Asianet Suvarna News Asianet Suvarna News

ಹಾವೇರಿ: 21ರಿಂದ ಬಿಜೆಪಿಯಿಂದ ವಿಜಯ ಸಂಕಲ್ಪ ಅಭಿಯಾನ

ಬಿಜೆಪಿಯಿಂದ ಜ. 21ರಿಂದ 29ರ ವರೆಗೆ ಜಿಲ್ಲಾದ್ಯಂತ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಹಳ್ಳಿಗೂ ಸಂಚರಿಸಿ ಜನಸಾಮಾನ್ಯರನ್ನು ಸಂಪರ್ಕಿಸುವ ಉದ್ದೇಶ ಹೊಂದಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.

bjp vijayasankalpa campaign at haveri assembly election rav
Author
First Published Jan 19, 2023, 11:10 AM IST

ಹಾವೇರಿ (ಜ.19) : ಬಿಜೆಪಿಯಿಂದ ಜ. 21ರಿಂದ 29ರ ವರೆಗೆ ಜಿಲ್ಲಾದ್ಯಂತ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಹಳ್ಳಿಗೂ ಸಂಚರಿಸಿ ಜನಸಾಮಾನ್ಯರನ್ನು ಸಂಪರ್ಕಿಸುವ ಉದ್ದೇಶ ಹೊಂದಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ನಡೆಯುವ ವಿಜಯ ಸಂಕಲ್ಪ ಅಭಿಯಾನಕ್ಕೆ ಜ. 21ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕಿತ್ತೂರ ಕರ್ನಾಟಕ ಭಾಗದಿಂದ ಚಾಲನೆ ನೀಡಲಿದ್ದಾರೆ. ಈ ಅಭಿಯಾನದ ಮೂಲಕ .2 ಕೋಟಿ ಮತದಾರರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ. ಮನೆಮನೆಗೆ ಕರಪತ್ರ ಹಂಚುವುದು, ಪಕ್ಷದ ಸ್ಟಿಕ್ಕರ್‌ ಹಚ್ಚಲು ಪ್ರೇರೇಪಿಸುವುದು, ಗೋಡೆಗಳ ಮೇಲೆ ಬಿಜೆಪಿ ಸಾಧನೆ ಬಿಂಬಿಸುವ ಪೇಂಟಿಂಗ್‌ ಹಾಗೂ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದರು.

ಬಿಜೆಪಿಯಿಂದ ವಿಜಯ್ ಸಂಕಲ್ಪ ಯಾತ್ರೆ: ಸಂಘಟನೆ ಬಲಗೊಳಿಸಲು ಕಸರತ್ತು

ಜಿಲ್ಲೆಯ 1,471 ಬೂತ್‌ಗಳಲ್ಲಿ ಕನಿಷ್ಠ 14,710 ಗೋಡೆ ಬರಹ, ಕನಿಷ್ಠ 3,23,872 ಮನೆಗಳಿಗೆ ಕರಪತ್ರಗಳನ್ನು ತಲುಪಿಸುವುದು, ಸ್ಟಿಕರ್‌ಗಳನ್ನು ಅಂಟಿಸುವುದು, ಕನಿಷ್ಠ 5,14,850 ಸದಸ್ಯತ್ವ ನೋಂದಣಿ ಮಾಡುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ಸ್ಥಳೀಯ ಶಾಸಕರು ಮತ್ತು ಸಂಸದರ ಅಡಿಯಲ್ಲಿ ಬರುವ ಯೋಜನೆಗಳನ್ನು ಪಡೆದಿರುವ ಫಲಾನುಭವಿಗಳನ್ನು ಸಂಪರ್ಕ ಮಾಡುವ ಉದ್ದೇಶ ಹೊಂದಿದ್ದು, ಅಭಿಯಾನಕ್ಕೆ ಎಲ್ಲ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ಈಗಾಗಲೇ ಹಲವಾರು ಕಾರ್ಯಕ್ರಮಗಳ ಮೂಲಕ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಜನಸಾಮಾನ್ಯರನ್ನು ಭೇಟಿ ಮಾಡಿದ್ದು, ಅಲ್ಲಿಯ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಏನು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಈ ಅಭಿಯಾನದ ಮೂಲಕ ಚಿಂತನೆ ಮಾಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಡಳಿತದಲ್ಲಿ ವಿಜಯ ಸಾಧಿಸಿದ್ದು, ಬೂತ್‌ ಮಟ್ಟದಲ್ಲಿ ವಿಜಯ ಸಾಧಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಉತ್ತಮ ನಿರ್ಣಯ ಕೈಗೊಂಡು ವಿಜಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಅಭಿಯಾನದ ಮೂಲಕ ರಾಜ್ಯ ಮತ್ತು ಕೇಂದ್ರ ರಸರ್ಕಾರ ಜನ್‌ಧನ್‌, ಪಿಎಂ ಕಿಸಾನ್‌, ಪಿಎಂ ಆವಾಸ್‌, ಉಜ್ವಲ, ರೈತ ವಿದ್ಯಾನಿಧಿ ಸೇರಿದಂತೆ ಎಲ್ಲ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸಲು ಉದ್ದೇಶಿಸಲಾಗಿದ್ದು, ಈ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಲಿದೆ ಎಂದು ಹೇಳಿದರು.

ಅಭಿಯಾನದ ಜಿಲ್ಲಾ ಸಂಚಾಲಕ ರುದ್ರೇಶ ಚಿನ್ನಣ್ಣನವರ, ಸದಸ್ಯರಾದ ನೀಲಪ್ಪ ಚಾವಡಿ, ಮಲ್ಲಣ್ಣ ಅಂಗಡಿ, ಪ್ರಭು ಹಿಟ್ನಳ್ಳಿ, ಸುನೀಲ ರಾಯ್ಕರ, ಮಧುಕೇಶ್ವರ ಹಂದ್ರಾಳ ಇದ್ದರು.

ದಮ್‌ ಇದ್ದರೆ ಬಿಜೆಪಿ ವಿಜಯ ಯಾತ್ರೆ ತಡೀರಿ: ಸಿಎಂ ಬೊಮ್ಮಾಯಿ

ಪ್ರಜಾಧ್ವನಿ ಯಾತ್ರೆ ಯಶಸ್ಸು ಕಾಣಲ್ಲ

ಹಾವೇರಿಯಲ್ಲಿ ಕಾಂಗ್ರೆಸ್‌ ಆಯೋಜಿಸಿರುವ ಪ್ರಜಾಧ್ವನಿ ಯಾತ್ರೆ ಯಶಸ್ಸು ಕಾಣುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇಲ್ಲ. ಒಬ್ಬರ ಮುಖವನ್ನು ಒಬ್ಬರು ನೋಡದ ಸ್ಥಿತಿ ಕಾಂಗ್ರೆಸ್‌ನಲ್ಲಿದೆ. ಅವರಿಂದ ಜನರು ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ನಮ್ಮ ಪಕ್ಷದ ಯಾತ್ರೆ ನೋಡಿ ಈಗ ಕಾಂಗ್ರೆಸ್‌ನವರು ಯಾತ್ರೆ ಆರಂಭಿಸಿದ್ದು, ಚುನಾವಣೆ ಹತ್ತಿರ ಬಂದಾಗ ಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಓಲೇಕಾರ ಟೀಕಿಸಿದರು.

Follow Us:
Download App:
  • android
  • ios