ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ: ಮಧು ಬಂಗಾರಪ್ಪ
ಜನಸಾಮಾನ್ಯರ ಮತ್ತು ಎಲ್ಲ ಜಾತಿ- ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸಿರುವ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆ ನಂತರ ಅಧಿಕಾರದ ಚುಕ್ಕಾಣಿ ಹಿಡಿಯವುದು ಖಚಿತ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಸೊರಬ (ಜ.15): ಸಮಾಜದ ಸ್ವಾಸ್ಥ್ಯತೆಯನ್ನು ಕದಡುತ್ತಿರುವ ಬಿಜೆಪಿ ವಿರುದ್ಧ ಜನಾಂದೋಲನ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಜನಸಾಮಾನ್ಯರ ಮತ್ತು ಎಲ್ಲ ಜಾತಿ- ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸಿರುವ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆ ನಂತರ ಅಧಿಕಾರದ ಚುಕ್ಕಾಣಿ ಹಿಡಿಯವುದು ಖಚಿತ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಬಂಗಾರ ಧಾಮದಲ್ಲಿ ಕಾಂಗ್ರೆಸ್ ಬೂತ್‌ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು.
ಬಿಜೆಪಿಯ ಹುಸಿ ಭರವಸೆಗಳನ್ನು ಅರಿತಿರುವ ಮತದಾರರು ಸಮಾಜದಲ್ಲಿ ಸೌಹಾರ್ದತೆಯನ್ನು ಮೂಡಿಸುವ ಮತ್ತು ಈ ಹಿಂದೆ ಉತ್ತಮ ಆಡಳಿತ ನೀಡಿದ ಕಾಂಗ್ರೆಸ್ ಕಡೆ ಜನತೆ ಒಲವು ತೋರುತ್ತಿದ್ದಾರೆ . ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪಕ್ಷವನ್ನು ಬಲಪಡಿಸಿ, ಅಧಿಕಾರಕ್ಕೆ ತರಲು ಜೋಡೆತ್ತುಗಳಂತೆ ಶ್ರಮಿಸುತ್ತಿದ್ದಾರೆ. ಚುನಾವಣೆಯಲ್ಲಿ ಬಹುಮತಗಳಿಂದ ನನ್ನನ್ನು ಗೆಲ್ಲಿಸುವಲ್ಲಿ ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು. ಕೆಪಿಸಿಸಿ ವಾರ್ ರೂಂ ಸದಸ್ಯ ಸುರೇಶ್ ಮಾತನಾಡಿ, ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಗೊಂದಲ, ಮನಸ್ತಾಪಗಳಿದ್ದಲ್ಲಿ ಅವುಗಳನ್ನು ದೂರಮಾಡಿ ಪ್ರತಿ ಮನೆ ಬಾಗಿಲಿಗೆ ತೆರಳಿ ಪಕ್ಷ ಸಂಘಟಿಸಬೇಕು ಎಂದರು.
ಕಾಂಗ್ರೆಸ್‌ನಿಂದ ಶೀಘ್ರ ರಾಜ್ಯಮಟ್ಟದ ಒಬಿಸಿ ಸಮಾವೇಶ: ಮಧು ಬಂಗಾರಪ್ಪ
ಸಭೆಯಲ್ಲಿ ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ, ತಾಲೂಕು ಮಹಿಳಾ ಅಧ್ಯಕ್ಷೆ ಸುಜಾತ ಜೋತಾಡಿ, ಆನವಟ್ಟಿಬ್ಲಾಕ್ ಅಧ್ಯಕ್ಷೆ ವಿಶಾಲಾಕ್ಷಿ, ಜಿಪಂ ಮಾಜಿ ಸದಸ್ಯರಾದ ತಬಲಿ ಬಂಗಾರಪ್ಪ, ತಾರಾ ಶಿವಾನಂದಪ್ಪ, ರಾಜೇಶ್ವರಿ, ತಾಪಂ ಮಾಜಿ ಸದಸ್ಯರಾದ ಎಚ್.ಗಣಪತಿ, ನಾಗರಾಜ ಚಿಕ್ಕಸವಿ, ಸುನೀಲ್‌ಗೌಡ ಸೇರಿದಂತೆ ಬೂತ್ ಕಮಿಟಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.
ಭಾವನಾತ್ಮಕ ರಾಜಕಾರಣದ ಆಟ ನಡೆಯಲ್ಲ: ರಾಜ್ಯದ ಜನ ಬದಲಾವಣೆ ಬಯಸಿದ್ದು, ಬಿಜೆಪಿ ಭಾವನಾತ್ಮಕ ರಾಜಕಾರಣದ ಆಟ ಈ ಬಾರಿ ನಡೆಯಲ್ಲ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಮಧು ಬಂಗಾರಪ್ಪ ಹೇಳಿದರು. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಅಂತ್ಯ ಶುರುವಾಗಿದ್ದು, ಅವರಿಗೆ ಭವಿಷ್ಯವಿಲ್ಲ. ಬದಲಾವಣೆ ಬಯಸಿರುವ ರಾಜ್ಯದ ಜನರ ಕನಸಿಗೆ ಕಾಂಗ್ರೆಸ್ ಜತೆಯಾಗಲಿದೆ ಎಂದರು. ಬಿಜೆಪಿಗೆ ಪರ್ಸಂಟೇಜ್ ಮಾತ್ರ ಬೇಕು. ಪಸೆಂರ್‍ಟೇಜ್ ಸಿಗದ ಕೆಲಸಗಳನ್ನು ಕೈ ಬಿಡುತ್ತಾರೆ.
ಎಲ್ಲ ಜಿಲ್ಲೆಯಲ್ಲೂ ಕಾಂಗ್ರೆಸ್ ಒಬಿಸಿ ಸಮಾವೇಶ: ಮಧು ಬಂಗಾರಪ್ಪ
ಅದರಿಂದ ಅವರಿಗೆ ಲಾಭವಿಲ್ಲ. ವಿಮಾನ ನಿಲ್ದಾಣದಿಂದ ಹೊಟ್ಟೆತುಂಬುತ್ತಾ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಳಿನ್ ಕುಮಾರ್‌ಕಟೀಲ್ ಅಭಿವೃದ್ಧಿ ಬಗ್ಗೆ ಮಾತಾಡಬೇಡಿ ಎಂದು, ಹಲಾಲ್ ಕಟ್, ಲವ್ ಜಿಹಾದ್ ಬಗ್ಗೆ ಮಾತಾಡ್ತಾರೆ. ಈ ಬಾರಿ ಅವರ ಭಾವನಾತ್ಮಕ ಬಾಲವನ್ನು ಜನ ಕಟ್ ಮಾಡುತ್ತಾರೆ. ಅವರ ಕಾರ್ಯಕರ್ತರಿಂದಲೇ ಬಿಜೆಪಿ ಅಂತ್ಯ ಶುರುವಾಗಿದೆ. ಸಾವಿನಲ್ಲಿ ಬಂದು ರಾಜಕಾರಣ ಮಾಡುವ ಹೊಲಸು ಬುದ್ಧಿ ಅವರಿಗಿದೆ. ಸಾವುಗಳನ್ನು ಸುಳ್ಳು ರೀತಿಯಲ್ಲಿ ಭಾವನಾತ್ಮಕವಾಗಿ ಬಳಸಿಕೊಂಡು ಚುನಾವಣೆ ನಂತರ ಮರೆತು ಬಿಡುತ್ತಾರೆ. ಈಗಲೂ ಯಾರಾದ್ರು ಸಾಯುತ್ತಾರಾ ಎಂದು ಕಾಯುತ್ತಿದ್ದಾರೆ. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಎಂಬ ವಿಚಾರದಲ್ಲಿ ಬಿಜೆಪಿ ಅಂದ್ರೆನೆ ಹೊಲಸು ಎಂಬುದನ್ನು ತೋರಿಸುತ್ತದೆ ಎಂದರು.