋರ್ಟನಲ್ಲಿ ವಾದ ಮಾಡುತ್ತಾರೆ. ಇನ್ನು ನಮ್ಮ ನಿಲುವು ಸಂವಿಧಾನಬದ್ಧ ಮತ್ತು ಕಾನೂನಾತ್ಮಕವಾಗಿದೆ. ಆ ಎಲ್ಲ ಅಂಶಗಳನ್ನು ನಮ್ಮ ವಕೀಲರು ವಾದ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದರು. 

Follow Us:
Download App:
  • android
  • ios