Asianet Suvarna News Asianet Suvarna News

Karnataka Assembly Elections 2023: 'ಬಿಜೆಪಿಗೆ 60-70 ಸ್ಥಾನಗಳಲ್ಲಿ ಮಾತ್ರ ಗೆಲವು'

ಹೊಸ ಹಾಗೂ ಹಳೆ ಕಾರ್ಯಕರ್ತರನ್ನು ಸಂಘಟಿಸಿ ಜೆಡಿಎಸ್‌ಗೆ ಜನತೆಯ ಆಶೀರ್ವಾದ ಪಡೆದುಕೊಳ್ಳಲು ಕ್ಷೇತ್ರದಲ್ಲಿ ಸಂಚಸಿರುವುದಾಗಿ ಹೇಳಿದ ಡಾ.ಸಿ.ಎಸ್‌.ಸೊಲ್ಲಾಪೂರ 

BJP Win only 60-70 Seats in Karnataka Assembly Elections 2023 grg
Author
First Published Dec 22, 2022, 9:02 PM IST

ಮುದ್ದೇಬಿಹಾಳ(ಡಿ.22): ಜನತೆಗೆ ಸುಳ್ಳು ಹೇಳುತ್ತಾ ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ 60-70 ಸೀಟು ಬರುವುದು ಗ್ಯಾರಂಟಿ ಇಲ್ಲ ಎಂದು ಜೆಡಿಎಸ್‌ ಪಕ್ಷದ ಅಭ್ಯರ್ಥಿ ಡಾ.ಸಿ.ಎಸ್‌.ಸೊಲ್ಲಾಪೂರ ಹೇಳಿದರು. ಪಟ್ಟಣದ ದಿ ಬಾಗವಾನ್‌ ಅಲ್ಪಸಂಖ್ಯಾತರ ಕೋ-ಆಪರೇಟಿವ್‌ ಬ್ಯಾಂಕ್‌ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜನರು ಭ್ರಮನಿರಸನಗೊಂಡಿದ್ದು ಜೆಡಿಎಸ್‌ ಪಕ್ಷದ ಹಿರಿಯ ನಾಯಕರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಣ್ಣ ಅವರ ಮಾರ್ಗದರ್ಶನದಲ್ಲಿ ಬಡವರ, ರೈತರ ಪರ ಯೋಜನೆಗಳನ್ನು ಹಿಂದೆ ಜೆಡಿಎಸ್‌ ಅಧಿಕಾರದಲ್ಲಿದ್ದ ವೇಳೆ ಜಾರಿಗೆ ತಂದಿರುವುದನ್ನು ಜನರಿಗೆ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಿದೆ. ಹೊಸ ಹಾಗೂ ಹಳೆ ಕಾರ್ಯಕರ್ತರನ್ನು ಸಂಘಟಿಸಿ ಜೆಡಿಎಸ್‌ಗೆ ಜನತೆಯ ಆಶೀರ್ವಾದ ಪಡೆದುಕೊಳ್ಳಲು ಕ್ಷೇತ್ರದಲ್ಲಿ ಸಂಚಸಿರುವುದಾಗಿ ಹೇಳಿದರು.

ರಾಜ್ಯದಲ್ಲಿ ಪಂಚರತ್ನ ಯಾತ್ರೆ ಜರುಗುತ್ತಿದ್ದು, ಜ.19ರಂದು ಮುದ್ದೇಬಿಹಾಳಕ್ಕೆ ಆಗಮಿಸಲಿದೆ. ತಾಳಿಕೋಟೆ, ಮಿಣಜಗಿ, ನಾಲತವಾಡದಿಂದ ಮುದ್ದೇಬಿಹಾಳಕ್ಕೆ ಆಗಮಿಸಲಿದೆ. ಮುದ್ದೇಬಿಹಾಳದಲ್ಲಿ ಬಹಿರಂಗ ಸಭೆ ನಡೆಸಲಿದ್ದೇವೆ ಎಂದು ಹೇಳಿದರು.

ಭೀಮಾತೀರದಲ್ಲಿ ಜನಮೆಚ್ಚುಗೆ ಪಡೆದ ಡಿಸಿ ನಡೆ ಹಳ್ಳಿ ಕಡೆ, ಗರ್ಭಿಣಿಯರಿಗೆ ಸೀಮಂತ, ಮಗುವಿಗೆ ನಾಮಕರಣ!

ಪಕ್ಷದ ರಾಜ್ಯ ಕಾರ್ಯದರ್ಶಿ ಬಸವರಾಜ ಭಜಂತ್ರಿ, ಮುಖಂಡ ಗುರು ಪ್ರಸಾದ ದೇಶಮುಖ ಮಾತನಾಡಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕಾಶಿನಕುಂಟಿ, ಯುವ ಮುಖಂಡ ಭೀಮನಗೌಡ ಕೊಡಗಾನೂರ ಮಾತನಾಡಿದರು. ಮಹಿಳಾ ಘಟಕದ ಕಾರ್ಯದರ್ಶಿ ಮಾಬುಬಿ ಬಾಗವಾನ, ಮುತ್ತು ಮಾದಿನಾಳ, ಜಲಾಲ್‌ ಮುದ್ನಾಳ, ಪ್ರಶಾಂತ ಕಾಳೆ, ಸಂಗಯ್ಯ ಸಾರಂಗಮಠ, ಮೋಮಿನ ಮೊದಲಾದವರು ಇದ್ದರು. ಇದೇ ವೇಳೆ ಶಂಕರ ಯರನಾಳ ಅವರನ್ನು ರೈತ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

Follow Us:
Download App:
  • android
  • ios