ಇಂದಿನಿಂದ ಬಿಜೆಪಿ ರಥಯಾತ್ರೆ: ಕರ್ನಾಟಕ 4 ದಿಕ್ಕಿನಿಂದ 8,000 ಕಿ.ಮೀ. ವಿಜಯ ಸಂಕಲ್ಪ ಯಾತ್ರೆ

ಎಂ.ಎಂ. ಹಿಲ್ಸ್‌ನಲ್ಲಿಂದು ನಡ್ಡಾ ಚಾಲನೆ, ಬೆಳಗಾವಿ, ವಿಜಯಪುರ, ದೇವನಹಳ್ಳಿಯಿಂದ ಇನ್ನೂ 3 ಯಾತ್ರೆ, ನಾಳೆ, ನಾಡಿದ್ದು ಶಾ, ರಾಜನಾಥ್‌ ನಿಶಾನೆ. 

BJP Vijaya Sankalpa Yatra Will be Start on March 01st in Karnataka grg

ಚಾಮರಾಜನಗರ(ಮಾ.01): ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ರಾಜ್ಯದ ನಾಲ್ಕು ಕಡೆ​ಗ​ಳಿಂದ ಆರಂಭ​ವಾ​ಗ​ಲಿ​ರುವ 8000 ಕಿ.ಮೀ. ಉದ್ದದ ಬಿಜೆಪಿ ‘ವಿಜಯ ಸಂಕಲ್ಪ ಯಾತ್ರೆ’ಯ ಮೊದಲ ರಥಕ್ಕೆ ಪಕ್ಷದ ರಾಷ್ಟಾ್ರ​ಧ್ಯಕ್ಷ ಜೆ.ಪಿ.​ನಡ್ಡಾ ಅವರು ಬುಧ​ವಾರ ಮಲೆ ಮಹ​ದೇ​ಶ್ವರ ಬೆಟ್ಟ​ದಲ್ಲಿ ಚಾಲನೆ ನೀಡ​ಲಿ​ದ್ದಾ​ರೆ. ರಾಜ್ಯ​ದಲ್ಲಿ ಕಾಂಗ್ರೆಸ್‌ ಪಕ್ಷ ನಡೆ​ಸು​ತ್ತಿ​ರುವ ಪ್ರಜಾ​ಧ್ವನಿ ಯಾತ್ರೆಗೆ ಸಡ್ಡು ಹೊಡೆಯುವ ರೀತಿ​ಯಲ್ಲಿ ಈ ಯಾತ್ರೆ ಆಯೋ​ಜಿ​ಸ​ಲಾ​ಗಿ​ದೆ.

ಮೈಸೂರು ಭಾಗದಲ್ಲಿ ಸಂಚ​ರಿ​ಸ​ಲಿ​ರುವ ಈ ಯಾತ್ರೆ​ಗೆ ಬುಧವಾರ ಮಧ್ಯಾಹ್ನ 12ಕ್ಕೆ ಚಾಲನೆ ಸಿಗ​ಲಿ​ದೆ. ಈ ವೇಳೆ ಸ್ಥಳೀಯ ಬೇಡಗಂಪಣ ಸಮುದಾಯದವರ ಜತೆಗೆ ನಡ್ಡಾ ಅವರು ಸಂವಾದವನ್ನೂ ನಡೆ​ಸ​ಲಿ​ದ್ದಾರೆ. ಬಳಿಕ ಸಾಲೂರು ಮಠದಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಹನೂರಿನಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ಮಾಜಿ ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಸೇರಿ ಪಕ್ಷದ ಹಲವು ಗಣ್ಯರು, ಸಚಿ​ವರು ಉಪ​ಸ್ಥಿ​ತ​ರಿ​ರ​ಲಿ​ದ್ದಾ​ರೆ.

KARNATAKA ASSEMBLY ELECTION: ವಿಜಯೇಂದ್ರ ಸ್ಪರ್ಧೆಯಿಂದ ರಂಗೇರಲಿರುವ ಶಿಕಾರಿಪುರ

ಮಾಜಿ ಸಚಿವ ಕೆ.ಎ​ಸ್‌.​ಈ​ಶ್ವ​ರಪ್ಪ ನೇತೃ​ತ್ವ​ದಲ್ಲಿ ನಡೆ​ಯ​ಲಿ​ರುವ ಈ ಯಾತ್ರೆ​ಗೆ ಸಚಿ​ವ​ರಾದ ವಿ.ಸೋಮಣ್ಣ, ಕೆ.ಸಿ.ನಾರಾಯಣಗೌಡ, ವಿ.ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ಗೋಪಾಲಯ್ಯ, ಎಸ್‌.ಅಂಗಾರ, ಸಂಸದ ವಿ.ಶ್ರೀನಿವಾಸ ಪ್ರಸಾದ್‌, ಶಾಸ​ಕ ಎನ್‌.ಮಹೇಶ್‌, ಬಿಜೆಪಿ ರಾಜ್ಯ ಉಪಾ​ಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಸಾಥ್‌ ನೀಡ​ಲಿ​ದ್ದಾ​ರೆ.

ನಾಳೆ ಮತ್ತೊಂದು, ನಾಡಿದ್ದು ಇನ್ನೆರಡು:

ಮಾ.2ರಂದು ಬೆಳ​ಗಾ​ವಿಯ ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕದಿಂದ ಆರಂಭಗೊಳ್ಳುವ 2ನೇ ಯಾತ್ರೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಚಾಲನೆ ನೀಡಲಿದ್ದಾರೆ. ಗೋವಿಂದ ಕಾರಜೋಳ ನೇತೃತ್ವದ ಈ ಯಾತ್ರೆ​ಗೆ ಸಚಿ​ವ​ರಾದ ಸಿ.ಸಿ.ಪಾಟೀಲ, ಮುರುಗೇಶ್‌ ನಿರಾಣಿ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ, ಶಿವರಾಮ ಹೆಬ್ಬಾರ್‌, ಮಾಜಿ ಸಚಿ​ವ​ರಾದ ಲಕ್ಷ್ಮಣ ಸವದಿ, ರಮೇಶ್‌ ಜಾರಕಿಹೊಳಿ, ಶಾಸ​ಕ ಅನಿಲ್‌ ಬೆನಕೆ, ಬಿಜೆಪಿ ಮುಖಂಡ ಮಹೇಶ್‌ ಟೆಂಗಿನಕಾಯಿ ಸಾಥ್‌ ನೀಡ​ಲಿ​ದ್ದಾ​ರೆ.

ಮಾ.3ರಂದು ಬೀದ​ರ್‌​ನ ಬಸವಕಲ್ಯಾಣದ ಅನುಭವ ಮಂಟಪದಿಂದ 3ನೇ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡುವರು. ಜಗದೀಶ್‌ ಶೆಟ್ಟರ್‌ ನೇತೃತ್ವದ ಈ ತಂಡದಲ್ಲಿ ಸಚಿ​ವ​ರಾದ ಬಿ.ಶ್ರೀರಾಮುಲು, ಭಗವಂತ ಖೂಬಾ, ಪ್ರಭು ಚವ್ಹಾಣ್‌, ಹಾಲಪ್ಪ ಆಚಾರ್‌, ಆನಂದ್‌ ಸಿಂಗ್‌, ಅರವಿಂದ ಲಿಂಬಾವಳಿ, ಮುಖಂಡ​ರಾದ ಬಾಬುರಾವ್‌ ಚಿಂಚನಸೂರು, ಮಾಲೀಕಯ್ಯ ಗುತ್ತೇದಾರ್‌, ಸಿದ್ದರಾಜು, ಛಲವಾದಿ ನಾರಾಯಣಸ್ವಾಮಿ ಮತ್ತು ಮಾರುತಿರಾವ್‌ ಮೂಳೆ ಇರ​ಲಿ​ದ್ದಾ​ರೆ. ಇನ್ನು ಅದೇ ದಿನ ಮಧ್ಯಾ​ಹ್ನ ಬೆಂಗ​ಳೂರಿನ ದೇವನಹಳ್ಳಿಯ ಕೆಂಪೇಗೌಡ ಜನ್ಮಸ್ಥಳ ಆವತಿಯಲ್ಲಿ ಗೃಹ ಸಚಿವ ಅಮಿತ್‌ ಶಾ ಅವರೇ ನಾಲ್ಕನೇ ಯಾತ್ರೆಯನ್ನು ಉದ್ಘಾ​ಟಿ​ಸ​ಲಿ​ದ್ದಾರೆ. ​ಕಂದಾ​ಯ​ ಸ​ಚಿವ ಆರ್‌.ಅಶೋಕ್‌ ನೇತೃತ್ವದ ಈ ಯಾತ್ರೆಯಲ್ಲಿ ಸಚಿ​ವ​ರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌, ಎಸ್‌.ಟಿ.ಸೋಮಶೇಖರ್‌, ಡಾ.ಕೆ.ಸುಧಾಕರ್‌, ಮುನಿರತ್ನ, ಎಂ.ಟಿ.ಬಿ.ನಾಗರಾಜ್‌, ಬಿ.ಸಿ. ನಾಗೇಶ್‌, ಜೆ.ಸಿ.ಮಾಧುಸ್ವಾಮಿ, ಎ. ನಾರಾಯಣ ಸ್ವಾಮಿ, ಶಾಸ​ಕ​ರಾದ ಪಿ.ಸಿ.ಮೋಹನ್‌, ಪೂರ್ಣಿಮಾ ಶ್ರೀನಿವಾಸ್‌ ಭಾಗವಹಿಸುವರು.

8 ಸಾವಿರ ಕಿ.ಮೀ. ಸಂಚಾ​ರ:

ರಾಜ್ಯದ ನಾಲ್ಕು ದಿಕ್ಕು​ಗ​ಳಿಂದ ಒಟ್ಟು 25 ದಿನ 8 ಸಾವಿರ ಕಿ.ಮೀ. ಅನ್ನು ಈ ಯಾತ್ರೆ ಕ್ರಮಿ​ಸ​ಲಿದೆ. ಈ ಯಾತ್ರೆ​ಗೆಂದೇ ನಾಲ್ಕು ವಿಶೇಷ ಬಸ್‌ ರೀತಿಯ ವಾಹ​ನ ಸಿದ್ಧ​ಪ​ಡಿ​ಸ​ಲಾ​ಗಿದ್ದು, ಅದ​ರಲ್ಲೇ ನಿಂತು ಭಾಷ​ಣ ಮಾಡಲೂ ವ್ಯವಸ್ಥೆ ಮಾಡ​ಲಾ​ಗಿ​ದೆ. ಯಾತ್ರೆ ವೇಳೆ ಸುಮಾರು 80 ರಾರ‍ಯಲಿ, 75ಕ್ಕೂ ಹೆಚ್ಚು ಸಾರ್ವ​ಜ​ನಿಕ ಸಭೆ​ಗ​ಳನ್ನು ಆಯೋ​ಜಿ​ಸುವ ಗುರಿ ಇದ್ದು, 150 ರೋಡ್‌ ಶೋಗ​ಳನ್ನೂ ಈ ವೇಳೆ ನಡೆ​ಸಲು ಉದ್ದೇ​ಶಿ​ಸ​ಲಾ​ಗಿ​ದೆ.

BS Yadiyurappa: ರಾಜಕೀಯ ನಿವೃತ್ತಿ ಪಡೆದಿಲ್ಲ, ಮನೆಯಲ್ಲಿ ಕೂರಲ್ಲ: ಬಿಎಸ್‌ವೈ

25ರಂದು ಸಮಾ​ರೋ​ಪ:

ರಾಜ್ಯಾ​ದ್ಯಂತ 25 ದಿನ ಸುತ್ತಾಟ ನಡೆ​ಸ​ಲಿ​ರುವ ಈ ಯಾತ್ರೆ​ ಮಾ.25ರಂದು ದಾವಣಗೆರೆಯಲ್ಲಿ ಸಮಾ​ಪ​ನ​ಗೊ​ಳ್ಳ​ಲಿದೆ. ಅಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಪಾಲ್ಗೊ​ಳ್ಳುವ ನಿರೀಕ್ಷೆ ಇದೆ.
ಮಾ.4ರಿಂದ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದಿಂದ ಫಲಾನುಭವಿ ಸಮಾವೇಶ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆದ ಎಲ್ಲಾ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಅವರೊಡನೆ ಸಮಾಲೋಚನೆ ನಡೆಸಿ ಮತ್ತಷ್ಟುಜನಹಿತ ಚಿಂತನೆಗಳನ್ನು ಯೋಜಿಸುವ ಉದ್ದೇಶದಿಂದ ಮಾ.4ರಿಂದ 20ರವರೆಗೆ ಜಿಲ್ಲಾವಾರು ಫಲಾನುಭವಿಗಳ ಸಮಾವೇಶವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಮಾಚ್‌ರ್‍ 4ರಂದು ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಕೇಂದ್ರ ಸರ್ಕಾರದ ರಾಜ್ಯದ ಐವರು ಸಚಿವರು ವಿವಿಧ ಜಿಲ್ಲೆಗಳಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

Latest Videos
Follow Us:
Download App:
  • android
  • ios