ಜನ್ಮದಿನಕ್ಕೂ ಮುನ್ನ ಕುಟುಂಬ ಸಮೇತರಾಗಿ ಮೋದಿಯನ್ನು ಭೇಟಿಯಾದ ನಟ ಜಗ್ಗೇಶ್!
ಬೆಂಗಳೂರು (ಮಾ.14): ರಾಜ್ಯಸಭಾ ಸದಸ್ಯ, ನವರಸ ನಾಯಕ ಜಗ್ಗೇಶ್ ಅವರು ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಪತ್ನಿ ಪರಿಮಳಾ ಜಗ್ಗೇಶ್, ಎರಡನೇ ಪುತ್ರ ಯತಿರಾಜ್ ಅವರೊಂದಿಗೆ ಪ್ರಧಾನಿ ಜೊತೆಗಿರುವ ಫೋಟೋವನ್ನು ನಟ ಜಗ್ಗೇಶ್ ಸಾಮಾಜಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಟ ಜಗ್ಗೇಶ್, ಪತ್ನಿ ಪರಿಮಳಾ ಜಗ್ಗೇಶ್, ಎರಡನೇ ಪುತ್ರ ಯತಿರಾಜ್ ಅವರೊಂದಿಗೆ ಪ್ರಧಾನಿ ಮೋದಿ. ಮೋದಿಗೆ ರಾಘವೇಂದ್ರ ಸ್ವಾಮಿಗಳ ವಿಗ್ರಹ ಸಮರ್ಪಣೆ
ನನ್ನ ಜನ್ಮದಿನದ ಆಶೀರ್ವಾದವನ್ನು ಮುಂಚಿತವಾಗಿ ಸ್ವೀಕರಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು ನರೇಂದ್ರ ಮೋದಿ ಸರ್ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿರುವ ನಟ ಜಗ್ಗೇಶ್.
ನನ್ನ ಬದುಕಿನ ಶ್ರೇಷ್ಠದಿನ ಇಂದು, ಮಾರ್ಚ್ 17 ನನ್ನ ಹುಟ್ಟು ದಿನ ,ಈ ವರ್ಷ ನನಗೆ 60ನೇ ವಸಂತ, ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಮಗನನ್ನು ಮನ ತುಂಬಿ ಹರಸಿದರು ಎಂದು ಜಗ್ಗೇಶ್ ಟ್ವೀಟ್.
ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಆಗಿ ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ ಎಂದು ಬರೆದುಕೊಂಡ ನವರಸ ನಾಯಕ ಜಗ್ಗೇಶ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.