Karnataka Election 2023: 25ಕ್ಕೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಕೆ.ವಿರೂಪಾಕ್ಷಪ್ಪ
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಫೆ.25ರಂದು ಮಧ್ಯಾಹ್ನ 2.30 ಗಂಟೆಗೆ ತಾಲೂಕಿನ ಹೊಸಳ್ಳಿ ಇಜೆ ಕ್ಯಾಂಪಿನ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪೆಕ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.
ಸಿಂಧನೂರು (ಫೆ.23) : ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಫೆ.25ರಂದು ಮಧ್ಯಾಹ್ನ 2.30 ಗಂಟೆಗೆ ತಾಲೂಕಿನ ಹೊಸಳ್ಳಿ ಇಜೆ ಕ್ಯಾಂಪಿನ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪೆಕ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ(K Virupakshappa) ಹೇಳಿದರು.
ಈ ಸಂಬಂಧ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್(Nalin Kumar Kateel) ಅಂದು ಮಧ್ಯಾಹ್ನ ಸಿಂಧನೂರಿನ ಸಕ್ರ್ಯೂಟ್ ಹೌಸ್(Circuit House)ಗೆ ಬರಲಿದ್ದಾರೆ. ತದನಂತರ ಕಮ್ಮವಾರಿ ಭವನದಲ್ಲಿ ವಿಜಯ ಸಂಕಲ್ಪ ಯಾತ್ರೆ,(Vijaya sankalpa yatre) ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ ಮತ್ತು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ ಹಾಗೂ ಅವರ ಬಳಗದವರು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿಸಿದರು.
ಈಶ್ವರಪ್ಪ ರಾಜಕೀಯ ಬಿಟ್ಟು ಭವಿಷ್ಯ ಹೇಳಲಿ, ಗಿಳಿ ಪಂಚಾಂಗ ಗಿಫ್ಟ್ ಕೋಡಿಸುತ್ತೇನೆ: ಕೈ ನಾಯಕಿ ನಾಗವೇಣಿ ಪಾಟೀಲ್
ಮಾ.10ರ ಸಂಜೆ ಸಿಂಧನೂರಿಗೆ ಬಿಜೆಪಿ ರಥಯಾತ್ರೆ ಬರಲಿದೆ. 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai), ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yadiyurappa) ಹಾಗೂ ಕೆಲ ಸಚಿವರ ನೇತೃತ್ವದೊಂದಿಗೆ ಎಪಿಎಂಸಿ ಗಣೇಶ ದೇವಸ್ಥಾನ(APMC Ganesh temple)ದಿಂದ ಬಿಜೆಪಿ ರಥಯಾತ್ರೆ ಆರಂಭಗೊಂಡು ಬಸವೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತ, ಕನಕದಾಸ ವೃತ್ತ, ಹಿರೇಹಳ್ಳ ಸೇತುವೆ ಮೂಲಕ ಪಿಡಬ್ಲ್ಯೂಡಿ ಕ್ಯಾಂಪ್ ಗಡಿಯವರೆಗೆ ಸಾಗಲಿದೆ ಎಂದರು.
ನಂತರ ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ, ಮುಖಂಡ ರಾಜೇಶ ಹಿರೇಮಠ ಮಾತನಾಡಿದರು.
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಪೈಪೋಟಿ, ಬಿಜೆಪಿ ಸೋಲಿಸಲು ಜೆಡಿಎಸ್ - ಕಾಂಗ್ರೆಸ್ ರಣತಂತ್ರ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜ್ ಆಚಾರ್, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಹನುಮೇಶ ಸಾಲಗುಂದಾ, ನಗರ ಘಟಕದ ಅಧ್ಯಕ್ಷ ನಿರುಪಾದೆಪ್ಪ ಜೋಳದರಾಶಿ ವಕೀಲ, ಮುಖಂಡರಾದ ಈರೇಶ ಇಲ್ಲೂರು, ವೆಂಕನಗೌಡ ಮಲ್ಕಾಪುರ, ಶಿವರಾಜ ಪಾಟೀಲ್ ಬಸಾಪುರ, ಪ್ರೇಮಾ ಸಿದ್ದಾಂತಿಮಠ, ಸಹನಾ ಹಿರೇಮಠ, ಪರಮೇಶಪ್ಪ ಇದ್ದರು.