Asianet Suvarna News Asianet Suvarna News

'120 ಸ್ಥಾನ ಗೆದ್ದು ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ'

ಕೇಂದ್ರದಲ್ಲಿ ಕಳೆದ 8 ವರ್ಷಗಳಿಂದ ಪ್ರಧಾನಿ ನರೇಂದ್ರ ಮೊದಿಯವರು ದೇಶವನ್ನು ಅಭಿವೃದ್ಧಿ ಪಡಿಸುವದರ ಮೂಲಕ ವಿಶ್ವವೇ ದೇಶದತ್ತ ಮುಖ ಮಾಡುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಡವರಿಗಾಗಿ ಹೊಸ ಹೊಸ ಯೊಜನೆಗಳನ್ನು ನೀಡುವುದರ ಮೂಲಕ ಮನೆ ಬಾಗಿಲಿಗೆ ಸೌಲಭ್ಯವನ್ನು ಕಲ್ಪಿಸುತ್ತಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ: ಮಣಿಕಂಠ ರಾಠೋಡ

BJP Will Get Power in Karnataka Again Says Manikanth Rathod grg
Author
First Published Feb 5, 2023, 10:00 PM IST

ಚಿತ್ತಾಪುರ(ಫೆ.05):  ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಜೋಡೆತ್ತಿನಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ಬರುತ್ತಿದೆ. ಇದನ್ನು ನೋಡಿದರೆ ರಾಜ್ಯದಲ್ಲಿ ಬಿಜೆಪಿ 120 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಹೇಳಿದರು.

ಪಟ್ಟಣದ ಸ್ಟೇಷನ್‌ ಏರಿಯಾದಲ್ಲಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮನೆ ಮನೆಗೆ ತೆರಳಿ ಪಕ್ಷದ ಕಾರ್ಯ ಸಾಧನೆ ತಿಳಿಸುವ ಹಾಗೂ ಪೋಸ್ಟರ್‌ ಅಂಟಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಳೆದ 8 ವರ್ಷಗಳಿಂದ ಪ್ರಧಾನಿ ನರೇಂದ್ರ ಮೊದಿಯವರು ದೇಶವನ್ನು ಅಭಿವೃದ್ಧಿ ಪಡಿಸುವದರ ಮೂಲಕ ವಿಶ್ವವೇ ದೇಶದತ್ತ ಮುಖ ಮಾಡುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಡವರಿಗಾಗಿ ಹೊಸ ಹೊಸ ಯೊಜನೆಗಳನ್ನು ನೀಡುವುದರ ಮೂಲಕ ಮನೆ ಬಾಗಿಲಿಗೆ ಸೌಲಭ್ಯವನ್ನು ಕಲ್ಪಿಸುತ್ತಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನೆಲ್ಲಾ ನೋಡಿದರೆ ರಾಜ್ಯದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯ ಮೊದಲ ಫಲಿತಾಂಶ ಚಿತ್ತಾಪುರ ಮತಕ್ಷೇತ್ರದಾಗಿರುತ್ತದೆ ಎಂದು ಹೇಳಿದರು.

ಬಿಜೆಪಿ ಜಾತಿ ಹೆಸರಲ್ಲಿ ಯೋಜನೆ ರೂಪಿಸಲ್ಲ: ತೇಲ್ಕೂರ್‌

ರಾಮದಾಸ ಚವ್ಹಾಣ್‌ ಮಾತನಾಡಿ, ಚಿತ್ತಾಪುರ ವಿಧಾನ ಸಭೆಯ 257 ಮತಗಟ್ಟೆಗಳಲ್ಲಿಯೂ ಬಿಜೆಪಿಯ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಿಗೆ ಮನೆ ಮನೆಗೆ ತೆರಳಿ ಸರ್ಕಾರದ ಯೋಜನೆಗಳನ್ನು ತಿಳಿಸುವದಲ್ಲದೇ ಸದಸ್ಯತ್ವ ನೊಂದಣೆ ಸೇರಿದಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದೆ ಎಂದು ಹೇಳಿದರು. ಮುಖಂಡರಾದ ಸುರೇಶ ರಾಠೋಡ, ಶಂಕರ ಚವ್ವಾಣ ಮಾತನಾಡಿದರು.

ಬಿಜೆಪಿ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪ್ರಜಾರಿ, ಅಶ್ವಥರಾಮ ರಾಠೋಡ, ಪುರಸಭೆ ಸದಸ್ಯರಾದ ರಮೇಶ ಬೊಮ್ಮನಳ್ಳಿ, ಶಾಮ ಮೇಧಾ, ಶಶಿಕಾಂತ ಭಂಡಾರಿ, ಹನುಮಾನ ವ್ಯಾಸ, ನಾಗರಾಜ ಹೂಗಾರ, ದಶರಥ ದೊಡ್ಮನಿ, ಶ್ರೀಕಾಂತ ಸುಲೇಗಾಂವ, ಮಹೇಶ ಗೌಳಿ, ಪಂಕಜಗೌಡ ಗುತ್ತೆದಾರ ಇತರರು ಇದ್ದರು.

Follow Us:
Download App:
  • android
  • ios