Asianet Suvarna News Asianet Suvarna News

ಹಿಮಾಚಲದಲ್ಲಿ ಬಿಜೆಪಿ ಸೋಲು: ಕಾರ್ಯಕರ್ತರಿಂದ ಕೇಂದ್ರ ಸಚಿವರ ಟ್ರೋಲ್

ಹಿಮಾಚಲ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಸಚಿವರಾಗಿರುವ ಅನುರಾಗ್ ಠಾಕೂರ್ ಅವರನ್ನು ಬಿಜೆಪಿ ಕಾರ್ಯಕರ್ತರೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಟ್ರೋಲ್ ಮಾಡಿದ್ದು, ಇದರಿಂದ ಸಚಿವರು ನಿನ್ನೆ ಫುಲ್ ಟ್ರೆಂಡಿಂಗ್‌ನಲ್ಲಿ ಇರುವಂತಾಗಿತ್ತು,

Bjp workers started troll aganist Union Minister Anuragh Thakur after BJP lost in Himachal akb
Author
First Published Dec 9, 2022, 9:53 AM IST

ಶಿಮ್ಲಾ: ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಮತ್ತೆ ಅಧಿಕಾರದ ಗದ್ದುಗೆಯೇರಿ ದಾಖಲೆ ನಿರ್ಮಿಸಿದರೆ ಇತ್ತ. ಹಿಮಾಚಲದಲ್ಲಿ ನೆಲಕ್ಕೆ ಕುಸಿದಿದೆ. ಇಲ್ಲಿ ಹೀಗೆ ಸೋಲು ಕಾಣಲು ಪಕ್ಷದ ಅಂತರಿಕ ಕಲಹದ ಜೊತೆ ಗೆಲ್ಲುವ ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸಿದ್ದು ಕೂಡ ಒಂದು ಕಾರಣ. ಹೀಗಿರುವಾಗ ಹಿಮಾಚಲ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಸಚಿವರಾಗಿರುವ ಅನುರಾಗ್ ಠಾಕೂರ್ ಅವರನ್ನು ಬಿಜೆಪಿ ಕಾರ್ಯಕರ್ತರೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಟ್ರೋಲ್ ಮಾಡಿದ್ದು, ಇದರಿಂದ ಸಚಿವರು ನಿನ್ನೆ ಫುಲ್ ಟ್ರೆಂಡಿಂಗ್‌ನಲ್ಲಿ ಇರುವಂತಾಗಿತ್ತು, ಹೀಗೆ ತಮ್ಮ ನಾಯಕನ್ನೇ ಕಾರ್ಯಕರ್ತರು ಟ್ರೋಲ್ ಮಾಡಿದ್ದೇಕೆ ಇಲ್ಲಿದೆ ವಿವರ. 

ಅನುರಾಗ್ ಠಾಕೂರ್ ಸಂಸದರಾಗಿರುವ ಹಮೀರ್‌ಪುರ(Hamirpura) ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಐದು ವಿಧಾನಸಭಾ ಕ್ಷೇತ್ರಗಳ್ಲೂ ಬಿಜೆಪಿ ಸೋಲು ಕಂಡಿದೆ. ಇತ್ತ ಬಿಜೆಪಿಯವರು ಟ್ರೋಲ್ ಟೀಕೆ ಮೂಲಕ ಅನುರಾಗ್ ಠಾಕೂರ್ ಅವರನ್ನು ಟ್ರೆಂಡಿಂಗ್‌ನಲ್ಲಿ ಇರಿಸಿದರೆ ಅತ್ತ ಕಾಂಗ್ರೆಸ್ ಕಾರ್ಯಕರ್ತರು ಕೂಡ ಇದಕ್ಕೆ ಕೈ ಜೋಡಿಸಿದ್ದಾರೆ. ಹಿಮಾಚಲ ಪ್ರದೇಶವೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ತವರು ರಾಜ್ಯವಾಗಿದ್ದು, 68 ವಿಧಾನಸಭಾ ಕ್ಷೇತ್ರಗಳಿರುವ ಈ ಪುಟ್ಟ ರಾಜ್ಯದ ಒಟ್ಟು 21 ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇವರಲ್ಲಿ ಕೇವಲ ಇಬ್ಬರೇ ಗೆದ್ದಿದ್ದರು ಸಹ ಉಳಿದವರು ತಮ್ಮ ತಮ್ಮ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲಿಗೆ ಪ್ರಮುಖ ಕಾರಣರಾಗಿದ್ದಾರೆ. ಇಲ್ಲಿ ಬಿಜೆಪಿಗೆ ಹೋಗಬೇಕಾದಂತಹ ವೋಟುಗಳು ಚದುರಿ ಹೋಗಿದ್ದು ಸೋಲಿಗೆ ಪ್ರಮುಖ ಕಾರಣವಾಯ್ತು. 

ಅಲ್ಲದೇ ಚುನಾವಣೆಗೆ ಮುನ್ನ ಹಿಮಾಚಲದಲ್ಲಿ(Himachal) ಮೂರು ಬಣಗಳು ನಿರ್ಮಾಣವಾಗಿದ್ದವು, ಒಂದು ಬಣ ಕೇಂದ್ರ ಸಚಿವ ಅನುರಾಗ್ ಠಾಕೂರ್‌ದಾಗಿದ್ದರೆ, ಮತ್ತೆರಡು ಬಣ ಜೆಪಿ ನಡ್ಡಾ ಹಾಗೂ  ಮುಖ್ಯಮಂತ್ರಿ ಜೈರಾಮ್ ಠಾಕೂರ್‌ ಅವರಿಗೆ ನಿಷ್ಠರಾಗಿದ್ದ ಬಣಗಳಾಗಿದ್ದವು. ಅಲ್ಲದೇ ಇಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ನಡೆಸಿದ ಭರ್ಜರಿ ಪ್ರಚಾರವೂ ಕೂಡ ಬಿಜೆಪಿ ಸೋಲಿಗೆ ಕಾರಣವಾಯ್ತು, ಅನುರಾಗ್ ಠಾಕೂರ್ ಸೇರಿದಂತೆ ಬಿಜೆಪಿಯ ದೊಡ್ಡ ಹೊಡೆತಗಳನ್ನು ಪ್ರಿಯಾಂಕಾ ಅವರ ಪ್ರಚಾರ ಮೆಟ್ಟಿ ನಿಂತಿತು ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬಣ್ಣಿಸಿದ್ದಾರೆ.

 

ಬಿಜೆಪಿಯ ಪ್ರಮುಖ ವ್ಯಕ್ತಿ ಎಂದು ಬಿಂಬಿತವಾಗಿರುವ ಅನುರಾಗ್ ಠಾಕೂರ್ ಅವರು, ಕಳೆದ ಬಾರಿ ಸೋತಿದ್ದ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ (Prem Kumar Dhumal) ಅವರ ಕಠಿಣ ಪರಿಶ್ರಮವನ್ನು ಪ್ರಶಂಸಿಸಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದರು. ಬಿಜೆಪಿಯ ಪ್ರಮುಖ ಅಭ್ಯರ್ಥಿ ಎನಿಸಿಕೊಂಡಿದ್ದರು ಕೂಡ ಆಗ ಪ್ರೇಮ್ ಕುಮಾರ್ ಧುಮಾಲ್ ಸೋಲು ಕಂಡಿದ್ದರು. ಆದರೆ ಚುನಾವಣೆ ವೇಳೆ ತಮ್ಮ ತಂದೆಗೆ ಟಿಕೆಟ್ ನೀಡದಿರುವುದಕ್ಕೆ ಕಣ್ಣೀರು ಹಾಕಿದ ಅನುರಾಗ್ ಠಾಕೂರ್ (Anurag Thakur) ಅವರ ವರ್ತನೆಯನ್ನು ಬಿಜೆಪಿ ಕಾರ್ಯಕರ್ತರು ಇಷ್ಟಪಡಲಿಲ್ಲ. ಅಲ್ಲದೇ ಧುಮಾಲ್ ನಿವೃತ್ತಿ ಹೊಂದಲಿ ಎಂದು ಪಕ್ಷ ಬಯಸಿತ್ತು. 

ಆದರೂ, ಬಿಜೆಪಿಯು ಬಂಡುಕೋರರನ್ನು ಓಲೈಸುವ ಅಗತ್ಯವಿದ್ದರೆ  ಧುಮಾಲ್ ಅವರನ್ನು ಸಂಭಾವ್ಯ ಸಂಧಾನಕಾರನಂತೆ ಬಿಜೆಪಿಯಲ್ಲಿ ನೋಡಲಾಯಿತು. ಬಂಡಾಯಗಾರರು ನಮ್ಮ ಕುಟುಂಬದ ಭಾಗ ಮತ್ತು ಅವರ ಬಂಡಾಯಕ್ಕೂ ಕಾರಣಗಳಿವೆ ಎಂದು ಅವರು ಹೇಳಿದ್ದರು. ಮತ್ತೊಂದೆಡೆ ಟ್ವಿಟ್ಟರ್ ಬಳಕೆದಾರರು ಬಿಜೆಪಿಯ ಅಭ್ಯರ್ಥಿ ಆಯ್ಕೆಯನ್ನು ಪ್ರಶ್ನಿಸಿದ್ದು, ಅದಕ್ಕಾಗಿ ಜೆಪಿ ನಡ್ಡಾ ಹಾಗೂ ಅನುರಾಗ್ ಠಾಕೂರ್ ಅವರನ್ನು ಟೀಕಿಸಲು ಶುರು ಮಾಡಿದರು. ಅಲ್ಲದೇ ಇದು ಗುಜರಾತ್‌ನಲ್ಲಿ ನರೇಂದ್ರ ಮೋದಿ ಇದ್ದಿದ್ದರ ಪ್ರಭಾವ ಎಂದು ಆರೋಪಿಸಿದರು. 

ಗುಜರಾತ್‌ನಲ್ಲಿ ಬಿಜೆಪಿ ಓಟಕ್ಕೆ ದಾಖಲೆ ಉಡೀಸ್, ಹಿಮಾಚಲದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್, ಇಲ್ಲಿದೆ ಗೆಲುವಿನ ಕಾರಣ!

ಮತ್ತೆ ಕೆಲವರು ಜೆಪಿ ನಡ್ಡಾ (JP Nadda) ಬದಲಾಗಿ ಗುಜರಾತ್ ಬಿಜೆಪಿ ಮುಖ್ಯಸ್ಥರನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ (BJP national president) ನೇಮಿಸಬೇಕು ಎಂದು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ಅನುರಾಗ್ ಠಾಕೂರ್ ಅವರನ್ನು ಪಕ್ಷದಿಂದ ತೆಗೆದು ಹಾಕುವಂತೆ ಆಗ್ರಹಿಸಿದ್ದಾರೆ. ಆದರೆ ಬಂಡಾಯಗಾರರು ಇರಲಿ ಇಲ್ಲದಿರಲಿ, ಹಿಮಾಚಲದಲ್ಲಿ ಪ್ರತಿ ವರ್ಷವೂ ಸರ್ಕಾರ ಬದಲಾಗುತ್ತಲೇ ಇರುತ್ತದೆ. 

Gujarat election ರಾವಣ ಮನಸ್ಸಿನ ಪಕ್ಷ ಸೋಲಲೇ ಬೇಕಿತ್ತು ಸೋತಿದೆ: ಸಿ.ಟಿ ರವಿ

Follow Us:
Download App:
  • android
  • ios