Asianet Suvarna News Asianet Suvarna News

ಮೇ.13 ರಂದು ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ: ಸಂಸದ ತೇಜಸ್ವಿ ಸೂರ್ಯ

ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಸೇರಿದಂತೆ ಅನೇಕ ಭಾಗಗಳಲ್ಲಿ ಬಿಜೆಪಿ ಪರವಾಗಿ ದೊಡ್ಡ ಅಲೆಯೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಗಮನದಲ್ಲಿವೆ: ತೇಜಸ್ವಿ ಸೂರ್ಯ 

BJP Will Get Power in Karnataka Again Says MP Tejasvi Surya grg
Author
First Published Mar 29, 2023, 1:52 PM IST

ಗದಗ(ಮಾ.29): ರಾಜ್ಯದ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಚುನಾವಣೆ ಪ್ರಜಾಪ್ರಭುತ್ವದ ಒಂದು ಹಬ್ಬವಾಗಿದೆ. ರಾಜ್ಯದ‌ ಜನ ಮುಂದಿನ ಐದು ವರ್ಷಗಳಿಗೆ ಭವಿಷ್ಯವನ್ನ ನಿರ್ಧರಿಸುವ ಮಹತ್ವದ ಘಟ್ಟವಾಗಿದೆ. ಕರ್ನಾಟಕದಲ್ಲಿ ಈ ಬಾರಿ ವಿಶೇಷವಾಗಿ ಚುನಾವಣೆ ನಡೆಯುತ್ತಿದೆ. ಪ್ರತಿ ಜಿಲ್ಲೆ, ವಿಧಾನಸಭಾ ಕ್ಷೇತ್ರದಲ್ಲೂ ಸಾವಿರಾರು ಸಂಖ್ಯೆಯಲ್ಲಿ ಯುವ ಜನತೆ ಪ್ರಥಮ ಬಾರಿ ಮತ ಚಲಾವಣೆ ಮಾಡ್ತಿದ್ದಾರೆ ಅಂತ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಇಂದು(ಬುಧವಾರ) ನಗರದಲ್ಲಿ ಡಿಜಿಟಲ್ ಸಮಾವೇಶದಲ್ಲಿ‌ ಭಾಗವಹಿಸಿ ಮಾತನಾಡಿದ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಹಳೇ ಮೈಸೂರು, ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಸೇರಿದಂತೆ ಅನೇಕ ಭಾಗಗಳಲ್ಲಿ ಬಿಜೆಪಿ ಪರವಾಗಿ ದೊಡ್ಡ ಅಲೆಯೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಗಮನದಲ್ಲಿವೆ. ಕೋವಿಡ್ ಸಂದರ್ಭದಲ್ಲಿ ರಾಜ್ಯವನ್ನ ದೊಡ್ಡ ಮಹಾಮಾರಿಯಿಂದ ದಕ್ಷ ಆಡಳಿತ ಪಾರು ಮಾಡಿದೆ. ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಪೆಂಡಿಂಗ್ ಇದ್ದ ಯೋಜನೆಗಳನ್ನ ವೇಗವಾಗಿ ಮುಗಿಸಲಾಗಿದೆ ಅಂತ ಹೇಳಿದ್ದಾರೆ. 

ರಾಹುಲ್ ಗಾಂಧಿ ಕೋಲಾರಕ್ಕೆ ಬರುವ ವಿಚಾರದಲ್ಲೂ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರು..!

ಗದಗನಲ್ಲಿ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ 

ಗದಗನಲ್ಲಿ ಇಂದು ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ನಡೆಯುತ್ತಿದೆ. ಸಾವಿರಾರು ಸಂಖ್ಯೆಯ ಕಾರ್ಯಕರ್ತರ ಉತ್ಸಾಹ ನೋಡಿದಾಗ, ಹಿಂದಿಗಿಂದ ಈ ಬಾರಿ ಹೆಚ್ಚಿನ ಸೀಟುಗಳು ಕಿತ್ತೂರ ಕರ್ನಾಟಕದಲ್ಲಿ ಸಿಗುವದರಲ್ಲಿ ಯಾವುದೇ ಡೌಟ್ ಇಲ್ಲ. ಮಹಿಳಾ ಕಾರ್ಯಕರ್ತರನ್ನ ನೋಡಿ ನನ್ನ ತಾಯಿಯ ನನಪಾಯಿತು. ನಮ್ಮ ತಾಯಿಯೂ ಡಿಜಿಟಲ್ ವಾರಿಯರ್, ವೈರಲ್ ಆಯ್ತು ಅಂತಾ ಬರುತ್ತಲ್ಲ ಅದರ ಹಿಂದಿನ ಶಕ್ತಿ ಮಹಿಳೆಯರು ಅಂತ ತಿಳಿಸಿದ್ದಾರೆ. 

ಡಿಜಿಟಲ್ ಸಂವಹನ ಪ್ರಮುಖ ಮಾಧ್ಯಮವಾಗಿದೆ. ಮೊನ್ನೆ ಯಾದಗಿರಿಗೆ ಹೋದಾಗ ಹೆಣ್ಣು ಮಕ್ಕಳನ್ನ ಮಾತನಾಡಿಸಿದ್ದೆ, ನಾನು ಯಾರು ಅಂತಾ ಗೊತ್ತು ಅಂತಾ ಕೇಳ್ದೆ‌, ನೀವು ಸೂರ್ಯ.. ನಿಮ್ಮನ್ನು ಯೂಟ್ಯೂಬ್‌ನಲ್ಲಿ ನೋಡಿದ್ದೇನೆ ಎಂದ್ರು. ಈಗ ಪ್ರತಿಯೊಬ್ಬರು ಡಿಜಿಟಲ್ ಮಾಧ್ಯಮಕ್ಕೆ ಹೊಂದಿಕೊಂಡಿದ್ದಾರೆ. ಕೆಲ ಮೇನ್ ಸ್ಟ್ರೀಮ್ ಮಾಧ್ಯಮಗಳು ಮೋದಿಯವರ ಮೇಲೆ ಅಟ್ಯಾಕ್ ಮಾಡ್ತಿದ್ವು, 2014 ರಿಂದ ಮೋದಿಯವರ ಮೇಲೆ ಈ ದಾಳಿ ನಡೀತಾನೇ ಬಂದಿದೆ. ಇತ್ತೀಚೆಗೆ ಬಿಬಿಸಿ ಮೋದಿಯವರನ್ನ ಟಾರ್ಗೆಟ್ ಮಾಡಿತ್ತು. ಡಿಜಿಟಲ್ ಮಾಧ್ಯಮದ ಮೂಲಕ ಸಮರ್ಥವಾಗಿ ಸತ್ಯವನ್ನ ಹೊರತರಲಾಯ್ತು ಎಂದು ತಿಳಿಸಿದ್ದಾರೆ. 

ಒಂದೇ ವರ್ಷದಲ್ಲಿ 10 ವರ್ಷದಿಂದ ಆಗದ ಕೆಲಸ ಮಾಡಿದ ಬೊಮ್ಮಾಯಿ 

ಮೇ. 13 ರಂದು ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ. ಚುನಾವಣೆಯಲ್ಲಿ ಯುವಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಡಿಜಿಟಲ್ ಮಾಧ್ಯಮದ ಮೂಲಕ ಯುವಕರನ್ನ ತಲುಪಬೇಕಿದೆ. ಸಿಎಂ ಬೊಮ್ಮಾಯಿ ಅವರು ಒಂದೇ ವರ್ಷದಲ್ಲಿ 10 ವರ್ಷದಿಂದ ಆಗದ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಕಳೆದ 4 ವರ್ಷದಿಂದ ಅತಿ ಹೆಚ್ಚು ಹೂಡಿಕೆ ಹರಿದು ಬಂದಿದೆ. 150 ಕಿಲೋ ಮೀಟರ್‌ಗೆ ಒಂದರಂತೆ ಏರ್ ಪೋರ್ಟ್ ಇದೆ ಅಂತ ಬಿಜೆಪಿ ಸಾಧನೆಯನ್ನ ಬಣ್ಣಿಸಿದ್ದಾರೆ.  ಮಹಾರಾಷ್ಟ್ರದಲ್ಲಿ 6 ಸಾವಿರ ರೂಪಾಯಿ ರೈತ ಸನ್ಮಾನ್ ನಿಧಿ ಬರುತ್ತೆ. ನಮ್ಮಲ್ಲಿ 10 ಸಾವಿರ. ಇದು ಡಬಲ್ ಇಂಜಿಯನ್ ಸರ್ಕಾರದ ತಾಕತ್ತು. ಈ ಹಿಂದೆ ಮುಸ್ಲಿಮರಿಗೆ ಸಂವಿಧಾನ ವಿರುದ್ಧವಾಗಿ ಮೀಸಲಾತಿ ನೀಡಲಾಗಿತ್ತು. ಆದರೆ, ಈಗ ಲಿಂಗಾಯತರಿಗೆ, ಒಕ್ಕಲಿಗರಿಗೆ 4 ಪರ್ಸೆಂಟ್ ಮೀಸಲಾತಿ ನೀಡುವ ಮೂಲಕ ಬೊಮ್ಮಾಯಿ ಸರ್ಕಾರ ನಿಜವಾದ ಸಾಮಾಜಿಕ ನ್ಯಾಯ ನೀಡಿದೆ ಅಂತ ಹೇಳಿದ್ದಾರೆ. 

Follow Us:
Download App:
  • android
  • ios