Asianet Suvarna News Asianet Suvarna News

ಈಡೇರದ ಬಿಜೆಪಿ ‘ಅಬ್‌ ಕೀ ಬಾರ್‌ 400 ಪಾರ್‌’ ಕನಸು..!

ಹಿಂದಿನ ಚುನಾವಣೆಗಳಲ್ಲಿ ‘ಅಬ್‌ ಕೀ ಬಾರ್‌, ಮೋದಿ ಸರ್ಕಾರ್‌’ ಎನ್ನುತ್ತಿದ ಬಿಜೆಪಿ ಈ ಬಾರಿ ತನ್ನ ಘೋಷವಾಕ್ಯವನ್ನು ಬದಲಿಸಿತ್ತು. 400 ಸೀಟು ದಾಟಲಿದ್ದೇವೆ ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ದೇಶಾದ್ಯಂತ ಓಡಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಎಲ್ಲೆಡೆ ಅಬ್‌ ಕೀ ಬಾರ್‌ 400 ಪಾರ್‌ ಘೋಷವಾಕ್ಯವನ್ನು ಬಳಸಿದ್ದರು.

BJP Unfulfilled Dream of Ab Ki Bar 400 Par in Lok Sabha Election 2024 grg
Author
First Published Jun 5, 2024, 10:41 AM IST | Last Updated Jun 5, 2024, 10:43 AM IST

ನವದೆಹಲಿ(ಜೂ.05): ಚುನಾವಣೆ ಘೋಷಣೆಯಾಗುತ್ತಲೇ ಅಬ್‌ ಕೀ ಬಾರ್‌ 400 ಪಾರ್‌ (ಈ ಬಾರಿ 400ಕ್ಕಿಂತ ಹೆಚ್ಚು ಸೀಟು) ಎಂಬ ಘೋಷಣೆಯೊಂದಿಗೆ ಪ್ರತಿಪಕ್ಷಗಳ ಮೇಲೆ ಮಾನಸಿಕ ಯುದ್ಧ ಸಾರಿದ್ದ ಎನ್‌ಡಿಎಗೆ ಭಾರೀ ನಿರಾಶೆಯಾಗಿದೆ. 400ರ ಗಡಿ ಇರಲಿ 300 ದಾಟುವುದೇ ಕಷ್ಟ ಎನ್ನುವಂತಾಗಿದೆ. ಪರಿಣಾಮ ಏಕಾಂಗಿಯಾಗಿ ಸರ್ಕಾರ ರಚಿಸಲು ಆಗದೆ ಮಿತ್ರ ಪಕ್ಷಗಳ ಮೇಲೆ ಹೆಚ್ಚು ಅವಲಂಬಿತಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಹಿಂದಿನ ಚುನಾವಣೆಗಳಲ್ಲಿ ‘ಅಬ್‌ ಕೀ ಬಾರ್‌, ಮೋದಿ ಸರ್ಕಾರ್‌’ ಎನ್ನುತ್ತಿದ ಬಿಜೆಪಿ ಈ ಬಾರಿ ತನ್ನ ಘೋಷವಾಕ್ಯವನ್ನು ಬದಲಿಸಿತ್ತು. 400 ಸೀಟು ದಾಟಲಿದ್ದೇವೆ ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ದೇಶಾದ್ಯಂತ ಓಡಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಎಲ್ಲೆಡೆ ಈ ಘೋಷವಾಕ್ಯವನ್ನು ಬಳಸಿದ್ದರು.

ಈ ಬಾರಿ ರಾಹುಲ್‌ ಗಾಂಧಿಗೆ ಡಬಲ್‌ ಧಮಾಕಾ..!

ಇದಕ್ಕೆ ಪೂರಕವಾಗಿ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದವು. ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲೂ ಎನ್‌ಡಿಎ 350ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದೇ ಹೇಳಿದ್ದವು.
2014, 2019ರ ಫಲಿತಾಂಶಗಳನ್ನು ಆಧಾರವಿಟ್ಟುಕೊಂಡು ವಿಶ್ಲೇಷಣೆ ಮಾಡಿದ್ದವರೂ ಸಹ ಈ ಬಾರಿ ಎನ್‌ಡಿಎ 400 ತಲುಪಬಹುದು ಎಂದಿದ್ದರು. ಆದರೆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು.

40 ವರ್ಷಗಳಿಂದ ಯಾರೂ 400 ದಾಟಿಲ್ಲ!

ಲೋಕ ಸಭಾ ಚುನಾವಣೆಯಲ್ಲಿ ಕಳೆದ ಬಾರಿಗೆ ಪಕ್ಷವೊಂದು 400 ಸೀಟು ದಾಟಿದ್ದು 1984ರಲ್ಲಿ. ಇಂದಿರಾ ಗಾಂಧಿ

Latest Videos
Follow Us:
Download App:
  • android
  • ios