ವಿಜಯ ಸಂಕಲ್ಪ ಯಾತ್ರೆಗೆ ಜನತೆಯ ಪ್ರೋತ್ಸಾಹ ನೋಡುತ್ತಿದ್ದರೆ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ: ಬಿಎಸ್‌ವೈ
ವಿಜಯ ಸಂಕಲ್ಪ ಯಾತ್ರೆ ಸಮಾವೇಶ ಹಾಗೂ ರೋಡ್ ಶೋದಲ್ಲಿ ಸಿಕ್ಕುತ್ತಿರುವ ಜನತೆಯ ಪ್ರೋತ್ಸಾಹ ನೋಡುತ್ತಿದ್ದರೆ, ಈ ಬಾರಿ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎನ್ನುವ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಮಾ.14): ವಿಜಯ ಸಂಕಲ್ಪ ಯಾತ್ರೆ ಸಮಾವೇಶ ಹಾಗೂ ರೋಡ್ ಶೋದಲ್ಲಿ ಸಿಕ್ಕುತ್ತಿರುವ ಜನತೆಯ ಪ್ರೋತ್ಸಾಹ ನೋಡುತ್ತಿದ್ದರೆ, ಈ ಬಾರಿ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎನ್ನುವ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿಂದು ನಡೆದ ವಿಜಯ ಸಂಕಲ್ಪ ಯಾತ್ರೆ ಸಮಾವೇಶ ಹಾಗೂ ರೋಡ್ ಶೋದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಮಾದ್ಯಮಗಳ ಜೊತೆ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ರಾಜ್ಯಕ್ಕೆ ಬರ್ತಿದ್ದಾರೆ.50 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದರು. ಇನ್ನು ಸಿದ್ದು ಸವದಿ ಹಗಲು ರಾತ್ರಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೆಲಸ ಮಾಡ್ತಿದ್ದಾರೆ. ಹೀಗಾಗಿ ಅವರು ದೊಡ್ಡ ಅಂತರದಿಂದ ಗೆಲ್ಲುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗೆ ನಾಯಕತ್ವ ಇಲ್ಲ:
ಇಂದಿನ ದಿನ ಕಾಂಗ್ರೆಸ್ ಗೆ ನಾಯಕತ್ವವೇ ಇಲ್ಲದಂತಾಗಿದೆ, ರಾಹುಲ್ ಗಾಂಧಿ ಮೋದಿ ಹಾಗೂ ಅಮಿತ್ ಶಾ ಮುಂದೆ ಸರಿಸಮಾನರಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಾವೇ ಸಿಎಂ ಎನ್ನುವ ಆಲೋಚನೆಯಲ್ಲಿದ್ದಾರೆ. ಒಂದು ವಿರೋಧ ಪಕ್ಷದಲ್ಲಿ ಇದ್ದು ಅದು ಸ್ವಾಭಾವಿಕ. ನಾನು ಹೇಳ್ತೇನೆ ಅವರ ಕನಸು ನನಸಾಗೋದಿಲ್ಲ. ನಾವು ಕೊಟ್ಟ ಕಾರ್ಯಕ್ರಮಗಳು ನಮ್ಮ ಗೆಲುವಿಗೆ ಸಹಕಾರಿ ಆಗುತ್ತೆ ಅನ್ನೋ ವಿಶ್ವಾಸ ಇದೆ ಎಂದರು.
ಭಾರತದಲ್ಲಿ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿ ಹೊರದೇಶಕ್ಕೆ ಹೋಗಿ ಆ ರೀತಿ ಹೇಳಿಕೆ ಕೊಡೋದು, ರಾಹುಲ್ ಗಾಂಧಿಗೆ ಶೋಭೆ ತರೋದಿಲ್ಲ. ಈ ಕಾರಣಕ್ಕಾಗಿ ಲೋಕಸಭೆ ಕಾರ್ಯ ಕಲಾಪ ನಿಂತು ಗಲಾಟೆಗಳಾಗಿವೆ. ಆತುರದಲ್ಲಿನ ಚೈಲ್ಡಿಸ್ಟ್ ಹೇಳಿಕೆ ಅಥವಾ ದೇಶಕ್ಕೆ ಅಪಮಾನ ಮಾಡೋ ಹೇಳಿಕೆಯಿಂದ, ಅವರ ಅಸ್ತಿತ್ವಕ್ಕೆ ಧಕ್ಕೆ ಆಗುತ್ತೆ, ಕಾಂಗ್ರೆಸ್ ಗೆ ಹೊಡೆತ ಆಗುತ್ತೆ. ನಮಗೇನೂ ಸಮಸ್ಯೆ ಆಗೋದಿಲ್ಲ ಎಂದರು.
ಸಿದ್ದು ಸವದಿ ತೇರದಾಳ ಬಿಜೆಪಿ ಕ್ಯಾಂಡಿ ಡೇಟ್: ಬಿಎಸ್ವೈ
ತೇರದಾಳ ಮತಕ್ಷೇತ್ರದ ನಮ್ಮ ಶಾಸಕ ಸಿದ್ದು ಸವದಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರೇ ನಮ್ಮ ಅಭ್ಯರ್ಥಿಯಾಗಿ ಮುಂದುವರಿಯಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಘೋಷಿಸಿದರು. ತೇರದಾಳ ಮತಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ಬೇಡಿಕೆ ಇದ್ದು, ಸವದಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅವರೆ ಅಭ್ಯರ್ಥಿ ಎಂದರು.
ವಿಜಯೇಂದ್ರ ಸೇರಿ ಯಾರಿಗೆ ಟಿಕೆಟ್ ಕೊಟ್ಟರೂ ನಿರ್ಧಾರ ಮಾಡೋದು ಚುನಾವಣಾ ಸಮಿತಿ ಮಾತ್ರ:
ವಿಜಯೇಂದ್ರನಿಗೆ ಟಿಕೆಟ್ ಹಂಚಿಕೆಯನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಬಿಎಸ್ವೈ ಅಲ್ಲ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಅವರು ಹೇಳಿದ್ದು ಸರಿ ಇದೆ. ವಿಜಯೇಂದ್ರನದ್ದಾಗಲಿ, ರಾಜ್ಯದ ಯಾವುದೇ ಕ್ಷೇತ್ರದ ಶಾಸಕರ ಆಗಬೇಕೆಂಬ ತೀರ್ಮಾನವನ್ನು ಚುನಾವಣಾ ಸಮಿತಿ ಮಾಡುತ್ತದೆ ಹೊರತು, ನಾವು ಯಾರೂ ಮಾಡೋಕಾಗಲ್ಲ. ನಾವು ಸಲಹೆ ಕೊಡಬಹುದು ಅಷ್ಟೇ, ಅಂತಿಮ ತೀರ್ಮಾನ ಚುನಾವಣಾ ಸಮಿತಿ ಮಾಡುತ್ತದೆ ಎಂದರು.
ಯತ್ನಾಳ ಸುಧಾರಿಸಿದ್ದಾರೆ, ಒಟ್ಟಾಗಿ ಹೋಗುತ್ತೇವೆ:
ಶಾಸಕ ಯತ್ನಾಳ ಗೆ ಬಿಜೆಪಿ ಟಿಕೆಟ್ ಹಂಚಿಕೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಶಾಸಕ ಯತ್ನಾಳ ಅವರು ನಮ್ಮ ಆತ್ಮೀಯ ಸ್ನೇಹಿತರು. ಯಾವುದೋ ಒಂದೆರಡು ಸಂದರ್ಭದಲ್ಲಿ ಅವರು ಹೇಳಿಕೆ ಕೊಟ್ಟಿದ್ದು ಅಪರಾಧ ಅಂತಾ ನಾ ಪರಿಗಣಿಸಲ್ಲ. ನಮ್ಮಲ್ಲಿ ಎಲ್ಲವೂ ಸರಿಯಿದೆ,ಯಾವುದೇ ಗೊಂದಲವಿಲ್ಲ. ಯತ್ನಾಳ ಅವರು ಕೂಡಾ ಸುಧಾರಿಸಿಕೊಂಡಿದ್ದಾರೆ. ನಾವು ಒಟ್ಟಾಗಿ ಹೊಗುತ್ತೇವೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಜನ್ಮದಿನಕ್ಕೂ ಮುನ್ನ ಕುಟುಂಬ ಸಮೇತರಾಗಿ ಮೋದಿಯನ್ನು ಭೇಟಿಯಾದ ನಟ ಜಗ್ಗೇಶ್!
ಸಿದ್ದರಾಮಯ್ಯನವರಿಂದ ಮೋದಿ ಬಗ್ಗೆ ಇಲ್ಲ ಸಲ್ಲದ ಊಹಾಪೋಹ:
ಕಾಮಗಾರಿ ಪೂರ್ಣವಾಗದೇ ರಾಜ್ಯಕ್ಕೆ ಮೋದಿಯವರನ್ನ ಉದ್ಘಾಟನೆಗೆ ಕರೆ ತರ್ತಾರೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು ಇದರಲ್ಲೇನು ಸತ್ಯಾಂಶ ಇಲ್ಲ. ಇದನ್ನು ಮಾಧ್ಯಮದವರು ತಿಳಿದಕೊಳ್ಳಲು ಪ್ರಯತ್ನ ಮಾಡಿ. ಯಾವುದೋ ಎರಡು ಬ್ರಿಡ್ಜ್ ಸೇರಿ ಸಣ್ಣಪುಟ್ಟ ಕೆಲಸ ನಡಿತಾ ಇದೆ. ಅದು ಬಿಟ್ಟರೆ ಏನು ಸಮಸ್ಯೆ ಇಲ್ಲ. ಈಗಾಗಲೇ ವಾಹನಗಳು ಓಡಾಟ ಶುರು ಮಾಡಿವೆ. ಆ ತರ ಊಹಾ ಪೋಹಗಳಷ್ಟೇ, ಅದರಲ್ಲೇನು ಅರ್ಥವಿಲ್ಲ ಎಂದರು.
ರಾಜಕೀಯವಾಗಿ ಸಿದ್ದರಾಮಯ್ಯ ಹಾಳಾಗಿ ಹೋಗಲಿ: ಉಡುಪಿಯಲ್ಲಿ ಬೇಡಿಕೊಂಡ ಈಶ್ವರಪ್ಪ!
ಬಿಜೆಪಿಯ ಯಾವುದೇ ಮುಖಂಡರು ಬಿಜೆಪಿ ಬಿಟ್ಟು ಹೋಗಲ್ಲ:
ಬಿಜೆಪಿಯ ಯಾವುದೇ ಮುಖಂಡರು ಬಿಜೆಪಿ ಬಿಟ್ಟು ಹೋಗಲ್ಲ ಎಂಬ ವಿಶ್ವಾಸವಿದೆ. ಎಲ್ಲರೂ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಕುರಿತು ಈಗಾಗಲೇ ಚರ್ಚೆಗಳು ನಡೆದಿವೆ. ಕೇಂದ್ರದ ನಮ್ಮ ನಾಯಕರುಗಳು ಬೇಗ ಪಟ್ಟಿ ರಿಲೀಜ್ ಮಾಡುತ್ತಾರೆ. ಟಿಕೆಟ್ ಘೋಷಣೆ ಕೇಂದ್ರ ಚುನಾವಣಾ ಸಮಿತಿಗೆ ಬಿಟ್ಟದ್ದು. ಆದಷ್ಟು ಬೇಗ ಬಿಜೆಪಿ ಅಭ್ಯರ್ಥಿ ಗಳ ಟಿಕೆಟ್ ಘೋಷಣೆ ಆಗುತ್ತದೆ ಎಂದರು.