ರಾಜಕೀಯವಾಗಿ ಸಿದ್ದರಾಮಯ್ಯ ಹಾಳಾಗಿ ಹೋಗಲಿ: ಉಡುಪಿಯಲ್ಲಿ ಬೇಡಿಕೊಂಡ ಈಶ್ವರಪ್ಪ!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ಒಳ್ಳೆಯದಾಗಲಿ, ರಾಜಕೀಯವಾಗಿ ಸಿದ್ದರಾಮಯ್ಯ ಹಾಳಾಗಿ ಹೋಗಲಿ ಎಂದು ಬಿಜೆಪಿ ನಾಯಕ ಈಶ್ವರಪ್ಪ ಕೃಷ್ಣನ ಊರು ಉಡುಪಿಯಲ್ಲಿ ದೇವರಲ್ಲಿ ಬೇಡಿಕೊಂಡಿದ್ದಾರೆ.
ಉಡುಪಿ (ಮಾ.14): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ಒಳ್ಳೆಯದಾಗಲಿ, ರಾಜಕೀಯವಾಗಿ ಸಿದ್ದರಾಮಯ್ಯ ಹಾಳಾಗಿ ಹೋಗಲಿ ಎಂದು ಬಿಜೆಪಿ ನಾಯಕ ಈಶ್ವರಪ್ಪ ಕೃಷ್ಣನ ಊರು ಉಡುಪಿಯಲ್ಲಿ ದೇವರಲ್ಲಿ ಬೇಡಿಕೊಂಡಿದ್ದಾರೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಉಡುಪಿಗೆ ಬಂದಿದ್ದು ಕಾರ್ಕಳ ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ರ್ಯಾಲಿ ಮತ್ತು ಸಭೆಗಳನ್ನು ನಡೆಸಿದೆ. ಈ ಸಂಬಂಧ ಮಣಿಪಾಲದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ಕೃಷ್ಣ ಮಠಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ತಮ್ಮದೇ ದಾಟಿಯಲ್ಲಿ ಕುಟುಕಿದರು.
ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅನೇಕ ಸಲ ಉಡುಪಿಗೆ ಬಂದರು. ಆದರೆ ಒಮ್ಮೆಯೂ ಕೃಷ್ಣ ಮಠಕ್ಕೆ ಅವರು ಭೇಟಿ ಕೊಟ್ಟಿಲ್ಲ. ಭಕ್ತ ಕನಕದಾಸರ ಪುತ್ಥಳಿ ಕೃಷ್ಣ ಮಠದಲ್ಲಿದೆ. ಕನಕನಿಗೂ ಕೃಷ್ಣನಿಗೆ ವಿಶೇಷವಾದ ಸಂಬಂಧ ಇದೆ. ಕೃಷ್ಣನ ಸ್ಪೂರ್ತಿ ಕನಕನಿಗೆ ಸಿಕ್ಕಿತು. ಇಂತಹ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಭೇಟಿ ಕೊಟ್ಟಿಲ್ಲ? ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಬಂದಿಲ್ಲ. ಕೃಷ್ಣನ ಶಾಪದಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರಿ. ಇನ್ನಾದರು ಕೃಷ್ಣಮಠಕ್ಕೆ ಬನ್ನಿ ನಿಮಗೆ ಒಳ್ಳೇದಾಗುತ್ತದೆ ಎಂದು ಹಾರೈಸಿದರು.
Udupi: ಮನೆ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಚಾಲನೆ
ನಿಮಗೆ ಒಳ್ಳೆದಾಗಲಿ ಅನ್ನೋ ಉದ್ದೇಶದಿಂದ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಮೇಲೆ ಪ್ರೀತಿಯಿಂದ ಈ ಮಾತು ಹೇಳುತ್ತಿದ್ದೇನೆ. ರಾಜಕೀಯ ಉದ್ದೇಶದಿಂದ ಈ ರೀತಿ ಹೇಳಿಲ್ಲ. ಪ್ರೀತಿ ಇಲ್ಲದೆ ಇದ್ರೆ ರಾಜಕೀಯ ಮಾಡಕ್ಕೆ ಸಾಧ್ಯವಿಲ್ಲ. ದೇಶದ್ರೋಹ ಮಾಡುವ ವ್ಯಕ್ತಿಗಳನ್ನು ದ್ವೇಷಿಸಬೇಕು. ದೇಶದ್ರೋಹ ಧರ್ಮ ದ್ರೋಹಿಗಳನ್ನು ದ್ವೇಷಿಸಬೇಕು. ಸಿದ್ದರಾಮಯ್ಯ ಎಲ್ಲಾ ಕಡೆ ದೇವಸ್ಥಾನಕ್ಕೆ ಹೋಗ್ತಾರೆ ಕೃಷ್ಣ ಮಠಕ್ಕೆ ಬರಲ್ಲ.
ಉಡುಪಿ: ಬಸ್ರೂರು ಅಶೋಕ್ ಪಾರ್ಕ್‌ನಲ್ಲಿ 400 ವರ್ಷಗಳಷ್ಟು ಹಳೆಯ ಲಿಂಗಮುದ್ರೆ ಕಲ್ಲು ಪತ್ತೆ!
ಮಠಗಳಿಗೆ ಹಣವನ್ನು ಕೊಡ್ತಾರೆ, ಮುಖ್ಯಮಂತ್ರಿ ಆಗಿದ್ದಾಗ ನನಗೂ ಹಣ ಕೊಟ್ಟಿದ್ದಾರೆ. ನನ್ನ ಕ್ಷೇತ್ರದ ದೇವಸ್ಥಾನ ಮಠಗಳಿಗೂ ಸಿದ್ದರಾಮಯ್ಯ ಕೊಡುಗೆಗಳನ್ನು ಕೊಟ್ಟಿದ್ದರು. ನಾನು ಮಂತ್ರಿಯಾಗಿದ್ದಾಗ ಅವರ ಬೇಡಿಕೆಗಳಿಗೂ ಸ್ಪಂದಿಸಿದ್ದೇನೆ. ನಮ್ಮಿಬ್ಬರ ನಡುವೆ ಸ್ನೇಹವಿದೆ ಚೆನ್ನಾಗಿದ್ದೇವೆ. ಪಕ್ಷದ ವಿಚಾರ ಬಂದಾಗ, ಮೋದಿಯ ನ ಟೀಕೆ ಮಾಡಿದಾಗ ನಾನು ಯಾವ ಭಾಷೆ ಬಳಸಿದ್ದೇನೆ ನಿಮಗೆ ಗೊತ್ತು. ಮೋದಿಯನ್ನು ನರಹಂತಕ ಎಂದು ಕರೆದರೆ ಬಿಡ್ತೀವಾ? ಎಂದು ಹಾರೈಕೆಯ ಜೊತೆ ಸಿದ್ದರಾಮಯ್ಯ ಅವರ ಕಿವಿ ಹಿಂಡಿದರು.