ಒಳಒಪ್ಪಂದವೆಂಬ ಬಿಜೆಪಿ ಆರೋ​ಪ​ ಸತ್ಯಕ್ಕೆ ದೂರ: ಜೆಡಿ​ಎಸ್‌ ಶಾಸಕಿ ಶಾರದಾ ಪೂರ್ಯನಾಯ್ಕ್

ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಒಳಒಪ್ಪಂದ ಮಾಡಿಕೊಂಡು ಗೆದ್ದಿದ್ದಾರೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ಶಾರದಾ ಪೂರ್ಯನಾಯ್ಕ್ ಹೇಳಿದರು. 

BJPs allegation of collusion is far from the truth Says JDS MLA Sharada Pooryanaik gvd

ಶಿವಮೊಗ್ಗ (ಮೇ.19): ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಒಳಒಪ್ಪಂದ ಮಾಡಿಕೊಂಡು ಗೆದ್ದಿದ್ದಾರೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ಶಾರದಾ ಪೂರ್ಯನಾಯ್ಕ್ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ನನಗೇನೂ ಗೊತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ತಮ್ಮದೇ ಆದ ಸಿದ್ಧಾಂತಗಳು ಇರುತ್ತವೆ. ಅವರು ಚುನಾವಣೆಗೆ ನಿಲ್ಲುವುದು ಹೊಂದಾಣಿಕೆ ಆಗಲಾರದು. ಬಿಜೆಪಿಯ ಅಭ್ಯರ್ಥಿ ಬಗ್ಗೆಯೂ ನಾನೇನೂ ಹೇಳುವುದಿಲ್ಲ. ಯಾರ ಬಗ್ಗೆಯೂ ಯಾವ ಆರೋಪಗಳನ್ನೂ ನಾನು ಹೊರಿಸಲಾರೆ. ಜನ ನನ್ನನ್ನು ಗೆಲ್ಲಿಸಿದ್ದಾರೆ ಅಷ್ಟೆಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್‌ ಕಾರ್ಯಕರ್ತರು ರೌಡಿಸಂ ಮಾಡಿದ್ದಾರೆ ಎಂಬ ಬಿಜೆಪಿ ಅಭ್ಯರ್ಥಿ ಆರೋಪ ಹಾಸ್ಯಾಸ್ಪದವಾಗಿದೆ. ಬಿಜೆಪಿ ಅಭ್ಯರ್ಥಿ ಸೋಲಿನ ಹತಾಶೆಯಿಂದ ಹೀಗೆ ಹೇಳುತ್ತಿದ್ದಾರೆ. ಆನವೇರಿಯ ರಾರ‍ಯಲಿಗೆ ಸಂಬಂಧಿಸಿದಂತೆ ಅವರೇ ಕ್ಯಾತೆ ತೆಗದಿದ್ದು ಎಂದು ಹೇಳಿದರು. ಜನರ ಪ್ರೀತಿಗೆ ಋುಣಿಯಾಗಿದ್ದೇನೆ. ಮತದಾರರ ಋುಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಜನರು ನನ್ನನ್ನು 15000ಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಾರೆ. ಅವರ ಪ್ರೀತಿಗೆ, ಅಭಿಮಾನಕ್ಕೆ ನನಗೆ ಹೃದಯ ತುಂಬಿಬಂದಿದೆ. ಶಾಸಕಿಯಾಗಿ ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸುತ್ತೇನೆ. ಜನರು ಒಳ್ಳೆಯದಕ್ಕೆ ಸ್ಪಂದಿಸುತ್ತಾರೆ ಎನ್ನುವುದಕ್ಕೆ ನನ್ನ ಗೆಲುವೇ ಸಾಕ್ಷಿ. ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ನನ್ನನ್ನು ಗೆಲ್ಲಿಸಿದ್ದಾರೆ ಎಂದರು.

ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋಲಿನ ಹೊಣೆ ನಾನೇ ಹೊರುತ್ತೇನೆಂದ ಮಾಜಿ ಶಾಸಕ ಕೆ.ಜಿ.ಬೋಪಯ್ಯ

ಈ ಹಿಂದೆ ನಾನು ಶಾಸಕಿ ಆಗಿದ್ದಾಗ ಹಲವು ಅಭಿವೃದ್ಧಿಗಳನ್ನು ಮಾಡಿದ್ದೇನೆ. ಪ್ರಚಾರಕ್ಕೆ ಹೋದಾಗ ಹಲವು ಸಮಸ್ಯೆಗಳು ನನಗೆ ಗೋಚರಿಸಿವೆ. ಪ್ರಮುಖವಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಈಗಾಗಲೇ ಒಂದೆರಡು ಹಳ್ಳಿಗಳಲ್ಲಿ ಕೊಳವೆಬಾವಿ ತೆಗೆಸಿ ನೀರಿನ ವ್ಯವಸ್ಥೆ ಮಾಡಿದ್ದೇನೆ. ಜೊತೆಗೆ ಸಂಪರ್ಕ ರಸ್ತೆಗಳು ಇನ್ನೂ ಆಗಬೇಕಾಗಿದೆ. ಹಾಗೆಯೇ, ಅನೇಕ ಹಳ್ಳಿಗಳಲ್ಲಿ ಸ್ಮಶಾನದ ಜಾಗವಿಲ್ಲ. ಮುಸ್ಮಿಂರು ಹೆಚ್ಚಿರುವ ಒಂದೆರಡು ಕಡೆ ಶವ ಹೂಳಲು ಅವರಿಗೆ ಕಷ್ಟವಾಗುತ್ತಿದೆ. ಈ ಬಗ್ಗೆ ಗಮನಹರಿಸುತ್ತೇನೆ ಎಂದು ಭರವಸೆ ನೀಡಿದರು.

ಅನೇಕ ಹಳ್ಳಿಗಳಲ್ಲಿ ದೇವಸ್ಥಾನಗಳ ಪುನರುಜ್ಜೀವನಗೊಳಿಸಬೇಕಾಗಿದೆ. ಕೆಲವು ಕಡೆಗಳಲ್ಲಿ ದೇವಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆಯೂ ಗಮನಹರಿಸಲಾಗು​ವು​ದು. ಮುಖ್ಯವಾಗಿ ಹೋಬಳಿಮಟ್ಟದ ಆಸ್ಪತ್ರೆಗಳನ್ನು ಉನ್ನತಮಟ್ಟಕ್ಕೆ ಏರಿಸಬೇಕಾಗಿದೆ. ಜೊತೆಗೆ ಪ್ರಾಥಮಿಕ ಶಾಲೆಗಳನ್ನು ಉಳಿಸಬೇಕಾಗಿದೆ. ಅಂಗನವಾಡಿ ಶಾಲೆಗಳನ್ನು ತೆರೆಯಬೇಕಾಗಿದೆ. ಹೀಗೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ದೇವಾಲಯ ಈ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಮತ್ತಷ್ಟು ಆಗಬೇಕಾಗಿದೆ ಎಂದರು.

ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ಮಾಜಿ ಸಚಿವ ಸೋಮಣ್ಣ

ಇನ್ನುಳಿದಂತೆ ಬಗರ್‌ಹುಕುಂ ಸಾಗುವಳಿ ಸಮಸ್ಯೆ, ಶರಾವತಿ ಸಂತ್ರಸ್ತರ ಸಮಸ್ಯೆ, ಕಿರುನೀರಾವರಿ ಯೋಜನೆಗಳು, ರಾಜ್ಯ ಹೆದ್ದಾರಿ, ಮುಂತಾದ ರಾಜ್ಯಮಟ್ಟದ ಸಮಸ್ಯೆಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿದಿದೆ. ಆಡಳಿತ ಪಕ್ಷದೊಂದಿಗೆ ಸಂಪರ್ಕ ಇಟ್ಟುಕೊಂಡು ಪ್ರೀತಿಯಿಂದಲೇ ಅನುದಾನಗಳನ್ನು ತಂದು ಸದನದಲ್ಲಿ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಕಾರಾರ‍ಯಧ್ಯಕ್ಷ ಕಾಂತರಾಜ್‌, ಪ್ರಮುಖರಾದ ಎಚ್‌.ಆರ್‌. ಹನುಮಂತಪ್ಪ , ಸತೀಶ್‌ ಕಸೆಟ್ಟಿ, ದಾದಾಪಿರ್‌, ಗೀತಾ ಸತೀಶ್‌, ರೇಣುಕಾ, ಕುಮಾರ್‌ ನಾಯ್ಕ, ರಮೇಶ್‌, ಪರಶುರಾಮ್‌ ಯೋಗೀಶ್‌, ನಾಗರಾಜ್‌, ಸಿದ್ಲಿಪುರ ಸತೀಶ್‌ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios