ಮಂಡ್ಯದಲ್ಲಿ ವಿಜಯೇಂದ್ರಗೆ ಅದ್ಧೂರಿ ಸ್ವಾಗತ: ಹಳ್ಳಿಕಾರ್‌ ತಳಿ ಹೋರಿ ಗಿಫ್ಟ್‌ ಕೊಟ್ಟ ಅಭಿಮಾನಿ

ಮಂಡ್ಯ ತಾಲೂಕಿನ ಮಾಚಹಳ್ಳಿಗೆ ಮೊದಲ ಬಾರಿಗೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ರಾಜ್ಯಾ​ಧ್ಯಕ್ಷ ಬಿ.ವೈ.​ವಿ​ಜ​ಯೇಂದ್ರ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದರು.

BJP Vice President BY Vijayendra Visit Mandya gvd

ಮಂಡ್ಯ (ಫೆ.22): ಮಂಡ್ಯ ತಾಲೂಕಿನ ಮಾಚಹಳ್ಳಿಗೆ ಮೊದಲ ಬಾರಿಗೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ರಾಜ್ಯಾ​ಧ್ಯಕ್ಷ ಬಿ.ವೈ.​ವಿ​ಜ​ಯೇಂದ್ರ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದರು. ವಿಜಯೇಂದ್ರ ಆಗಮಿಸುತ್ತಿದ್ದಂತೆ ಕ್ರೇನ್‌ ಮೂಲಕ ಬೃಹತ್‌ ಕಬ್ಬಿನ ಹಾರ ಹಾಕಿ, ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ನೀಡ​ಲಾ​ಯಿ​ತು. ವಿಜ​ಯೇಂದ್ರ ಆಗ​ಮ​ನದ ಹಿನ್ನೆ​ಲೆ​ಯಲ್ಲಿ ಸಾವಿ​ರಾರು ಮಂದಿ ಅಭಿ​ಮಾ​ನಿ​ಗಳು ಸೇರಿದ್ದು, ಹೂಹಾರ ಹಾಕಿ ಸಂಭ್ರ​ಮಿ​ಸಿ​ದರು. ಇದೇ ವೇಳೆ ಮುಂದಿನ ಮುಖ್ಯ​ಮಂತ್ರಿ ವಿಜ​ಯೇಂದ್ರ ಎಂಬ ಘೋಷ​ಣೆ​ಗಳೂ ಮೊಳ​ಗಿ​ದ​ವು.

ಇದೇ ವೇಳೆ ವಿಜ​ಯೇಂದ್ರ ಅವ​ರಿಗೆ ಅಭಿಮಾನಿಯೊಬ್ಬ ಹಳ್ಳಿಕಾರ್‌ ತಳಿಯ ಹೋರಿಯೊಂದನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು. ಮಾಚಹಳ್ಳಿಯ ಸ್ವಾಮಿ ಎಂಬ​ವರು ಈ ಉಡುಗೊರೆ ನೀಡಿದ್ದು, ಅದನ್ನು ವಿಜ​ಯೇಂದ್ರ ಖುಷಿಯಿಂದಲೇ ಸ್ವೀಕರಿಸಿದರು. ಬಳಿಕ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಈ ಊರಿಗೆ ಮೊದಲ ಬಾರಿಗೆ ಬಂದಿದ್ದೇನೆ. ಮೊದಲ ಆಗಮನದಲ್ಲೇ ಅದ್ಧೂರಿ ಸ್ವಾಗತ ನೀಡಿದ್ದೀರಿ. ರಾಜ್ಯದಲ್ಲಿ ಎಲ್ಲೇ ಹೋದರೂ ನನ್ನನ್ನು ನಮ್ಮ ಯಡಿಯೂರಪ್ಪನವರ ಮಗ ಎಂದು ಪ್ರೀತಿಸುತ್ತಾರೆ. 

ಗೆಲ್ಸಿದ ಆನೆ ಕಾಡಿಗಟ್ಟಿ ಸ್ವಾರ್ಥಕ್ಕೆ ಕಮಲ ಹಿಡಿದ ಮಹೇಶ್‌: ಡಿ.ಕೆ.ಶಿವಕುಮಾರ್‌

ಹೃದಯದಿಂದ ಗೌರವಿಸುತ್ತಾರೆ. ನಾಡಿನ ತಾಯಂದಿರ ಆಶೀರ್ವಾದದ ಮುದೆ ಬೇರಾವ ಸ್ಥಾನಮಾನವೂ ನನಗೆ ಬೇಕಿಲ್ಲ. ನನಗೆ ಯಾವುದೇ ಸ್ಥಾನಮಾನ ಕೊಟ್ಟಿಲ್ಲವೆಂದು ಮಾಧ್ಯಮದವರು ಸದಾ ಕೇಳುತ್ತಿರುತ್ತಾರೆ. ಆದ​ರೆ ನಮ್ಮ ತಂದೆಯವರ ರಾಜಕೀಯ ಜೀವನ ಹತ್ತಿರದಿಂದ ಕಂಡಿದ್ದೇನೆ. ನಾಡಿನ ತಾಯಂದಿರ ಆಶೀರ್ವಾದ ನನಗೆ ಮುಖ್ಯ. ಅದರ ಮುಂದೆ ಬೇರಾವ ಸ್ಥಾನ-ಮಾನವೂ ನನಗೆ ಬೇಕಿಲ್ಲ ಎಂದರು.

ಕನ್ನಡ ನಾಡು ಅತೀ ಹೆಚ್ಚು ದಾರ್ಶ​ನಿ​ಕ​ರನ್ನು ಕೊಟ್ಟಿದೆ. ಶಿವಕುಮಾರ ಶ್ರೀಗಳು ಈ ಗ್ರಾಮಕ್ಕೆ ಮೂರು ಸಲ ಬಂದಿದ್ದಾರೆ. ಈ ಭೂಮಿಗೆ ವಿಶೇಷ ಶಕ್ತಿ ಇದೆ. ನಮ್ಮ ತಂದೆ 4 ಬಾರಿ ಮುಖ್ಯಮಂತ್ರಿ ಆಗಿದ್ದರು. ಯೋಧ​ನಂತೆ ರೈತ ದೇಶದ ಮತ್ತೊಬ್ಬ ಕಣ್ಣು ಎಂದು ಅನ್ನ​ದಾ​ತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಪ್ರತ್ಯೇಕ ಬಜೆಟ್‌ ಮಂಡಿಸಿದ್ದರು. ಅಂಥ ಪುಣ್ಯಾತ್ಮನಿಗೆ ಜನ್ಮಕೊಟ್ಟಜಿಲ್ಲೆ ಮಂಡ್ಯ ಎಂದು ಬಣ್ಣಿಸಿದರು.

ನನ್ನ ಗೆಲುವಲ್ಲಿ ಬಿಎಸ್‌ವೈ, ವಿಜ​ಯೇಂದ್ರ ಶ್ರಮ ಅಪಾರ: ಸಚಿವ ಕೆ.ಸಿ.ನಾರಾಯಣಗೌಡ

ಇಂದಿನ ದಿನಗಳಲ್ಲಿ ಗ್ರಾಪಂ ಸದಸ್ಯ ಕೂಡ ಇವತ್ತು ರಾಜೀನಾಮೆ ಕೊಡಲು ನೂರು ಸಲ ಯೋಚನೆ ಮಾಡುತ್ತಾನೆ. ನಾರಾಯಣಗೌಡರು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಬೇರೆ ಪಕ್ಷದ ನಾಯಕನ ಬಗ್ಗೆ ವಿಶ್ವಾಸ ಇಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ನಮ್ಮ ರಾಜ್ಯದಲ್ಲೇ ನಾರಾಯಣಗೌಡರೇ ಮೊದಲು ಎಂದು ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ​ರು.

Latest Videos
Follow Us:
Download App:
  • android
  • ios