Asianet Suvarna News Asianet Suvarna News

'ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ'

ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಇದೀಗ ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಭವಿಷ್ಯ ನುಡಿಯಲಾಗಿದೆ 

BJP Will in By Election Says CT Ravi snr
Author
Bengaluru, First Published Oct 11, 2020, 7:13 AM IST
  • Facebook
  • Twitter
  • Whatsapp

ಶಿವಮೊಗ್ಗ (ಅ.11):  ಶಿರಾ ಮತ್ತು ಆರ್‌.ಆರ್‌.ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು. 

ಇಲ್ಲಿ ಮಾತನಾಡಿದ ಅವರು, ಶಿರಾ ಹಾಗೂ ಆರ್‌.ಆರ್‌.ನಗರ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಘೋಷಣೆಗೆ ಇನ್ನು ಸಮಯವಿದ್ದು, ಅ.16ರೊಳಗೆ ಅಭ್ಯರ್ಥಿ ಘೋಷಣೆ ಆಗುತ್ತದೆ. ಎರಡು ಕ್ಷೇತ್ರದಲ್ಲೂ ಪಕ್ಷ ಪಕ್ಷ ಚಟುವಟಿಯಿಂದ ಹಿಂದೆ ಬಿದ್ದಿಲ್ಲ. ಹೀಗಾಗಿ ಎರಡು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಸರ್ಕಾರಕ್ಕೆ ಮತ್ತೊಂದು ಕಂಟಕ: ರಾಜೀನಾಮೆ ಬೆದರಿಕೆ ಇಟ್ಟ ಬಿಜೆಪಿ ಶಾಸಕ ...

ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸದಂತೆ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ವಿದ್ಯಾಗಮ ಹಾಗೂ ಶಾಲೆ ನಡೆಸುವುದರಿಂದ ಕೊರೋನಾ ಹೆಚ್ಚಾಗಿ ಹರಡಲಿದೆ ಎಂದು ವಿರೋಧ ವ್ಯಕ್ತವಾಗುತ್ತಿದೆ. ಆದರೆ ಸರ್ಕಾರಕ್ಕೆ ಶಾಲೆ ಆರಂಭಿಸುವ ಹಾಗೂ ವಿದ್ಯಾಗಮವನ್ನು ನಡೆಸಲೇಬೇಕೆಂಬ ಹಠವಿಲ್ಲ ಎಂದರು.

Follow Us:
Download App:
  • android
  • ios