ನವದೆಹಲಿ, (ಮಾ.12): ಈ ಬಾರಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಭಾರೀ ರಂಗೇರಿದೆ. ಅದರಲ್ಲೂ ಪಶ್ಚಿಮ ಬಂಗಾಳದ ಹೊರತುಪಡಿಸಿ ತಮಿಳಿಮಾಡು ವಿಧಾನಸಭಾ ಚುನಾವಣೆ ಕುತೂಹಲ ಮೂಡಿಸಿದೆ.

ಹೌದು...'ಕರ್ನಾಟಕದ ಸಿಂಗಂ' ಎಂದು ಜನಜನಿತರಾದ ಕೆ. ಅಣ್ಣಾಮಲೈ ತಮಿಳುನಾಡಿನಲ್ಲಿ ವಿಧಾಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತಮಿ​ಳ್ನಾ​ಡಲ್ಲಿ ಮತ್ತೆ ಡಿಎಂಕೆ ಯುಗಾ​ರಂಭ: ಸಮೀ​ಕ್ಷೆ ಭವಿ​ಷ್ಯ

ತಮಿಳುನಾಡಿನಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದ್ದು,  ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಅರವಾಕುರಿಚಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನಿಶ್ಚಿತವಾಗಿದೆ.

ಅರವಾಕುರಿಚಿ ಎಂಬುದು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವಾಗಿದೆ. ಡಿಎಂಕೆ ಪಕ್ಷದ ವಿ ಸೆಂಥಿಲ್​ ಬಾಲಾಜಿ ಕ್ಷೇತ್ರದ ಹಾಲಿ ಶಾಸಕ. ವಲಸೆ ಹಕ್ಕಿಯಾಗಿ ಕ್ಷೇತ್ರಗಳನ್ನು ಬದಲಾಯಿಸುತ್ತಾ.. ಕಳೆದ ಬಾರಿ ಅರವಾಕುರಿಚಿ ಕ್ಷೇತ್ರದಿಂದ ಅರಸಿ ಬಂದ್ದಿದಾರೆ. ಇತ್ತೀಚೆಗೆ ಸಭೆಯೊಂದರಲ್ಲಿ ಓಪನ್ ಚಾಲೆಂಜ್​ ಹಾಕಿದ ಅಣ್ಣಾಮಲೈ ಕ್ಷೇತ್ರದಲ್ಲಿ ಈ ಬಾರಿ ಡಿಎಂಕೆ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಡಲಿದೆ. 

ಇನ್ನು ಈ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರ ಹೈ ಕಮಾಂಡ್ ನಿರ್ಧರಿಸುತ್ತೆ. ಪಕ್ಷ ನಿಲ್ಲಬೇಕು ಅಂತಾ ಹೇಳಿದ್ರೆ ನಿಲ್ಲುತ್ತೇನೆ. ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಎಡಪ್ಪಾಡಿ ಪಳಸಿಸ್ವಾಮಿ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಬಿಜೆಪಿ 20 ರಲ್ಲಿ ಗೆಲ್ಲಬೇಕು ಅನ್ನೋದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.