ತಾವು ಮೂರು ಬಾರಿ ಪ್ರತಿನಿಧಿಸಿದ್ದ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರವನ್ನು ತೊರೆದು ಈ ಬಾರಿ ತಮ್ಮ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾದ ರಾಯ್‌ಬರೇಲಿ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದರು. ಅಲ್ಲಿಯೂ ಸಹ ಬಿಜೆಪಿಯ ರಾಜ್ಯ ಸಚಿವ ದಿನೇಶ್‌ ಪ್ರತಾಪ್‌ ಸಿಂಗ್ ವಿರುದ್ಧ 2.5 ಲಕ್ಷಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ. 

ನವದೆಹಲಿ(ಜೂ.05): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ಬಾರಿ ಡಬಲ್‌ ಧಮಾಕಾ ಹೊಡೆದಿದ್ದು, ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕೇರಳದ ವಯನಾಡಿನ ಹಾಲಿ ಸಂಸದರಾಗಿರುವ ರಾಹುಲ್‌ ಗಾಂಧಿ ಕಳೆದ ಬಾರಿಯಂತೆ ಈ ಬಾರಿಯೂ ಸಹ 3.64 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರೆ ರಾಯ್‌ಬರೇಲಿಯಲ್ಲಿ ತಮ್ಮ ತಾಯಿಯ ಗೆಲವಿನ ಅಂತರಕ್ಕಿಂತಲೂ ಹೆಚ್ಚಿನ ಅಂತರದಲ್ಲಿ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ವಯನಾಡಿನಲ್ಲಿ, ಸಿಪಿಐನ ಆ್ಯನ್ನಿ ರಾಜಾ ವಿರುದ್ಧ ರಾಹುಲ್‌ 3,64,422 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ.

ಇಡೀ ಚುನಾವಣೆ ತುಂಬ ಕರ್ನಾಟಕ ಮುಸ್ಲಿಂ ಮೀಸಲು ಸದ್ದು..!

ಇನ್ನೊಂದೆಡೆ ತಾವು ಮೂರು ಬಾರಿ ಪ್ರತಿನಿಧಿಸಿದ್ದ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರವನ್ನು ತೊರೆದು ಈ ಬಾರಿ ತಮ್ಮ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾದ ರಾಯ್‌ಬರೇಲಿ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದರು. ಅಲ್ಲಿಯೂ ಸಹ ಬಿಜೆಪಿಯ ರಾಜ್ಯ ಸಚಿವ ದಿನೇಶ್‌ ಪ್ರತಾಪ್‌ ಸಿಂಗ್ ವಿರುದ್ಧ 2.5 ಲಕ್ಷಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ.

2019

ಕಾಂಗ್ರೆಸ್‌ ರಾಹುಲ್‌ ಗಾಂಧಿ 7,06,367 64.8%
ಸಿಪಿಐ ಪಿ .ಪಿ. ಸುನೀರ್ 2,74,597 25.1%
ಬಿಡಿಜೆಎಸ್‌ ತುಷಾರ್ ವೆಲ್ಲಪಲ್ಲಿ 78,816 7.2%

2024

ಕಾಂಗ್ರೆಸ್‌ ರಾಹುಲ್‌ ಗಾಂಧಿ 6,47,445 59.69%
ಸಿಪಿಐ ಆ್ಯನಿ ರಾಜಾ 2,83,023 26.09%
ಬಿಜೆಪಿ ಸುರೇಂದ್ರನ್‌ 1,41,045 13%