ದಿಢೀರ್ ದಿಲ್ಲಿಗೆ ಹಾರಿದ ವಿಜಯೇಂದ್ರ: ಕಾರಣ ಇದೇ ಆಗಿರಬಹುದಾ..?
* ಆಪ್ತರ ಜೊತೆ ದೆಹಲಿಯಲ್ಲಿ ಬೀಡುಬಿಟ್ಟಿ ಬಿ.ವೈ. ವಿಜಯೇಂದ್ರ
* ಹೈಕಮಾಂಡ್ ನಾಯಕರುಗಳನ್ನ ಭೇಟಿ ಮಾಡಲಿರುವ ವಿಜಯೇಂದ್ರ
* ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ದೂರು ನೀಡುವ ಸಾಧ್ಯತೆ
ಬೆಂಗಳೂರು, (ಜೂನ್.01): ರಾಜ್ಯ ಬಿಜೆಪಿ ಉಪಾಧ್ಯಕ್ಷ, ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಇಂದು (ಮಂಗಳವಾರ) ದಿಢೀರನೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ತಮ್ಮ ಆಪ್ತರೊಂದಿಗೆ ವಿಜಯೇಂದ್ರ ದೆಹಲಿಗೆ ತೆರಳಿದ್ದು, ತೀವ್ರ ಕುತೂಹಲ ಮೂಡಿಸಿದೆ.
'ಸೈನಿಕ'ನ ವಿರುದ್ಧ ಮುಗಿಬಿದ್ದ ಕೇಸರಿ ಮಿತ್ರರು, ಅಖಾಡಕ್ಕೆ ಬಾ ನೋಡ್ಕೋತೀನಿ ಎಂದ ರೇಣುಕಾಚಾರ್ಯ
ಇತ್ತೀಚೆಗಷ್ಟೇ ಸಚಿವ ಸಿ.ಪಿ ಯೋಗೇಶ್ವರ್ ದೆಹಲಿಗೆ ಹೋಗಿ ಬಂದ ಬೆನ್ನಲ್ಲೇ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಇದು ಕೆಲ ದಿನಗಳ ಕಾಲ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೂ ಗ್ರಾಸವಾಗಿತ್ತು. ಅಲ್ಲದೇ ಮೂರು ಪಕ್ಷಗಳ ಸರ್ಕಾರ ಅಂತ ಯೋಗೇಶ್ವರ್ ಹೇಳಿ ಪದೇ ಪದೇ ಬಿಜೆಪಿಗೆ ಇರುಸುಮುರುಸು ಉಂಟು ಮಾಡಿದ್ದರು.
ಇದೀಗ ವಿಜಯೇಂದ್ರ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರಣ್ ಸಿಂಗ್ ಸೇರಿದಂತೆ ಇತರೆ ನಾಯಕರುಗಳನ್ನ ಭೇಟಿ ಮಾಡಿ ಯೋಗೇಶ್ವರ್ ವಿರುದ್ಧ ದೂರು ನೀಡುವ ಸಾಧ್ಯತೆಗಳಿವೆ.
ಸಿ.ಪಿ.ಯೋಗೇಶ್ವರ್ ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಬಗ್ಗೆ ವಿಜಯೇಂದ್ರ ಅವರು ಹೈಕಮಾಂಡ್‌ಗೆ ದೂರಿನ ಪಟ್ಟಿ ನೀಡುವ ಸಲುವಾಗಿ ದಿಲ್ಲಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ತಮ್ಮ ತಂದೆ ವಿರುದ್ಧ ಸಿಡಿದೆದ್ದಿರುವ ಸಿ.ಪಿ.ಯೋಗೇಶ್ವರ್ ಅವರನ್ನ ಹೈಕಮಾಂಡ್ ಮೂಲಕವೇ ಕಟ್ಟಿಹಾಕಲು ವಿಜಯೇಂದ್ರ ಗೇಮ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.