Lok Sabha Election 2024: ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ, ಬುಲೆಟ್‌ ರೈಲು ರಾಜ್ಯದಲ್ಲಿ ಓಡಲಿದೆ: ಮೋದಿ

ಕೇರಳದಲ್ಲಿ ಈ ಬಾರಿ ಬಿಜೆಪಿ ಖಂಡಿತ ಖಾತೆ ತೆರೆಯಲಿದೆ. ಸಮಾಜದ ಪ್ರತಿಯೊಂದು ಸಮುದಾಯಕ್ಕೂ ನಮ್ಮ ಪ್ರಣಾಳಿಕೆಯಲ್ಲಿ ದಾರಿಯನ್ನು ತೋರಿಸಲಾಗಿದೆ. ಅಲ್ಲದೆ ನಾವು ಚುನಾವಣೆಯಲ್ಲಿ ಗೆದ್ದ ಮರುಕ್ಷಣವೇ ಕೇರಳವೂ ಒಳಗೊಂಡಂತೆ ದೇಶದ ನಾಲ್ಕು ದಿಕ್ಕುಗಳಲ್ಲೂ ಬುಲೆಟ್‌ ರೈಲು ಕಾಮಗಾರಿಗೆ ಸರ್ವೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು’ ಎಂದು ಪ್ರಕಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

BJP will open an account in Kerala in Lok Sabha Election 2024 Says PM Narendra Modi grg

ತಿರುವನಂತಪುರ(ಏ.16):  ಕೇರಳದಲ್ಲಿ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವ ನಡುವೆಯೇ ಕಳೆದ ಮೂರು ತಿಂಗಳಲ್ಲಿ ಆರನೇ ಬಾರಿಗೆ ರಾಜ್ಯಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಆಡಳಿತಾರೂಢ ಎಡಪಕ್ಷ ಮತ್ತು ಕಾಂಗ್ರೆಸ್‌ ವಿರುದ್ಧ 2 ಕಡೆ ವಾಗ್ದಾಳಿ ನಡೆಸಿದ್ದಾರೆ ಹಾಗೂ ಕೇರಳದಲ್ಲಿ ಕೇಸರಿ ಪಕ್ಷ ಈ ಸಲ ಖಂಡಿತ ಖಾತೆ ತೆರೆಯಲಿದೆ ಎಂದಿದ್ದಾರೆ.

ಮೊದಲು ತ್ರಿಶ್ಶೂರ್‌ನಲ್ಲಿ ಮಾತನಾಡಿದ ಅವರು, ‘ಕೇರಳದಲ್ಲಿ ಈ ಬಾರಿ ಬಿಜೆಪಿ ಖಂಡಿತ ಖಾತೆ ತೆರೆಯಲಿದೆ. ಸಮಾಜದ ಪ್ರತಿಯೊಂದು ಸಮುದಾಯಕ್ಕೂ ನಮ್ಮ ಪ್ರಣಾಳಿಕೆಯಲ್ಲಿ ದಾರಿಯನ್ನು ತೋರಿಸಲಾಗಿದೆ. ಅಲ್ಲದೆ ನಾವು ಚುನಾವಣೆಯಲ್ಲಿ ಗೆದ್ದ ಮರುಕ್ಷಣವೇ ಕೇರಳವೂ ಒಳಗೊಂಡಂತೆ ದೇಶದ ನಾಲ್ಕು ದಿಕ್ಕುಗಳಲ್ಲೂ ಬುಲೆಟ್‌ ರೈಲು ಕಾಮಗಾರಿಗೆ ಸರ್ವೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು’ ಎಂದು ಪ್ರಕಟಿಸಿದರು.

ನಾನು ಯಾರನ್ನೂ ಹೆದರಿಸುವ ನಿರ್ಧಾರ ಮಾಡಲ್ಲ: ಪ್ರಧಾನಿ ಮೋದಿ

ಮೈತ್ರಿ ಕುರಿತು ವಾಗ್ದಾಳಿ:

ಇದೇ ವೇಳೆ ಇಂಡಿಯಾ ಮೈತ್ರಿಕೂಟದ ಕುರಿತು ಕಿಡಿಕಾರುತ್ತಾ, ‘ಕಾಂಗ್ರೆಸ್‌ ಹಾಗೂ ಯುಡಿಎಫ್‌ ತಿರುವನಂತಪುರದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ. ಆದರೆ ತಿರುನೆಲ್ವೇಲಿಯಲ್ಲಿ ಮೈತ್ರಿ ಮಾಡಿಕೊಂಡಿವೆ. ಇದಕ್ಕೆ ಬಹುಮುಖ್ಯ ಕಾರಣ ಅವರು ನಡೆಸಿರುವ ಭ್ರಷ್ಟಾಚಾರ ಹಗರಣಗಳು. ಅದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಮಗೆ ಬೇಕಾದ ಕಡೆ ಮಾತ್ರ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕಿಡಿ ಕಾರಿದರು. ಅಲ್ಲದೆ, ಕೇರಳದ ಎಡರಂಗ ಸರ್ಕಾರ ಬ್ಯಾಂಕ್‌ ಹಗರಣ ಮಾಡಿ ಜನರ ಹಣ ಲೂಟಿ ಹೊಡೆದಿದೆ ಎಂದು ಕಿಡಿಕಾರಿದರು.

ಲೋಕಸಭೆ ಚುನಾವಣೆ 2024: ಜಾರ್ಖಂಡ್‌ನಲ್ಲಿ ಸೊರೇನ್‌ ಬಂಧನಕ್ಕೆ ಮತದಾರನ ತೀರ್ಪು ಏನು?

ಇನ್ನು ವಯನಾಡ್‌ನ ಕಾಂಗ್ರೆಸ್‌ ಅಭ್ಯರ್ಥಿ ರಾಹುಲ್ ಗಾಂಧಿ ನಿಷೇಧಿತ ಪಿಎಫ್ಐ ಅಂಗಸಂಸ್ಥೆ ಎಸ್‌ಡಿಪಿಐ ಬೆಂಬಲ ಪಡೆದಿದ್ದಾರೆ ಎಂದು ಕಿಡಿಕಾರಿದರು,

ಎರಡು ಅವಧಿ ಕೇವಲ ಟ್ರೇಲರ್‌: ಮೋದಿ

ಇನ್ನು ತಿರುವನಂತಪುರದ ಅತ್ತಿಂಗಲ್‌ನಲ್ಲಿ ಪ್ರಚಾರದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ‘ಮೊದಲ ಎರಡು ಅವಧಿಗಳು ಕೇವಲ ಟ್ರೇಲರ್‌ ಆಗಿದ್ದು, ಮೂರನೇ ಅವಧಿಯಲ್ಲಿ ಭಾರತದ ಅಭಿವೃದ್ಧಿಯ ನೈಜ ಸ್ವರೂಪ ತಿಳಿಯಲಿದೆ. ಕಾಂಗ್ರೆಸ್‌ ಭಾರತದ ಅಭಿವೃದ್ಧಿಯನ್ನು ಪಾತಾಳಕ್ಕಿಳಿಸಿದ್ದರೆ, ಬಿಜೆಪಿಯು ಕಳೆದ 10 ವರ್ಷಗಳಲ್ಲಿ ಜಾಗತಿಕವಾಗಿ ಉತ್ತುಂಗಕ್ಕೇರಿಸಿದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios