ನವದೆಹಲಿ (ಮಾ.13):  ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡುವುದಾಗಿ ಕೇರಳ ಚುನಾವಣಾ ಬಿಜೆಪಿ ಪ್ರಭಾರಿಯೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್‌ ತಿಳಿಸಿದ್ದಾರೆ.

 ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಸಭೆ ಕರೆದಿರುವ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿದ್ದೇನೆ. ಕಣಕ್ಕಿಳಿಯುವ ಅಭ್ಯರ್ಥಿಗಳ ವಿಚಾರವಾಗಿ ಇಲ್ಲಿ ಇಲ್ಲಿ ಅಂತಿಮ ಚರ್ಚೆ ಆಗಲಿದೆ. ಕೇರಳದಲ್ಲಿ ಈ ಬಾರಿ ಅಧಿಕಾರ ಪಡೆಯುತ್ತ ಗಮನ ಹರಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

 ಇದೇವೇಳೆ ಕಾರ್ಯಕ್ರಮವೊಂದರಲ್ಲಿ ನಿಮ್ಮ ಉಪಮುಖ್ಯಮಂತ್ರಿಯಲ್ಲಿ ಉಪ ಹೋಗಿ ಮುಖ್ಯಮಂತ್ರಿಯಾಗಿ ಎಂಬ ಡಿ.ವಿ.ಸದಾನಂದ ಗೌಡ ಅವರ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಅವರು ಮಾತಿಗೆ ಹಾರೈಸಿದ್ದಾರೆ. ಯಡಿಯೂರಪ್ಪ ನಮ್ಮ ನಾಯಕರು. ಅವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ. ನಾಯಕತ್ವ ಬದಲಾವಣೆ ಮಾತುಕತೆ ಇಲ್ಲ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಅಖಾಡಕ್ಕಿಳಿದ ಅಣ್ಣಾಮಲೈ, ಸಿಂಗಂ ಸ್ಪರ್ಧಿಸುತ್ತಿರುವ ಕ್ಷೇತ್ರ ಯಾವುದು? ..

ಮಾಜಿ ಸಚಿವರೊಬ್ಬರ ಸಿ.ಡಿ. ಪ್ರಕರಣವೊಂದಕ್ಕೆ ಸಂಬಂಧಿಸಿ, ಎಸ್‌ಐಟಿ ತನಿಖೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಯಾರಿಗೂ ರಕ್ಷಣೆ ಕೊಡದೆ ಸತ್ಯ ಬೆಳಕಿಗೆ ತರುವ ಪ್ರಯತ್ನ ಆಗಲಿದೆ ಎಂದರು. ತನಿಖೆ ನಡೆದ ಬಳಿಕ ಯಾರ ಕೈವಾಡ ಇದೆ ಅನ್ನೊದು ಸ್ಷಷ್ಟವಾಗಲಿದೆ. ತನಿಖೆಗೂ ಮುನ್ನ ಬೇರೆ ಹೇಳಿಕೆಗಳಿಗೆ ಮಹತ್ವ ಇರುವುದಿಲ್ಲ ಎಂದರು.

ಭೂಗಳ್ಳರ ವಿರುದ್ಧ ಕಠಿಣ ಕ್ರಮ :  ಭೂ ಮಾಫಿಯ ವಿರುದ್ಧ ಸರ್ಕಾರ ಅಸಹಾಯಕತೆ ಪ್ರದರ್ಶಿಸಿ ದುರ್ವ್ಯವಸ್ಥೆಗೆ ಪ್ರೋತ್ಸಾಹಿಸದೆ ಶುದ್ಧೀಕರಣ ನಡೆಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್‌ಗೆ ಅಸಹಾಯಕರಾಗಿ ಕೆಲಸ ಮಾಡುವ ಪ್ರಶ್ನೆ ಇಲ್ಲ ಎಂದು ಡಾ.ಅಶ್ವತ್‌್ಥನಾರಾಯಣ್‌ ತಿರುಗೇಟು ನೀಡಿದ್ದಾರೆ. ಭೂ ಮಾಫಿಯ ವಿರುದ್ಧಸರ್ಕಾರ ಕಾನೂನು ಕ್ರಮ ಕೈಗೊಂಡಿದೆ. ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಇಲ್ಲ. ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.