Asianet Suvarna News Asianet Suvarna News

ಬಿಜೆಪಿ ಅಸ​ಮಾ​ಧಾ​ನಿ​ತರಿಗೆ ಊಟ ಹಾ​ಕ್ಸೋದೇ ಕಾಂಗ್ರೆ​ಸ್‌ ಕೆಲ​ಸ: ವಿಜ​ಯೇಂದ್ರ

ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕೇವಲ ಸಚಿವರಿಗೆ ಹೊಸ ಕಾರ್‌ ಖರೀದಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಬರಗಾಲ ಹಿನ್ನಲೆಯಲ್ಲಿ ರೈತರು ಬೀದಿ​ಗಿ​ಳಿ​ದಿ​ದ್ದಾ​ರೆ. ಕಂದಾಯ ಸಚಿವರು ಬರ ಘೋಷಣೆ ಮಾಡದೆ ಕಾಲಹರಣ ಮಾಡು​ತ್ತಿ​ದ್ದಾರೆ: ಶಾಸಕ ಬಿ.ವೈ.​ವಿ​ಜ​ಯೇಂದ್ರ 

BJP Vice President BY Vijayendra Slams Congress grg
Author
First Published Sep 11, 2023, 2:30 AM IST

ಶಿವಮೊಗ್ಗ(ಸೆ.11): ಬಿಜೆಪಿ ನಾಯಕರು ಮತ್ತು ಮಾಜಿ ಶಾಸಕರು, ಅಸಮಾಧಾನಿತರನ್ನು ಕರೆದು ಊಟ ಹಾಕಿಸುವುದೇ ಕಾಂಗ್ರೆಸ್‌ಗೆ ಒಂದು ಕೆಲಸ ಆಗಿದೆ. ಕಾಂಗ್ರೆಸ್‌ ಪಕ್ಷ ಸೇರ್ಪಡೆ ಮಾಡ​ಲೆಂದೇ ಮುಖ್ಯ​ಮಂತ್ರಿ ಸಿದ್ದರಾಮಯ್ಯ ಅವರು ಒಂದು ಖಾತೆ ಸೃಷ್ಟಿಮಾಡಲಿ, ಈ ಖಾತೆ ಜವಾಬ್ದಾರಿಯನ್ನು ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ನೀಡಲಿ ಎಂದು ರಾಜ್ಯ ಬಿಜೆಪಿ ಉಪಾ​ಧ್ಯಕ್ಷ, ಶಾಸಕ ಬಿ.ವೈ.​ವಿ​ಜ​ಯೇಂದ್ರ ಹೇಳಿ​ದ​ರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕೇವಲ ಸಚಿವರಿಗೆ ಹೊಸ ಕಾರ್‌ ಖರೀದಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಬರಗಾಲ ಹಿನ್ನಲೆಯಲ್ಲಿ ರೈತರು ಬೀದಿ​ಗಿ​ಳಿ​ದಿ​ದ್ದಾ​ರೆ. ಕಂದಾಯ ಸಚಿವರು ಬರ ಘೋಷಣೆ ಮಾಡದೆ ಕಾಲಹರಣ ಮಾಡು​ತ್ತಿ​ದ್ದಾರೆ. ಗ್ಯಾರಂಟಿ ಜಾತ್ರೆಯಲ್ಲಿ ಮುಳುಗಿಹೋಗಿರುವ ರಾಜ್ಯ ಸರ್ಕಾರ ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದರು. ಕಾರ್ಯಕರ್ತರು ನಾನೇ ರಾಜ್ಯಾಧ್ಯಕ್ಷನಾಗಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಾನು ಶಾಸಕ ಸ್ಥಾನಕ್ಕೆ ಸಂತೃಪ್ತಿ ಆಗಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.

ಉದಯನಿಧಿ ಹಿಂದೂ ಧರ್ಮವನ್ನು ವಿರೋಧಿಸುವ ತಲೆಕೆಟ್ಟ ರಾಜಕಾರಣಿ: ಸಂಸದ ರಾಘವೇಂದ್ರ

ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸುವ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಎಲ್ಲ ಜಾತಿ-ಜನಾಂಗದವರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಈ ಹಿಂದಿನ ಚುನಾವಣೆ ವೇಳೆ ಗ್ಯಾರಂಟಿ ಹೆಸರಿನಲ್ಲಿ ಪ್ರಚಾರ ನಡೆಸಿದರು. ಈ ಬಾರಿ ಜಾತಿ ಹೆಸರಿನಲ್ಲಿ ಪ್ರಚಾರ ನಡೆಸಲು ಮುಂದಾಗಿದ್ದಾರೆ ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios