2023ರ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುತ್ತೆ: ಸಚಿವ ಅಶ್ವತ್ಥ್
2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿಂಗಲ್ ಪಾರ್ಟಿ ಅಧಿಕಾರಕ್ಕೆ ಬರಲಿದೆ. ನಮ್ಮ ಪಕ್ಷ 150 ಸೀಟ್ ಗೆದ್ದೆ ಗೆಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ರಾಮನಗರ (ಅ.24): 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿಂಗಲ್ ಪಾರ್ಟಿ ಅಧಿಕಾರಕ್ಕೆ ಬರಲಿದೆ. ನಮ್ಮ ಪಕ್ಷ 150 ಸೀಟ್ ಗೆದ್ದೆ ಗೆಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ಕ್ಕೆ ನಾನೇ ಮುಖ್ಯಮಂತ್ರಿ ಎಂದು ಕುಮಾರಸ್ವಾಮಿ ಶಪಥ ಮಾಡಿದ್ದು ಅವರ ಹೇಳಿಕೆಯಷ್ಟೆ. ನಾವು ಎಷ್ಟೇ ಹೇಳಿಕೊಂಡರೂ ಈ ಬಗ್ಗೆ ಜನರು ನಿರ್ಣಯ ಮಾಡುತ್ತಾರೆ. 2023ರ ಮೇ ಗೆ ಜನರ ತೀರ್ಪು ಗೊತ್ತಾಗುತ್ತದೆ. ಅಲ್ಲಿಯವರೆಗೂ ನಾವು ಕಾಯಬೇಕು. ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯಾದ್ರೆ ಏನಾಗುತ್ತದೆ ಎಂದು ಜನರಿಗೆ ತಿಳಿದಿದೆ. ಜನಪರ ಸರಕಾರ ಬೇಕಾದರೆ ಒಂದು ಪಕ್ಷ ಅಧಿಕಾರಕ್ಕೆ ಬರಬೇಕು.
ಈ ರೀತಿ ಆದರೆ ಮಾತ್ರ ಜನಪರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಯಾರು ಯಾರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಸರಕಾರದ ಹಣ ತಂದು ನಾಯಕರ ಕೊಂಡುಕೊಳ್ಳುತ್ತಿದ್ದಾರೆ ಎಂಬ ವಿಷಯಕ್ಕೆ ಉಸ್ತುವಾರಿ ಸಚಿವರು ಟಾಂಗ್ ನೀಡಿದರು. ಇನ್ನು 10 ಜನ್ಮ ಎತ್ತಿ ಬಂದ್ರು ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಎಚ್‌ಡಿಕೆಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ನಾವು ಅಧಿಕಾರದಲ್ಲಿ ಇದ್ದೇವೆ. ಯಾರು ಏನು ಹೇಳುತ್ತಾರೋ ಅವರು ನೋಡುತ್ತ ಇರಲಿ. ನಾವು ಅಧಿಕಾರಕ್ಕೆ ಬರ್ತಾನೆ ಇರುತ್ತೇವೆ. ನಾವೆ ಸರಕಾರ ರಚನೆ ಮಾಡಿ ಅಧಿಕಾರ ನಡೆಸೋದು, ಬೇರೆಯವರೆಲ್ಲ ನೋಡಬಹುದು ಎಂದು ಭವಿಷ್ಯ ನುಡಿದರು. ಆಡಳಿತ ಪಕ್ಷವನ್ನ ಖಂಡಿಸುವುದು, ಜಾಗೃತಿ ಮೂಡಿಸುವುದು ವಿರೋಧ ಪಕ್ಷದ ಕೆಲಸವಾಗಿರುತ್ತದೆ.
ಸಿಎಂ ಬೊಮ್ಮಾಯಿ, ಬಿಎಸ್‌ವೈರಿಂದ ಸಚಿವ ಅಶ್ವತ್ಥ್ ಗುಣಗಾನ
ಕುಮಾರಸ್ವಾಮಿ ಅವರು ಸಕಾರಾತ್ಮಕವಾಗಿ ದಾಖಲೆಗಳನ್ನು ನೀಡಿ ಆರೋಪ ಮಾಡಲಿ. ಇದಕ್ಕು ಮುನ್ನಾ ಆರೋಪ ಮಾಡುವ ಮೊದಲು ಯೋಚನೆ ಮಾಡಿ ಹೇಳಿಕೆ ನೀಡಬೇಕು ಎಂದು ಹೇಳಿದರು. ನಮ್ಮ ಸರಕಾರ ಜನಪರ ಕೆಲಸ ಮಾಡುತ್ತಿದೆ. ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಸಾರ್ವಜನಿಕರು ನಮ್ಮಗಳ ನ್ಯಾಯಾಧೀಶರಾಗಿದ್ದಾರೆ. ಅವರು ತೀರ್ಪು ಕೊಡುತ್ತಾರೆ. ನಾವು ಮಾಡಿದ ಕೆಲಸ, ಅವರು ಮಾಡಿದ ಕೆಲಸವನ್ನ ಜನರ ಮುಂದೆ ಇಟ್ಟು ಚುನಾವಣೆಗೆ ಹೋಗೋಣ ಎಂದು ಹೇಳಿದರು. ಬಿಎಂಎಸ್ ಟ್ರಸ್ವ್ ಹಗರಣದ ಕುರಿತು ಕೃಷ್ಣಾರೆಡ್ಡಿ ಲೋಕಾಯುಕ್ತಕ್ಕೆ ದೂರು ನೀಡಿರುವ ವಿಚಾರವಾಗಿ ಇದು ಸಹಜ ಪ್ರಕ್ರಿಯೆಯಾಗಿದೆ. ಅವರ ಕೆಲಸವನ್ನು ಅವರು ಮಾಡುತ್ತಾರೆ. ಕಾನೂನಿನಲ್ಲಿ ಎಲ್ಲರಿಗೂ ಪ್ರಶ್ನೆ ಮಾಡುವ ಅವಕಾಶ ಇದೆ ಎಂದರು.
ಸರ್ಕಾರಿ ಜನಪರ ಕಾರ್ಯಗಳನ್ನು ಜನರ ಮುಂದಿಡಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ವಿಶ್ವಾಸ ಗಳಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣಗೌಡ ಹೇಳಿದರು. ನಗರದ ಆರ್‌ವಿಸಿಎಸ್ ಕನ್ವೆನ್ಸನ್ ಹಾಲ್‌ನಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ನಗರ ಮಂಡಲ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್‌ನವರ ಸುಳ್ಳು ಹೇಳಿಕೆಗಳಿಂದಾಗಿ ಪಕ್ಷದ ಉತ್ತಮ ಕಾರ್ಯಕ್ರಮಗಳ ಮಾಹಿತಿ ಜನರಿಗೆ ತಲುಪುತ್ತಿಲ್ಲ. ಜನರಿಗೆ ಜನಪರ ಕೆಲಸಗಳ ಮಾಹಿತಿ ತಲುಪುವಂತೆ ಮಾಡಬೇಕು ಎಂದರು.
ದಮ್ ಇರೋದ್ರಿಂದಲೇ ತನಿಖೆ ನಡೆಸುತ್ತಿದ್ದೇವೆ: ಸಚಿವ ಅಶ್ವತ್ಥ್
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಕಾಲಿಕ ಮಳೆಯಿಂದ ರಸ್ತೆಯಲ್ಲಿ ಬಿದ್ದ ಗುಂಡಿಗಳ ಬಗ್ಗೆ ಮಾತನಾಡುತ್ತಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತೆರಳಿ ಸಾಂತ್ವನ ಹೇಳಲಿಲ್ಲ. ಆದರೆ, ಭಾರತ್ ಜೋಡೋ ಸಮಯದಲ್ಲಿ ಹಲವರ ಜೊತೆ ರಾಹುಲ್ ಗಾಂಧಿ ಅವರನ್ನು ಮಾತನಾಡಿಸುತ್ತಾರೆ ಎಂದು ಟೀಕಿಸಿದ ಅವರು, ಜಿಲ್ಲಾ ಉಸ್ತವಾರಿ ಸಚಿವ ಡಾ. ಅಶ್ವತ್ಥನಾರಾಯಣ ರಾಮನಗರ ಜಿಲ್ಲೆಯ ಅಭಿವೃದ್ಧಿ ಮಾಡುತ್ತಿದ್ದಾರೆ. ಚನ್ನಪ್ಪಟಣದಲ್ಲಿ ಸಿ.ಪಿ.ಯೋಗೇಶ್ವರ್ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಮಾಡಲು ಹೋದರೆ ಎಚ್ಡಿಕೆ ಮತ್ತು ಅವರ ಪಟಾಲಂ ತೊಂದರೆ ಕೊಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.