Asianet Suvarna News Asianet Suvarna News

Karnataka Politics: ನಿಗಮ- ಮಂಡಳಿಗಳ ನೇಮಕಾತಿಗೆ ಸರ್ಕಸ್‌

*   ಕಟೀಲ್‌ ಭೇಟಿ ಮಾಡಿ ಸಿಎಂ ಸುದೀರ್ಘ ಚರ್ಚೆ
*  ಒಮ್ಮತ ಮೂಡಿದರೆ ಶೀಘ್ರ ನೇಮಕ ಪ್ರಕ್ರಿಯೆ
*  ಸಾರ್ವತ್ರಿಕ ಚುನಾವಣೆಯಲ್ಲಿ ಮತ ತಂದುಕೊಡವರ ನೇಮಕಕ್ಕೆ ಸಿಎಂ ಒಲವು
 

Boards and Corporations  Appoint Soon in Karnataka grg
Author
Bengaluru, First Published Jan 20, 2022, 4:44 AM IST

ಬೆಂಗಳೂರು(ಜ.20):  ಸಂಕ್ರಾಂತಿ ಮುಗಿದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ(BJP) ಚಟುವಟಿಕೆಗಳು ಗರಿಗೆದರಿದ್ದು, ನಿಗಮ​- ಮಂಡಳಿಗಳ(Boards and Corporations) ನೇಮಕ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ರಾಜ್ಯ ಬಿಜೆಪಿ ಕಚೇರಿಗೆ ತೆರಳಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌(Nalin Kumar Kateel) ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ(General Election) ಪಕ್ಷಕ್ಕೆ ಒಂದಿಷ್ಟು ಮತಗಳನ್ನು ತಂದು ಕೊಡುವಂಥವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ನಾಯಕರು ಒಮ್ಮತಾಭಿಪ್ರಾಯಕ್ಕೆ ಬಂದಲ್ಲಿ ಶೀಘ್ರದಲ್ಲೇ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Karnataka Cabinet Reshuffle: ಸಂಪುಟ ಕಸರತ್ತಿಗೆ ಪಂಚರಾಜ್ಯ ಚುನಾವಣೆ ಬ್ರೇಕ್‌, ಪುನಾರಚನೆ ಅಸಂಭವ?

ಹಿಂದೆ ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿಗಮ- ಮಂಡಳಿಗಳಿಗೆ ನೇಮಕವಾಗಿತ್ತು. ಅದರ ಬೆನ್ನಲ್ಲೇ ನೇಮಕಗೊಂಡವರ ಪೈಕಿ ಬಹುತೇಕರು ಪಕ್ಷದ ಸಕ್ರಿಯ ಕಾರ್ಯಕರ್ತರಲ್ಲ ಎಂಬ ಆಕ್ಷೇಪವೂ ಕೇಳಿಬಂದಿತ್ತು. ಆ ಆಕ್ಷೇಪ ತೀವ್ರಗೊಂಡ ನಂತರ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೂ ದೂರು ನೀಡಲಾಗಿತ್ತು. ಬಳಿಕ ಕೋರ್‌ ಕಮಿಟಿಯಲ್ಲೂ ಚರ್ಚೆಯಾಗಿ ಕೆಲವು ಬದಲಾವಣೆ ಮಾಡುವ ತೀರ್ಮಾನ ಕೈಗೊಂಡರೂ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ.

ಇದೀಗ ಮುಂದಿನ ಸಾರ್ವತ್ರಿಕ ಚುನಾವಣೆ ಗಮನದಲ್ಲಿರಿಸಿಕೊಂಡು ಪಕ್ಷಕ್ಕಾಗಿ ದುಡಿದವರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ನಿಲವಿಗೆ ರಾಜ್ಯ ಬಿಜೆಪಿ ಬಂದಿದೆ. ಇದಕ್ಕೆ ಪೂರಕವಾಗಿ ಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದೆ.

ಆದರೆ, ಈಗಿರುವ ನಿಗಮ- ಮಂಡಳಿಗಳ ಅಧ್ಯಕ್ಷರ ಪೈಕಿ ಯಾರನ್ನು ಕೈಬಿಡಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿ ಉದ್ಭವಿಸಿದೆ. ಇದರಲ್ಲಿ ಬಹುತೇಕರು ಯಡಿಯೂರಪ್ಪ ಅವರ ಬೆಂಬಲಿಗರು. ಹೀಗಾಗಿ, ಇವರನ್ನು ಕೈಬಿಡುವುದು ಅಷ್ಟು ಸುಲಭವಾಗಿಲ್ಲ. ಅದಕ್ಕೂ ಮೊದಲು ಯಡಿಯೂರಪ್ಪ ಅವರನ್ನು ಮನವೊಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬುಧವಾರ ಬೆಳಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆಯನ್ನೂ ನಡೆಸಿದರು. ಆ ಬಳಿಕವೇ ಪಕ್ಷದ ರಾಜ್ಯಾಧ್ಯಕ್ಷರನ್ನು ಕಂಡು ಮಾತುಕತೆ ನಡೆಸಿದರು.

Karnataka Politics : ರಮೇಶ್ ಜಾರಕಿಹೊಳಿ ಸಿಎಂ ಭೇಟಿ - ಕುತೂಹಲ ಮೂಡಿಸಿದ ಮೀಟಿಂಗ್

ಮಹೇಶ್ ಕುಮಟಳ್ಳಿಗೆ ಶೀಘ್ರದಲ್ಲೇ ಒಳಿತಾಗಲಿದೆ: ಜಾರಕಿಹೊಳಿ‌!

ಅಥಣಿ: ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಮಹೇಶ್‌ ಕುಮಟಳ್ಳಿ (Mahesh Kumathalli) ಅವರಿಗೆ ಶೀಘ್ರದಲ್ಲೇ ಒಳ್ಳೆಯದಾಗಲಿದೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ಹೇಳಿದ್ದರು. ಈ ಮೂಲಕ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗುವ ಸುಳಿವು ನೀಡಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯ (Cabinet Expansion) ಸುದ್ದಿ ಹರಿದಾಡುತ್ತಿರುವ ನಡುವೆಯೇ ಅಥಣಿಯಲ್ಲಿರುವ (Athani) ಆರ್‌ಎಸ್‌ಎಸ್‌ನ ಉತ್ತರ ಪ್ರಾಂತದ ಪ್ರಮುಖ್‌ ಅರವಿಂದರಾವ್‌ ದೇಶಪಾಂಡೆ ಅವರ ಮನೆಗೆ ಶನಿವಾರ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು.

ಇತ್ತೀಚೆಗೆ ಕಲಬುರಗಿಯಲ್ಲಿ ಆರ್‌ಎಸ್‌ಎಸ್‌ ಬೈಠಕ್‌ ನಡೆದಿತ್ತು. ಅಲ್ಲಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ (ಅರವಿಂದರಾವ್‌) ಮಾರ್ಗದರ್ಶನ ಪಡೆಯಲು ಬಂದಿದ್ದೆ ಎಂದು ಹೇಳಿದರು.ಇದೇ ವೇಳೆ, ನಾನು ಯಾವುದೇ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮಾಡಿಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ನಾನು ಬದ್ಧ ಎಂದ ಅವರು, ಕೆಲ ವಿಚಾರಗಳು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಕುಮಟಳ್ಳಿ ಅವರಿಗೆ ಶೀಘ್ರದಲ್ಲೇ ಒಳ್ಳೆಯದಾಗಲಿದೆ ಎಂದಷ್ಟೇ ಹೇಳಿದ್ದರು.
 

Follow Us:
Download App:
  • android
  • ios